Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಏಷ್ಯನ್ ಚಾಂಪಿಯನ್ಸ್ ಟ್ರೋಫಿ: ಪಾಕಿಸ್ತಾನದ ವಿರುದ್ಧ 4-0 ಅಂತರದ ಅಮೋಘ ಗೆಲುವು ಸಾಧಿಸಿದ ಭಾರತ

ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಿದೆ. ಈ ಪಂದ್ಯದಲ್ಲಿ ಭಾರತ ಪಾಕಿಸ್ತಾನದ ವಿರುದ್ಧ ಸಂಪೂರ್ಣ ಮೇಲುಗೈ ಸಾಧಿಸಿದ್ದು ಭರ್ಜರಿ 4-0 ಅಂತರದಿಂದ ಗೆದ್ದು ಬೀಗಿದೆ. ಈ ಮೂಲಕ ಚೆನ್ನೈನ ಮೇಯರ್ ರಾಧಾಕೃಷ್ಣನ್ ಕ್ರೀಡಾಮಗಣದಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಟೂರ್ನಿಯ ಲೀಗ್ ಹಂತದ ಅಗ್ರ ತಂಡವಾಗಿ ಭಾರತ ಹೊರಹೊಮ್ಮಿದೆ.

ಇನ್ನು ಸೆಮಿಫೈನಲ್‌ಗೇರುವ ಸ್ಪರ್ಧೆಯಲ್ಲಿ ಉಳಿದುಕೊಳ್ಳಬೇಕಿದ್ದರೆ ಈ ಪಂದ್ಯದಲ್ಲಿ ಪಾಕಿಸ್ತಾನ ತಂಡ ಕನಿಷ್ಠ ಡ್ರಾ ಸಾಧಿಸುವುದು ಅಗತ್ಯವಾಗಿತ್ತು. ಆದರೆ ಭಾರತದ ವಿರುದ್ಧ ನಿರ್ಣಾಯಕ ಪಂದ್ಯದಲ್ಲಿ ಭಾರೀ ಅಂತರದ ಸೋಲಿನ ಕಾರಣದಿಂದಾಗಿ ಪಾಕಿಸ್ಥಾನ ತಂಡ ಲೀಗ್ ಹಂತದಿಂದಲೇ ಹೊರಬಿದ್ದಂತಾಗಿದೆ.

Asian Champions Trophy Hockey: India won against Pakistan by 4-0 finish as table topper

ಭಾರತದ ನಾಯಕ ಹರ್ಮನ್‌ಪ್ರೀತ್ ಸಿಂಗ್ 15ನೇ ನಿಮಿಷದಲ್ಲಿ ಗೋಲು ಬಾರಿಸುವ ಮೂಲಕ ಮೊದಲ ಕ್ವಾರ್ಟರ್‌ನಲ್ಲಿ ಮುನ್ನಡೆ ಸಾಧಿಸಲು ಕಾರಣವಾದರು. ನಂತರ ಎರಡನೇ ಕ್ವಾರ್ಟರ್‌ನಲ್ಲಿ ಮತ್ತೊಂದು ಗೋಲು ಬಾರಿಸುವ ಮೂಲಕ ಪಾಕಿಸ್ತಾನದ ಮತ್ತಷ್ಟು ಒತ್ತಡವನನ್ಉ ಹೇರುವಲ್ಲಿ ಯಶಸ್ವಿಯಾದರು. ಇನ್ನು ಜುಗ್ರಾಜ್ ಸಿಂಗ್ ಭಾರತಕ್ಕೆ ಮೂರನೇ ಗೋಲು ಹೊಡೆದು ಭಾರತವನ್ನು ಡ್ರೈವಿಂಗ್ ಸೀಟಿನಲ್ಲಿ ಭದ್ರವಾಗಿ ಕೂಡಿಸಿದರು. ಇನ್ನು ನಂತರ ಅಕ್ಷದೀಪ್ ಸಿಂಗ್ ಟೂರ್ನಿಯಲ್ಲಿ ಪಾಕಿಸ್ತಾನದ ಪ್ರಯಾಣವನ್ನು ಅಂತ್ಯಗೊಳಿಸಲು ಕೊನೆಯ ಗೋಲು ಬಾರಿಸಿ ಮಿಂಚಿದರು.

ಸೆಮಿಫೈನಲ್‌ಗೆ ಪಾಕಿಸ್ತಾನ ತಂಡ ಪ್ರವೇಶಿಸಬೇಕಿದ್ದರೆ ಡ್ರಾ ಅಥವಾ ಸೋತರೆ ಒಂದು ಗೋಲಿನ ಅಂತರವನ್ನು ಕಾಪಾಡಿಕೊಳ್ಳುವುದು ಅಗತ್ಯವಾಗಿತ್ತು. ಹಾಗಾದಲ್ಲಿ ಮಾತ್ರವೇ ಅಗ್ರ ನಾಲ್ಕರಲ್ಲಿ ಸ್ಥಾನ ಪಡೆಯಲು ಸಾಧ್ಯವಿತ್ತು. ಆದರೆ ಪಾಕಿಸ್ತಾನ ಯಾವ ಹಂತದಲ್ಲಿಯೂ ಭಾರತದ ಬಲಿಷ್ಠ ರಕ್ಷಣಾ ವಿಭಾಗವನ್ನು ಹಿಮ್ಮೆಟ್ಟಿಸುವಲ್ಲಿ ಸಫಲವಾಗಲೇ ಇಲ್ಲ. ಹೀಗಾಗಿ ಭಾರೀ ಅಂತರದ ಸೋಲು ಅನುಭವಿಸಿದೆ.

ಐದು ಪಂದ್ಯಗಳಿಂದ ಕೇವಲ ಒಂದು ಗೆಲುವಿನೊಂದಿಗೆ ಪಾಕಿಸ್ತಾನ ತಂಡ ಐದನೇ ಸ್ಥಾನದೊಂದಿಗೆ ಪಂದ್ಯಾವಳಿಯನ್ನು ಪೂರ್ಣಗೊಳಿಸಿದೆ. ಅಲ್ಲದೆ ಈ ಪಂದ್ಯಾವಳಿಯ ಇತಿಹಾಸದಲ್ಲಿ ಕೇವಲ ಎರಡನೇ ಬಾರಿಗೆ ಸೆಮಿಫೈನಲ್ ಸುತ್ತಿಗೆ ಅರ್ಹತೆ ಪಡೆಯುವಲ್ಲಿ ವಿಫಲವಾದಂತಾಗಿದೆ. ಮತ್ತೊಂದೆಡೆ ಭಾರತ ತಂಡ ನಾಲ್ಕು ಗೆಲುವು ಮತ್ತು ಒಂದು ಡ್ರಾದೊಂದಿಗೆ ಗ್ರೂಪ್-ಸ್ಟೇಜ್ ಟೇಬಲ್‌ನಲ್ಲಿ ಅಗ್ರಸ್ಥಾನಕ್ಕೇರಿದೆ.

ಆಗಸ್ಟ್ 11 ರಂದು ನಡೆಯಲಿರುವ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಭಾರತವು ನಾಲ್ಕನೇ ಸ್ಥಾನದಲ್ಲಿರುವ ಜಪಾನ್ ತಂಡವನ್ನು ಎದುರಿಸಲಿದೆ. ಮೊದಲ ಸೆಮಿಫೈನಲ್‌ನಲ್ಲಿ ಮಲೇಷ್ಯಾ ಚಾಂಪಿಯನ್ ಹಾಲಿ ಚಾಂಪಿಯನ್ ದಕ್ಷಿಣ ಕೊರಿಯಾವನ್ನು ಎದುರಿಸಲಿದೆ.

ಭಾರತ ಆರಂಭಿಕ ಆಡುವ XI: ಕ್ರಿಶನ್ ಬಹದ್ದೂರ್ ಪಾಠಕ್, ವರುಣ್ ಕುಮಾರ್, ಜರ್ಮನ್ಪ್ರೀತ್ ಸಿಂಗ್, ಮನ್‌ಪ್ರೀತ್ ಸಿಂಗ್, ಹಾರ್ದಿಕ್ ಸಿಂಗ್, ಮನ್‌ದೀಪ್ ಸಿಂಗ್, ಹರ್ಮನ್‌ಪ್ರೀತ್ ಸಿಂಗ್, ಸುಮಿತ್, ಶಂಶೇರ್ ಸಿಂಗ್, ಆಕಾಶದೀಪ್ ಸಿಂಗ್, ಸುಖಜೀತ್ ಸಿಂಗ್.

ಪಾಕಿಸ್ತಾನ ಆರಂಭಿಕ ಆಡುವ XI: ಅಕ್ಮಲ್ ಹುಸೇನ್, ಅಹ್ತಿಶಮ್ ಅಸ್ಲಾಮ್, ಅಕೀಲ್ ಅಹ್ಮದ್, ಅರ್ಷದ್ ಲಿಯಾಕತ್, ಅಬ್ದುಲ್ ರಾಣಾ, ಅಬ್ದುಲ್ ಹನ್ನಾನ್, ಜಿಕ್ರಿಯಾ ಹಯಾತ್, ಉಸಾಮ ಬಶೀರ್, ಉಮರ್ ಭುಟ್ಟಾ, ಮಹಮ್ಮದ್ ಸುಫ್ಯಾನ್ ಖಾನ್, ಅಫ್ರಾಜ್.

Story first published: Wednesday, August 9, 2023, 22:57 [IST]
Other articles published on Aug 9, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+