For Quick Alerts
ALLOW NOTIFICATIONS  
For Daily Alerts

ಏಷ್ಯನ್ ಚಾಂಪಿಯನ್ಸ್ ಟ್ರೋಫಿ: ಮಲೇಷ್ಯಾ ಮಣಿಸಿದ ಭಾರತ ಹಾಕಿ ತಂಡ; ಏಷ್ಯನ್ ಗೇಮ್ಸ್ ಸಿದ್ಧತೆ ಬಗ್ಗೆ ನಾಯಕ ಹೇಳಿದ್ದೇನು?

ಸದ್ಯ ನಡೆಯುತ್ತಿರುವ 2023ರ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯಲ್ಲಿ ಭಾರತ ಹಾಕಿ ತಂಡ ಅತ್ಯುತ್ತಮ ಪ್ರದರ್ಶನವನ್ನು ನೀಡುತ್ತಿದೆ. ಮೂರು ಲೀಗ್ ಹಂತದ ಪಂದ್ಯಗಳಲ್ಲಿ ಭಾರತ ಅಜೇಯವಾಗಿದೆ.

ಭಾನುವಾರ, ಆಗಸ್ಟ್ 7ರಂದು ಚೆನ್ನೈನಲ್ಲಿ ನಡೆದ ಮೂರನೇ ಪಂದ್ಯದಲ್ಲಿ ಹರ್ಮನ್‌ಪ್ರೀತ್ ಸಿಂಗ್ ನಾಯಕತ್ವದ ಭಾರತ ತಂಡವು ಮಲೇಷ್ಯಾ ವಿರುದ್ಧ 5-0 ಗೋಲುಗಳ ಅಂತರದ ಭರ್ಜರಿ ಜಯ ದಾಖಲಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಮರಳಿ ಪಡೆಯಿತು.

ಇದೇ ವೇಳೆ ಭಾರತ ಹಾಕಿ ತಂಡದ ನಾಯಕ ಹರ್ಮನ್‌ಪ್ರೀತ್ ಸಿಂಗ್ ಅವರು ಏಷ್ಯನ್ ಚಾಂಪಿಯನ್ಸ್ ಟ್ರೋಫಿಯನ್ನು 2023ರ ಏಷ್ಯನ್ ಗೇಮ್ಸ್‌ಗೆ ಮುಂಚಿತವಾದ ತಯಾರಿಯಾಗಿದೆ ಎಂದು ಹೇಳಿದ್ದಾರೆ.

asian-champions-trophy-2023


ಗಮನಾರ್ಹವಾಗಿ, ಹರ್ಮನ್‌ಪ್ರೀತ್ ಸಿಂಗ್ ಅವರು ತಮ್ಮ 150ನೇ ಗೋಲು ಅಂತಾರಾಷ್ಟ್ರೀಯ ಗೋಲು ಬಾರಿಸಿದರು. ಪಂದ್ಯದ ನಂತರ ಮಾತನಾಡಿದ ಅವರು, ಮುಂಬರುವ ಚೀನಾದಲ್ಲಿ ನಡೆಯಲಿರುವ 2023ರ ಏಷ್ಯನ್ ಗೇಮ್ಸ್ ಪಂದ್ಯಾವಳಿಗೆ ಭಾರತ ತಂಡ ಈ ರೀತಿಯಾಗಿ ತಯಾರಿ ನಡೆಸುತ್ತಿದೆ ಎಂದು ಗಮನ ಸೆಳೆದರು.

"ನೀವು ನೋಡಿದಂತೆ ನಾವು ಏಷ್ಯನ್ ಗೇಮ್ಸ್‌ಗೆ ಈ ರೀತಿ ತಯಾರಿ ನಡೆಸುತ್ತಿದ್ದೇವೆ. ಏಷ್ಯನ್ ಗೇಮ್ಸ್‌ಗಿಂತ ಮುನ್ನ ನಮಗೆ ಉತ್ತಮ ಪಂದ್ಯಗಳು ಬರುತ್ತಿವೆ. ಇದು ನಮಗೆ ಇನ್ನೂ ಒಳ್ಳೆಯದು," ಎಂದು ಪಂದ್ಯದ ನಂತರ ಭಾರತ ತಂಡದ ನಾಯಕ ಹರ್ಮನ್‌ಪ್ರೀತ್ ಸಿಂಗ್ ತಿಳಿಸಿದರು.

ಗುರುವಾರ, ಆಗಸ್ಟ್ 3ರಂದು ನಡೆದ 2023ರ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯಲ್ಲಿ ಭಾರತ ತಂಡ ಚೀನಾ ವಿರುದ್ಧ 7-2 ಗೋಲುಗಳ ಅಂತರದ ಭರ್ಜರಿ ಗೆಲುವು ದಾಖಲಿಸಿತ್ತು.

asian-champions-trophy-2023

ನಂತರ ಮಲೇಷ್ಯಾ ವಿರುದ್ಧ ಪ್ರಬಲವಾಗಿ ಗೆಲ್ಲುವ ಮೊದಲು ಭಾರತ ಹಾಕಿ ತಂಡ ಶುಕ್ರವಾರ, ಆಗಸ್ಟ್ 4ರಂದು ಜಪಾನ್‌ ವಿರುದ್ಧದ ಪಂದ್ಯವನ್ನು 1-1 ಗೋಲುಗಳ ಅಂತರದಲ್ಲಿ ಡ್ರಾ ಮಾಡಿಕೊಂಡರು.

"ಖಂಡಿತವಾಗಿಯೂ ನಮ್ಮ ಮೊದಲ ಪಂದ್ಯವು ಉತ್ತಮವಾಗಿದೆ ಎಂದು ನಾನು ಭಾವಿಸುತ್ತೇನೆ. ಏಕೆಂದರೆ ನಾವು ಹಲವು ಗೋಲುಗಳನ್ನು ಸಾಧಿಸಿದ್ದೇವೆ. ನಾವು ಅಜೇಯ ಓಟವನ್ನು ಕಾಯ್ದುಕೊಳ್ಳುವ ಭರವಸೆ ಹೊಂದಿದ್ದೇವೆ. ಎರಡನೇ ಪಂದ್ಯವು ಕಠಿಣವಾಗಿತ್ತು," ಎಂದು ಹರ್ಮನ್‌ಪ್ರೀತ್ ಸಿಂಗ್ ಅಭಿಪ್ರಾಯಪಟ್ಟರು.

"ದೇಶವನ್ನು ಪ್ರತಿನಿಧಿಸಲು ಈ ಜರ್ಸಿಯನ್ನು ಧರಿಸಿರುವುದು ಅದು ಹೆಮ್ಮೆಯ ಭಾವನೆಯಾಗಿದೆ ಮತ್ತು ಅದೊಂದು ದೊಡ್ಡ ಗೌರವವಾಗಿದೆ. ಇದು ನಮ್ಮ ಕುಟುಂಬದ ಬೆಂಬಲವಾಗಿದೆ. ಅದಕ್ಕಿಂತ ದೊಡ್ಡ ವಿಷಯವೆಂದರೆ, ನಾನು ನನ್ನ ದೇಶವನ್ನು ಪ್ರತಿನಿಧಿಸುತ್ತಿದ್ದೇನೆ," ಎಂದು ಡಿಫೆಂಡರ್ ಹರ್ಮನ್‌ಪ್ರೀತ್ ಸಿಂಗ್ ಹೇಳಿದರು.

ಭಾರತ ತಂಡವು ಹೆಚ್ಚಾಗಿ ಜಪಾನ್‌ನಿಂದ ಮಾತ್ರ ತೀವ್ರ ಪೈಪೋಟಿಯನ್ನು ಎದುರಿಸುತ್ತಿದೆ. ಜಪಾನಿಯರ ಕೆಲವು ಟ್ಯಾಕಲ್‌ಗಳಿಂದ ನಮ್ಮನ್ನು ಒತ್ತಡಕ್ಕೆ ಒಳಪಡಿಸಲಾಯಿತು. ಭಾರತವು ಇತ್ತೀಚೆಗೆ ಯುರೋಪಿಯನ್ ತಂಡಗಳ ವಿರುದ್ಧ ಆಡಿದೆ ಮತ್ತು ಏಷ್ಯಾದ ತಂಡಗಳಿಗೆ ಹೊಂದಿಕೊಳ್ಳುವ ಬಗ್ಗೆಯೂ ಹರ್ಮನ್‌ಪ್ರೀತ್ ಸಿಂಗ್ ಮಾತನಾಡಿದರು.

"ಭಾರತ ತಂಡ ಉತ್ತಮವಾಗಿವೆ. ಯುರೋಪಿಯನ್ ರಾಷ್ಟ್ರಗಳ ವಿರುದ್ಧ ಆಡಿದ ನಂತರ, ಇದ್ದಕ್ಕಿದ್ದಂತೆ ಏಷ್ಯನ್ ದೇಶಗಳ ವಿರುದ್ಧ ಆಡುವುದಕ್ಕೆ ಸರಿಮಾಡಲು ಸಮಯ ತೆಗೆದುಕೊಳ್ಳುತ್ತದೆ," ಎಂದರು.

"ನಾವು ಏನು ಮಾಡಬೇಕು ಮತ್ತು ಚೆಂಡಿನೊಂದಿಗೆ ಅಥವಾ ಇಲ್ಲದೆಯೇ ನಾವು ಎಲ್ಲಿ ಯಾವ ಕೆಲಸ ಮಾಡಬೇಕೆಂದು ನಮಗೆ ತಿಳಿದಿದೆ. ಆ ಬಗ್ಗೆ ತಂಡದ ಮಾತುಕತೆಯಲ್ಲಿ ಚರ್ಚಿಸುತ್ತೇವೆ," ಎಂದು ನಾಯಕ ಹರ್ಮನ್‌ಪ್ರೀತ್ ಸಿಂಗ್ ಹೇಳಿದರು.

2023ರ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯಲ್ಲಿ ಭಾರತ ಹಾಕಿ ತಂಡದ ಮುಂದಿನ ಪಂದ್ಯ ಕೊರಿಯಾ ವಿರುದ್ಧ ಸೋಮವಾರ, ಆಗಸ್ಟ್ 7ರಂದು ನಡೆಯಲಿದೆ.

Story first published: Monday, August 7, 2023, 13:04 [IST]
Other articles published on Aug 7, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+