ಏಷ್ಯಾಕಪ್ ಹಾಕಿ : ಪಾಕಿಸ್ತಾನ ವಿರುದ್ಧ ಭಾರತಕ್ಕೆ ಭರ್ಜರಿ ಜಯ
ಢಾಕಾ, ಅಕ್ಟೋಬರ್ 16: 10ನೇ ಪುರುಷರ ಏಷ್ಯಾಕಪ್ ಹಾಕಿ ಟೂರ್ನಿಯ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ನಡೆದ ಪಂದ್ಯದಲ್ಲಿ ಭಾರತ ಭರ್ಜರಿ ಜಯ ದಾಖಲಿಸಿದೆ.
ಭಾನುವಾರ ರಾತ್ರಿ ನಡೆದ ಪಂದ್ಯದಲ್ಲಿ ಮನ್‌ಪ್ರೀತ್ ಸಿಂಗ್ ತಂಡವು ಪಾಕಿಸ್ತಾನ ವಿರುದ್ಧ 3-1ರಿಂದ ಗೆದ್ದು 'ಎ' ವಿಭಾಗದ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಭಾರತ ತನ್ನ ಮೊದಲ ಪಂದ್ಯದಲ್ಲಿ ಜಪಾನ್ ವಿರುದ್ಧ 5-1ರಿಂದ ಗೆಲುವು ಸಾಧಿಸಿತ್ತು. ಆತಿಥೇಯ ಬಾಂಗ್ಲಾದೇಶವನ್ನು 0-7 ಅಂತರದಲ್ಲಿ ಸೋಲಿಸಿದ ಭಾರತ ತನ್ನ ಗೆಲುವಿನ ನಾಗಾಲೋಟ ಮುಂದುವರೆಸಿದೆ.

ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತದ ಪರ 17ನೇ ನಿಮಿಷದಲ್ಲಿ ಚಿಂಗ್ಲೆನ್‌ಸನಾ ಸಿಂಗ್,44ನೇ ನಿಮಿಷದಲ್ಲಿ ರಮಣ್ ದೀಪ್ ಸಿಂಗ್ ಹಾಗೂ 45ನೇ ನಿಮಿಷದಲ್ಲಿ ಹರ್ಮನ್ ಪ್ರೀತ್ ಸಿಂಗ್ ಅವರು ಗೋಲು ಗಳಿಸಿದರು. ಪಾಕಿಸ್ತಾನ ಪರ ಅಲಿಶಾನ್ 49ನೇ ನಿಮಿಷದಲ್ಲಿ ಗೋಲು ಬಾರಿಸಿದರು.
ರೌಂಡ್ ರಾಬಿನ್ ಸೂಪರ್ 4 ಮಾದರಿಯ ಟೂರ್ನಮೆಂಟ್ ನಲ್ಲಿ ಪಾಕಿಸ್ತಾನ ಎರಡನೇ ಸ್ಥಾನದಲ್ಲಿದ್ದು, ಈ ಪಂದ್ಯದಲ್ಲಿ ಸೋತರೂ ಪಾಕಿಸ್ತಾನ ಕೂಡಾ ಮುಂದಿನ ಹಂತ ತಲುಪಿದೆ.(ಪಿಟಿಐ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications