For Quick Alerts
ALLOW NOTIFICATIONS  
For Daily Alerts

ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ: ಬಾಂಗ್ಲಾದೇಶ ವಿರುದ್ಧ 9-0 ಅಂತರದಿಂದ ಗೆದ್ದ ಭಾರತ

Asian champions trophy 2021: India won against Bangladesh by 9-0

ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿ ಕಂಚಿನ ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿದ್ದ ಭಾರತೀಯ ಪುರುಷರ ಹಾಕಿ ತಂಡ ತನ್ನ ಅತ್ಯುತ್ತಮ ಫಾರ್ಮ್‌ಅನ್ನು ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿಯೂ ಮುಂದುವರಿಸಿದೆ. ಈ ಟೂರ್ನಿಯಲ್ಲಿ ಆತಿಥೇಯ ಬಾಂಗ್ಲಾದೇಶ ತಂಡವನ್ನು ಭಾರತ 9-0 ಅಂತರದಿಂದ ಗೆದ್ದು ಬೀಗಿದೆ. ಈ ಮೂಲಕ ಮತ್ತೊಮ್ಮೆ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಿದೆ ಮನ್‌ಪ್ರೀತ್ ಸಿಂಗ್ ಪಡೆ.

ದಿಲ್‌ಪ್ರೀತ್ ಸಿಡಿಸಿದ ಮೂರು ಗೋಲುಗಳು(12ನೇ ನಿಮಿಷ, 22ನೇ ನಿಮಿಷ ಹಾಗೂ 45ನೇ ನಿಮಿಷ) ಹಾಗೂ ಜರ್ಮನ್‌ಪ್ರೀತ್ ಸಿಂಗ್ (33ನೇ ನಿಮಿಷ ಹಾಗೂ 43ನೇ ನಿಮಿಷ)ದಲ್ಲಿ ಪೆನಾಲ್ಟಿ ಕಾರ್ನರ್‌ನಿಂದ ಸಿಡಿಸಿದ ಗೋಲುಗಳಿಂದ ಭಾರತ ಪಂದ್ಯದಲ್ಲಿ ಸಂಪೂರ್ಣವಾದ ಹಿಡಿತ ಸಾಧಿಸಿತ್ತು. ಇಷ್ಟು ಮಾತ್ರವಲ್ಲದೆ ಲಲಿತ್ ಉಪಧ್ಯಾಯ(28ನೇ ನಿಮಿಷ) ಆಕಾಶ್‌ದೀಪ್‌ ಸಿಂಗ್ (54ನೇ ನಿಮಿಷ) ಹಾಗೂ ಹರ್ಮನ್‌ಪ್ರೀತ್ ಸಿಂಗ್ 57ನೇ ನಿಮಿಷದಲ್ಲಿ ಭಾರತದ ಪರವಾಗಿ ಗೋಲು ದಾಖಲಸಿ ಮಿಂಚಿದರು. ಈ ಮೂಲಕ ಭಾರತ ಈ ಪಂದ್ಯದಲ್ಲಿ ಭರ್ಜರಿ 9 ಗೋಲುಗಳನ್ನು ದಾಖಲಿಸಿದೆ.

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಐತಿಹಾಸಿಕ ಸಾಧನೆ ಮಾಡಿದ ಬಳಿಕ ಕಣಕ್ಕಿಳಿದಿರುವ ಮನ್‌ಪ್ರೀತ್ ಸಿಂಗ್ ನೇತೃತ್ವದ ಭಾರತೀಯ ಹಾಕಿ ತಂಡದ ಪರವಾಗಿ ಈ ಟೂರ್ನಿಯಲ್ಲಿ ಕೆಲ ಹೊಸ ಆಟಗಾರರು ಆವಕಾಶ ಪಡೆದಿದ್ದಾರೆ. ಇನ್ನು ಈ ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಭಾರತ ಕೊರೊಯಾ ತಂಡವನ್ನು ಎದುರಿಸಿದ್ದು ಆ ಪಂದ್ಯ 2-2 ಅಂತರದಿಂದ ಡ್ರಾಗೊಂಡಿತ್ತು.

ಭಾರತ ತನ್ನ ಮುಂದಿನ ಪಂದ್ಯವನ್ನು ತನ್ನ ಬದ್ಧ ಎದುರಾಳಿ ಪಾಕಿಸ್ತಾನದ ವಿರುದ್ಧ ಆಡಲಿದ್ದು ಈ ಪಂದ್ಯ ಶುಕ್ರವಾರ ನಡೆಯಲಿದೆ. ಈ ಪಂದ್ಯದ ಮೇಲೆ ಭಾರತೀಯ ಹಾಕಿ ಪ್ರೇಮಿಗಳು ಚಿತ್ತನೆಟ್ಟಿದ್ದಾರೆ.

ಇನ್ನು ಈ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯ ಮೊದಲ ಪಂದ್ಯದಲ್ಲಿ ಕೊರೊಯಾ ವಿರುದ್ಧ ಡ್ರಾ ಸಾಧಿಸಿದ್ದ ಭಾರತ ತಂಡ ಈ ಪಂದ್ಯದಲ್ಲಿ ಸ್ಪಷ್ಟವಾದ ಸಿದ್ಧತೆಯೊಮದಿಗೆ ಕಣಕ್ಕಿಳಿದಿತ್ತು, ಅದಕ್ಕೆ ತಕ್ಕದಾದ ಪ್ರದರ್ಶನವನ್ನು ನಿಡುವಲ್ಲಿಯೂ ಭಾರತ ತಂಡ ಯಶಸ್ವಿಯಾಗಿದೆ. ಮೊದಲ ಎರಡು ಕ್ವಾರ್ಟರ್‌ಗಳಲ್ಲಿಯೇ ಭಾರತ ಪಮದ್ಯದ ಮೇಲೆ ಸಂಪೂರ್ಣವಾದ ಹಿಡಿತವನ್ನು ಸಾಧಿಸುವಲ್ಲಿ ಯಶಸ್ವಿಯಾಗಿತ್ತು. ಸತತವಾಗಿ ಆಕ್ರಮಣಕಾರಿ ಆಟವನ್ನು ಪ್ರದರ್ಶಿಸಿದ ಭಾರತೀಯ ತಂಡ ಎದುರಾಳಿಗೆ ಸ್ವಲ್ಪವೂ ಅವಕಾಶವನ್ನೇ ನೀಡಲಿಲ್ಲ. ಪಂದ್ಯದ ಆರಂಭದಲ್ಲಿಯೇ 8 ಪೆನಾಲ್ಟಿ ಕಾರ್ನರ್ ಅವಕಾಶ ಪಡೆದ ಭಾರತ ಅದರಲ್ಲಿ ಒಂದನ್ನು ಮಾತ್ರವೇ ಗೋಲಾಗಿ ಪರಿವರ್ತಿಸಲು ಯಶಸ್ವಿಯಾಗಿತ್ತು. ಈ ದೃಷ್ಟಿಯಲ್ಲಿ ಬಾಂಗ್ಲಾದೇಶದ ಗೋಲ್‌ಕೀಪರ್ ಅಬು ನಿಪ್ಪನ್ ಅವರ ಪ್ರದರ್ಶನ ಮೆಚ್ಚುಗೆಗೆ ಪಾತ್ರವಾಯಿತು.

ಮೊದಲ 12 ನಿಮಿಷಗಳಲ್ಲಿ ಭಾರತ ಎಂಟು ಪೆನಾಲ್ಟಿ ಕಾರ್ನರ್‌ಗಳನ್ನು ಪಡೆದುಕೊಂಡಿತು ಆದರೆ ಒಲಿಂಪಿಕ್ ಕಂಚಿನ ಪದಕ ವಿಜೇತರು ಎದುರಾಳಿಯ ಭದ್ರಕೋಟೆಯನ್ನು ಭೇದಿಸಲು ವಿಫಲವಾಯಿತು. ಹೀಗಾಗಿ ಬಾಂಗ್ಲಾದೇಶದ ದಿಫೆಂಡಿಂಗ್ ವಿಭಾಗದ ಪ್ರಯತ್ನವನ್ನು ಕಡೆಗಣಿಸುವಂತಿಲ್ಲ. ಆದರೆ ಕೆಲವು ಸೆಕೆಂಡುಗಳ ನಂತರ, ದಿಲ್‌ಪ್ರೀತ್ ಅಂತಿಮವಾಗಿ ವೃತ್ತದ ಹೊರಗಿನಿಂದ ನಾಯಕ ಮನ್‌ಪ್ರೀತ್ ಅವರಿಂದ ಪಾಸ್ ಪಡೆದು ಬಳಿಕ ಫೀಲ್ಡ್ ಸ್ಟ್ರೈಕ್‌ನೊಂದಿಗೆ ಗೋಲು ಗಳಿಸಿ ಭಾರತಕ್ಕೆ ಮುನ್ನಡೆ ನೀಡಿದರು.

ಎರಡನೇ ಕ್ವಾರ್ಟರ್‌ನಲ್ಲಿಯೂ ಭಾರತ ತಂಡದ ಅಬ್ಬರ ಇದೇ ಉತ್ಸಾಹದೊಂದಿಗೆ ಮುಂದಿವರಿದಿತ್ತು. ಈ ಹಂತದಲ್ಲಿ ಬಾಂಗ್ಲಾದೇಶದ ರಕ್ಷಣಾ ವಿಭಾಗದ ವೈಫಲ್ಯವನ್ನು ಬಳಸಿಕೊಂಡ ಭಾರತ ಗೋಲುಗಳಿಕೆಯನ್ನು ಹೆಚ್ಚಿಸಿಕೊಳ್ಳುತ್ತಾ ಸಾಗಿತು. ಈ ಮೂಲಕ ಅಂತಿಮವಾಗಿ ಪಂದ್ಯದಲ್ಲಿ 9-0 ಅಂತರದ ಭಾರೀ ಗೆಲುವು ಸಾಧಿಸಿದೆ.

ಭಾರತದ ಸ್ಕ್ವಾಡ್ ಹೀಗಿದೆ: ಶಾನ್ ಬಹದ್ದೂರ್ ಪಾಠಕ್, ಸೂರಜ್ ಕರ್ಕೇರಾ, ಹರ್ಮನ್‌ಪ್ರೀತ್ ಸಿಂಗ್, ಗುರಿಂದರ್ ಸಿಂಗ್, ಜರ್ಮನ್‌ಪ್ರೀತ್ ಸಿಂಗ್, ದಿಪ್ಸನ್ ಟಿರ್ಕಿ, ವರುಣ್ ಕುಮಾರ್, ನಿಲಮ್ ಸಂಜೀಪ್ ಕ್ಸೆಸ್, ಮನ್‌ದೀಪ್ ಮೋರ್, ಹಾರ್ದಿಕ್ ಸಿಂಗ್, ಮನ್‌ಪ್ರೀತ್ ಸಿಂಗ್, ಜಸ್ಕರನ್ ಸಿಂಗ್, ಸುಮಿತ್, ರಾಜ್‌ಕುಮಾರ್ ಪಾಲ್, ಆಕಾಶದೀಪ್ ಸಿಂಗ್, ಶಂಶೇರ್ ಸಿಂಗ್, ಲಲಿತ್ ಕುಮಾರ್ ಉಪಾಧ್ಯಾಯ, ದಿಲ್ಪ್ರೀತ್ ಸಿಂಗ್, ಗುರ್ಸಾಹಿಬ್ಜಿತ್ ಸಿಂಗ್, ಶಿಲಾನಂದ್ ಲಾಕ್ರಾ

Story first published: Wednesday, December 15, 2021, 22:00 [IST]
Other articles published on Dec 15, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+