ಮೈದಾನವಿಲ್ಲದೆ ಹೆಲಿಪ್ಯಾಡ್‌ನಲ್ಲಿ ಹಾಕಿ ತರಬೇತಿ: 9 ಬಾಲಕಿಯರು ತರಬೇತಿ ಶಿಬಿರಕ್ಕೆ ಆಯ್ಕೆ

ಛತ್ತೀಸ್ ಗಢದ ನಕ್ಸಲ್ ಪ್ರೀಡಿತ ಪ್ರದೇಶದಲ್ಲಿ ಸರಿಯಾದ ಯಾವುದೇ ಮೂಲಭೂತ ಸೌಕರ್ಯಗಳಿಲ್ಲದೆ, ಮೈದಾನವೂ ಇಲ್ಲದೆ ಹೆಲಿಪ್ಯಾಡ್‌ನಲ್ಲಿ ತರಬೇತಿ ಪಡೆದಿದ್ದ 9 ಬಾಲಕಿಯರು ರಾಷ್ಟ್ರೀಯ ಕಿರಿಯರ ಹಾಕಿ ತರಬೇತಿ ಶಿಬಿರಕ್ಕೆ ಆಯ್ಕೆಯಾಗಿದ್ದಾರೆ.
ಕೊಂಡಗಾಂವ್ ಜಿಲ್ಲೆಯಲ್ಲಿ ಮಾವೋವಾದಿ ವಿರೋಧಿ ಕಾರ್ಯಾಚರಣೆಗಾಗಿ ನಿಯೋಜಿಸಲಾಗಿರುವ ಅರೆಸೈನಿಕ ಪಡೆ ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲಿಸ್ (ಐಟಿಬಿಪಿ) 14 ರಿಂದ 17 ವರ್ಷದೊಳಗಿನ ಬಾಲಕಿಯರಿಗೆ ತರಬೇತಿ ನೀಡಿದೆ.
41 ನೇ ಬೆಟಾಲಿಯನ್ ನಡೆಸುತ್ತಿರುವ ಐಟಿಬಿಪಿ ಅಕಾಡೆಮಿಯಲ್ಲಿ ಹಾಕಿ ತರಬೇತಿಯನ್ನು ಪ್ರಾರಂಭಿಸಿದ ಒಂಬತ್ತು ಬುಡಕಟ್ಟು ಬಾಲಕಿಯರು ಹಾಕಿ ಇಂಡಿಯಾ ಉಪ ಜ್ಯೂನಿಯರ್ ಮತ್ತು ಕಿರಿಯರ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಆಯ್ಕೆಯಾಗಿದ್ದಾರೆ ಎಂದು ಹಿರಿಯ ಐಟಿಬಿಪಿ ಅಧಿಕಾರಿಯೊಬ್ಬರು ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಮಾರ್ದಪಾಲ್ ಪ್ರದೇಶದ ಕನ್ಯಾ ಆಶ್ರಮದಲ್ಲಿ ವ್ಯಾಸಂಗ ಮಾಡುತ್ತಿರುವ ಈ ಬಾಲಕಿಯರಿಗೆ 2016ರಲ್ಲಿ ಪಂದ್ಯದ ಬಗ್ಗೆ ಬಲವಂತದಿಂದ ಪ್ರೋತ್ಸಾಹಿಸಲಾಯಿತು. ಈ ತಿಂಗಳ ನಂತರ ತರಬೇತಿ ಆರಂಭವಾಗಲಿದೆ. ಇತ್ತೀಚಿಗೆ ಹಾಕಿ ಇಂಡಿಯಾದಿಂದ ಈ ಬಾಲಕಿಯರಿಗೆ ಶಾಶ್ವತವಾದ ಗುರುತಿನ ಚೀಟಿಯನ್ನು ವಿತರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications