For Quick Alerts
ALLOW NOTIFICATIONS  
For Daily Alerts

ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಬಗ್ಗುಬಡಿದ ಭಾರತ

Asian Champions Trophy: India outclass Pakistan 3-1

ಮಸ್ಕಟ್, ಅಕ್ಟೋಬರ್ 21: 4ನೇ ಆವೃತ್ತಿಯ ಏಷ್ಯನ್ ಚಾಂಪಿಯನ್ಸ್ ಟ್ರೋಫಿ (ಎಸಿಟಿ) ಹಾಕಿ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಭಾರತ ತಂಡವು ಶನಿವಾರದಂದು ನಡೆದ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಸುಲಭವಾಗಿ ಸೋಲಿಸಿದೆ.

ಪಾಕಿಸ್ತಾನವನ್ನು 1-3 ಅಂತರದಲ್ಲಿ ಸೋಲಿಸಿದ ಭಾರತವು ಟೂರ್ನಮೆಂಟ್ ನಲ್ಲಿ ಸತತ 2ನೇ ಜಯ ದಾಖಲಿಸಿದೆ. ಗುರುವಾರದಂದು ನಡೆದ ಮೊದಲ ಪಂದ್ಯದಲ್ಲಿ ಆತಿಥೇಯ ಒಮೆನ್ ವಿರುದ್ಧ ಭಾರತವು 11-0 ಗೋಲುಗಳಿಂದ ಜಯ ದಾಖಲಿಸಿತ್ತು.

ಮುನ್ನಡೆ ಪಡೆದಿದ್ದ ಪಾಕಿಸ್ತಾನ: ಪಂದ್ಯ ಆರಂಭಗೊಂಡ ಮೊದಲ ನಿಮಿಷದಲ್ಲೇ ಪಾಕಿಸ್ತಾನದ ಇರ್ಫಾನ್ ಜೂನಿಯರ್ ಮೊಹಮದ್ ಗೋಲು ದಾಖಲಿಸಿದರು. ಎರಡನೇ ಕ್ವಾರ್ಟರ್​ನಲ್ಲಿ ನಾಯಕ ಮನ್​ಪ್ರೀತ್ ಸಿಂಗ್ (24ನೇ ನಿಮಿಷ) ಫೀಲ್ಡ್ ಗೋಲಿನ ಮೂಲಕ 1-1ರ ಸಮಬಲ ಸಾಧಿಸಿದರು.

3ನೇ ಕ್ವಾರ್ಟರ್​ನ ಆರಂಭದಲ್ಲೇ ಯುವ ಆಟಗಾರ ಮಂದೀಪ್ ಸಿಂಗ್ (31ನೇ ನಿಮಿಷ) ಮತ್ತೊಂದು ಗೋಲು ಗಳಿಸಿ ಭಾರತಕ್ಕೆ 2-1ರಿಂದ ಮುನ್ನಡೆ ತಂದುಕೊಟ್ಟರೆ, ನಂತರ ಯುವ ಸ್ಟ್ರೈಕರ್ ದಿಲ್​ಪ್ರೀತ್ ಸಿಂಗ್ (42ನೇ) ಗೋಲುಗಳಿಸಿ ಗೋಲಿನ ಅಂತರವನ್ನು 3-1ಕ್ಕೇರಿಸಿದರು.

Story first published: Sunday, October 21, 2018, 11:19 [IST]
Other articles published on Oct 21, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+