For Quick Alerts
ALLOW NOTIFICATIONS  
For Daily Alerts

ಏಷ್ಯನ್ ಚಾಂಪಿಯನ್ ಟ್ರೋಫಿ ಫೈನಲ್: ಟ್ರೋಫಿ ಮುಡಿಗೇರಿಸಿಕೊಳ್ಳಲು ಭಾರತ ಹಾಗೂ ಮಲೇಷ್ಯಾ ಸೆಣೆಸಾಟ

ಏಷ್ಯನ್ ಚಾಂಪಿಯನ್ ಟ್ರೋಫಿ ಹಾಕಿ ಟೂರ್ನಿಯಲ್ಲಿ ಭಾರತ ತಂಡದ ಪ್ರದರ್ಶನ ಹಾಕಿ ಅಭಿಮಾನಿಗಳ ಸಂತೃಪ್ತಿಪಡಿಸಿದೆ. ಸೆಮಿಫೈನಲ್‌ನಲ್ಲಿ ಜಪಾನ್ ವಿರುದ್ಧ 5-0 ಅಂತರದಿಂದ ಅಮೋಘ ಗೆಲುವು ಸಾಧಿಸಿರುವ ಭಾರತ ಈ ಟೂರ್ನಿ ಫೈನಲ್‌ಗೆ ಪ್ರವೇಶ ಪಡೆದುಕೊಂಡಿದೆ. ಫೈನಲ್ ಪಂದ್ಯದಲ್ಲಿ ಮಲೇಷ್ಯಾ ತಂಡವನ್ನು ಎದುರಿಸಲು ಭಾರತ ಸಜ್ಜಾಗಿದ್ದು ಚಾಂಪಿಯನ್ ಪಟ್ಟದ ಮೇಲೆ ಕಣ್ಣಿಟ್ಟಿದೆ.

ಭಾರತ ಈ ಟೂರ್ನಿಯಲ್ಲಿ ಈವರೆಗೆ ಸಂಪೂರ್ಣವಾಗಿ ಅಧಿಪತ್ಯ ಸಾಧಿಸಿದೆ. ಫೈನಲ್‌ನಲ್ಲಿ ಎದುರಾಳಿಯಾಗಿರುವ ಮಲೇಷ್ಯಾ ತಂಡವನ್ನು ಲೀಗ್ ಹಂತದಲ್ಲಿ ಭರ್ಜರಿ 5-0 ಅಂತರದಿಂದ ಸೋಲಿಸುವುದು ಸೇರಿದಂತೆ ಪ್ರತಿ ಎದುರಾಲಿಯ ವಿರುದ್ಧವೂ ಸಂಪೂರ್ಣ ಮೇಲುಗೈ ಸಾಧಿಸಿಕೊಂಡು ಬಂದಿದೆ. ಹೀಗಾಗಿ ಫೈನಲ್ ಪಂದ್ಯದಲ್ಲಿ ಭಾರತ ಗೆಲುವು ನಿಶ್ಚಿತ ಎನ್ನುವುದು ಅಭಿಮಾನಿಗಳ ವಿಶ್ವಾಸ.

Asian Champion Trophy 2023 final: India and Malaysia fight for title

ಟೂರ್ನಿಯಲ್ಲಿ ಭಾರತ ತಂಡ ಹಿನ್ನಡೆಯನ್ನು ಕಂಡಿದ್ದು ಜಪಾನ್ ವಿರುದ್ಧ ಲೀಗ್ ಪಂದ್ಯದಲ್ಲಿ ಮಾತ್ರ. ಆ ಪಂದ್ಯದಲ್ಲಿ ಭಾರತ 1-1 ಅಂತರದ ಡ್ರಾ ಸಾಧಿಸಲು ಮಾತ್ರವೇ ಯಶಸ್ವಿಯಾಗಿತ್ತು. ಅಲ್ಲದೆ ಈ ಪಂದ್ಯದಲ್ಲಿ ಪೆನಾಲ್ಟಿ ಕಾರ್ನ್ ಅವಕಾಶವನ್ನು ಗೋಲಾಗಿ ಪರಿವರ್ತಿಸುವಲ್ಲಿ ಭಾರತ ಸಂಪೂರ್ಣ ಎಡವಿದ್ದು ಕಳವಳ ಮೂಡಿಸಿತ್ತು. 15 ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಒಂದನ್ನು ಮಾತ್ರವೇ ಗೋಲಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾಗಿತ್ತು. ಇದು ನಂತರದ ಮಲೇಷ್ಯಾ ವಿರುದ್ಧದ ಪಂದ್ಯದಲ್ಲಿಯೂ ಮುಂದುವರಿದಿತ್ತು. ಆ ಪಂದ್ಯದಲ್ಲಿ 10 ಅವಕಾಶದಲ್ಲಿ 2 ಮಾತ್ರವೇ ಗೋಲಾಗಿ ಪರಿವರ್ತನೆಗೊಂಡಿತ್ತು.

ಈ ವಿಚಾರವಾಗಿ ಸ್ವತಃ ಕೋಚ್ ಕ್ರೇಗ್ ಫುಲ್ಟನ್ ಮಾತನಾಡಿ ಇದು ಹೀಗೆಯೇ ಮುಂದುವರಿಯಲಾರದು, ಕೆಲವೊಂದು ಕೆಟ್ಟ ದಿನಗಳಲ್ಲಿ ಮಾತ್ರವೇ ಹೀಗಾಗುತ್ತದೆ ಎಂದಿದ್ದರು. ಸಕಾರಾತ್ಮಕ ಅಂಶವೆಂದರೆ ಅದಾದ ಬಳಿಕ ಭಾರತದ ಅದರಲ್ಲಿ ಮೇಲುಗೈ ಸಾಧಿಸುವಲ್ಲಿಯೂ ಯಶಸ್ವಿಯಾಯಿತು.

ಜಪಾನ್ ವಿರುದ್ಧದ ಪಂದ್ಯದ ಬಳಿಕ ಭಾರತದ ಪ್ರದರ್ಶನದಲ್ಲಿ ಸಾಕಷ್ಟು ಸಕಾರಾತ್ಮಕ ಬದಲಾವಣೆ ಕಂಡಿದೆ. ಅಲ್ಲದೆ ಇದೇ ಸಂದರ್ಭದಲ್ಲಿ ನಾಯಕ ಹರ್ಮನ್‌ಪ್ರೀತ್ ಸಿಂಗ್ ಕೂಡ ಫಾರ್ಮ್‌ಗೆ ಮರಳಿದ್ದರು. ಸದ್ಯ ಭಾರತ ಸಂಘಟಿತವಾಗಿ ಅದ್ಭುತ ಲಯದಲ್ಲಿದ್ದು ಜಪಾನ್ ವಿರುದ್ಧ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಭಾರತ ನೀಡಿದ ಪ್ರದರ್ಶನ ಇದಕ್ಕೆ ಸಾಕ್ಷಿ. ಎದುರಾಳಿ ಜಪಾನ್ ತಂಡಕ್ಕೆ ಭಾರತ ಯಾವ ಹಂತದಲ್ಲಿಯೂ ಸಣ್ಣ ಅವಕಾಶವನ್ನೂ ನೀಡದರೆ ಸಂಪೂರ್ಣ ಮೇಲುಗೈ ಸಾಧಿಸಿತ್ತು. ಇದರ ಪರಿಣಾಮವಾಗಿ ಭಾರತ ಸೆಮಿಫೈನಲ್‌ನಲ್ಲಿ 5-0 ಅಂತರದಿಂದ ಜಪಾನ್ ತಂಡವನ್ನು ಮಣಿಸುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಫೈನಲ್‌ಗೆ ಪ್ರವೇಶ ಪಡೆದುಕೊಂಡಿದೆ.

ಮತ್ತೊಂದೆಡೆ ಮಲೇಷ್ಯಾ ಕೂಡ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನಿಡಿಕೊಂಡು ಬಂದಿದೆ ಎಂಬುದನ್ನು ಗಮನಿಸಬೇಕಿದೆ. ಸೆಮಿಫೈನಲ್‌ನಲ್ಲಿ ಮಲೇಷ್ಯಾ ಹಾಲಿ ಚಾಂಪಿಯನ್ ದಕ್ಷಿಣ ಕೊರಿಯಾವನ್ನು 6-2 ಅಂತರದಿಂದ ಮಣಿಸಿ ಫೈನಲ್‌ಗೆ ಪ್ರವೇಶಿಸಿದ್ದು ಫೈನಲ್‌ನಲ್ಲಿ ಭಾರತಕ್ಕೆ ಪ್ರಬಲ ಪೈಪೋಟಿ ನೀಡುವ ಸಾಧ್ಯತೆಯಿದೆ.

ಇನ್ನು ಹೆಡ್‌ ಟು ಹೆಡ್ ಅಂಕಾಂಶಗಳನ್ನು ನೋಡುವುದಾದರೆ 2011ರ ಬಳಿಕದ ಈ ಅಂಕಿಅಂಶ ಭಾರತ ಮಲೇಷ್ಯಾ ವಿರುದ್ಧ ಸಾಧಿಸಿರುವ ಮೇಲುಗೈಯನ್ನು ಸ್ಪಷ್ಟವಾಗಿ ತಿಳಿಸುತ್ತದೆ. 15 ಬಾರಿಯ ಮುಖಾಮುಖಿಯಲ್ಲಿ ಭಾರತ 11 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರೆ ಜಪಾನ್ ಎರಡು ಪಂದ್ಯಗಳಲ್ಲಿ ಗೆದ್ದಿದೆ. ಇನ್ನಜ ಎರಡು ಬಾರಿ ಪಂದ್ಯ ಡ್ರಾಗೊಂಡಿದೆ.

Story first published: Saturday, August 12, 2023, 16:45 [IST]
Other articles published on Aug 12, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+