For Quick Alerts
ALLOW NOTIFICATIONS  
For Daily Alerts

ಏಷ್ಯನ್ ಚಾಂಪಿಯನ್ಸ್ ಟ್ರೋಫಿ: ಸೆಮಿಫೈನಲ್‌ನಲ್ಲಿ ಜಪಾನ್ ವಿರುದ್ಧ ಸೋತ ಭಾರತ

Asian Champions Trophy, Semi Final: India lost by 3-5 against Japan, to face Pakistan for 3rd place

ಮೂರು ಬಾರಿಯ ಹಾಕಿ ಏಷ್ಯನ್ ಚಾಂಪಿಯನ್ ತಂಡವಾಗಿರುವ ಭಾರತ ಈ ಬಾರಿಯ ಟೂರ್ನಿಯ ಸೆಮಿಫೈನಲ್‌ನಲ್ಲಿ ಜಪಾನ್ ವಿರುದ್ಧ ಮುಗ್ಗರಿಸಿದೆ. ಬಾಂಗ್ಲಾದೇಶದ ಢಾಕಾದಲ್ಲಿ ನಡೆಯುತ್ತಿರುವ ಈ ಟೂರ್ನಿಯಲ್ಲಿ ಭಾರತ ಹಾಗೂ ಜಪಾನ್ ತಂಡಗಳು ಸೆಮಿಫೈನಲ್‌ನಲ್ಲಿ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಜಪಾನ್ ಭಾರತ ತಂಡವನ್ನು 5-3 ಗೋಲುಗಳ ಅಂತರದಿಂದ ಮಣಿಸುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಭಾರತ ನಾಲ್ಕನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರುವ ಕನಸು ಭಗ್ನವಾಗಿದೆ. ಹೀಗಾಗಿ ಭಾರತ ಮೂರನೇ ಸ್ಥಾನಕ್ಕಾಗಿ ಪಾಕಿಸ್ತಾನದ ವಿರುದ್ಧ ಸೆಣೆಸಾಡಲಿದೆ.

ಲೀಗ್ ಹಂತದಲ್ಲಿ ಜಪಾನ್‌ಗೆ ಭಾರೀ ಅಂತರದ ಸೋಲುಣಿಸಿದ್ದ ಭಾರತ: ಇನ್ನು ಇದಕ್ಕೂ ಮುನ್ನ ಲೀಗ್ ಹಂತದ ಅಂತಿಮ ಪಂದ್ಯದಲ್ಲಿ ಭಾರತಕ್ಕೆ ಜೊಪಾನ್ ಎದುರಾಗಿದ್ದು ಈ ಪಮದ್ಯದಲ್ಲಿ ಜಪಾನ್ ವಿರುದ್ಧ ಭಾರೀ ಅಂತರದಿಂದ ಗೆಲುವು ಸಾಧಿಸಿತ್ತು. ಭರ್ಜರಿ 6-0 ಅಂತರದಿಂದ ಭಾರತ ಗೆದ್ದು ಲೀಗ್ ಹಂತದಲ್ಲಿ ಅಗ್ರ ಸ್ಥಾನಿಯಾಗಿ ಸೆಮಿಫೈನಲ್‌ಗೆ ಪ್ರವೇಶ ಪಡೆದುಕೊಂಡಿತ್ತು. ಗ್ರೂಪ್ ಹಂತದಲ್ಲಿ ಆಡಿದ ನಾಲ್ಕು ಪಂದ್ಯಗಳ ಪೈಕಿ 3 ಗೆಲುವು ಹಾಗೂ ಒಂದು ಡ್ರಾ ಸಾಧಿಸಿತ್ತು. ಆದರೆ ನಾಕ್‌ಔಟ್ ಪಂದ್ಯದಲ್ಲಿ ಜಪಾನ್ ವಿರುದ್ಧ ಸೋಲು ಅನುಭವಿಸಿ ನಿರಾಸೆ ಮೂಡಿಸಿದೆ.

ಇದೀಗ ಭಾರತ ಟೂರ್ನಿಯಲ್ಲಿ ಮೂರನೇ ಸ್ಥಾನಕ್ಕಾಗಿ ತನ್ನ ಹೋರಾಟವನ್ನು ನಡೆಸಲಿದೆ. ಈ ಸ್ಥಾನಕ್ಕೆ ಭಾರತ ತಂಡಕ್ಕೆ ಬದ್ಧ ಎದುರಾಳಿ ಪಾಕಿಸ್ತಾನ ಪೈಪೋಟಿ ನೀಡಲಿದೆ. ಭಾರತ ಹಾಗೂ ಪಾಕಿಸ್ತಾನ ತಂಡಗಳು 2018ರ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯ ಜಂಟಿ ವಿಜೇತ ತಂಡಗಳಾಗಿದೆ. ಈ ಬಾರಿಯ ಸೆಮಿಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ದಕ್ಷಿಣ ಕೊರಿಯಾ ವಿರುದ್ಧ ಸ್ಪರ್ಧಿಸಿ 5-6 ಅಂತರದಿಂದ ಸೋಲು ಕಂಡಿತ್ತು.

ನಿರ್ಣಾಯಕ ಸೆಮಿ ಫೈನಲ್ ಪಂದ್ಯದಲ್ಲಿ ಭಾರತ ಕೆಲ ಸ್ಟಾರ್ ಆಟಗಾರರ ಗೈರಿನಲ್ಲಿ ಕಣಕ್ಕಿಳಿದಿತ್ತು. ಬೆಂಚ್ ಸಾಮರ್ಥ್ಯವನ್ನು ಪರೀಕ್ಷಿಸುವ ಸಲುವಾಗಿ ಸ್ಟಾರ್ ಗೋಲ್‌ ಕೀಪರ್ ಪಿಆರ್ ಶ್ರೀಜೇಶ್ ಸಹಿತ ಕೆಲ ಪ್ರಮುಖ ಆಟಗಾರರು ಈ ಪಂದ್ಯದಿಂದ ಹೊರಗುಳಿದಿದ್ದರು. ಇದು ಈ ಪಂದ್ಯದಲ್ಲಿ ಭಾರತಕ್ಕೆ ಬಹಳ ದುಬಾರಿಯಾಯಿತು.

ಇನ್ನು ಈ ಪಂದ್ಯದಲ್ಲಿ ಭಾರತ ಗೆಲ್ಲುವ ನೆಚ್ಚಿನ ತಂಡವಾಗಿಯೇ ಕಣಕ್ಕಿಳಿದಿತ್ತು. ಆದರೆ ಆರಂಭದಲ್ಲಿ ಭಾರತದ ಕೆಲ ವೈಫಲ್ಯಗಳನ್ನು ಜಪಾನ್ ಅದ್ಭುತವಾಗು ಬಳಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ಹೋಗಾಗಿ ಮೊದಲ ಕ್ವಾರ್ಟರ್‌ನಿಂದಲೇ ಜಪಾನ್ ಮೇಲುಗೈ ಸಾಧಿಸುತ್ತಾ ಸಾಗಿತ್ತು. ಮೊದಲ ಕ್ವಾರ್ಟರ್‌ನಲ್ಲಿ ಎರಡು ಗೋಲು ಸಾಧಿಸಿ ಜಪಾನ್ ಪಂದ್ಯದಲ್ಲಿ ತನ್ನ ಹಿಡಿತವನ್ನು ಸಾಧಿಸಿತ್ತು. ಎರಡನೇ ಕ್ವಾರ್ಟರ್‌ನಲ್ಲಿ ಭಾರತ ಹಾಗೂ ಜಪಾನ್ ಎರಡು ತಂಡಗಳು ಕೂಡ ತಲಾ ಒಂದೊಂದು ಗೋಲು ದಾಖಲಿಸಲು ಯಶಸ್ವಿಯಾಗಿದ್ದವು. ಹೀಗಾಗಿ ಎರಡನೇ ಕ್ವಾರ್ಟರ್ ಅಂತ್ಯಗೊಳ್ಳುವಾಗ ಜಪಾನ್ 3-1 ಅಂತರದಿಂದ ಮುನ್ನಡೆ ಸಾಧಿಸಿತ್ತು.

ಇನ್ನು ಮೂರನೇ ಕ್ವಾರ್ಟರ್‌ನಲ್ಲಿ ಜಪಾನ್ ಮತ್ತೆ ಮೇಲುಗೈ ಸಾಧಿಸುತ್ತಾ ಮುನ್ನುಗ್ಗಿತ್ತು. ಮೂರನೇ ಕ್ವಾರ್ಟರ್‌ನಲ್ಲಿ ಜಪಾನ್ ಮತ್ತೆ ಎರಡು ಗೋಲುಗಳನ್ನು ದಾಖಲಿಸುವಲ್ಲಿ ಯಶಸ್ವಿಯಾಗಿತ್ತು. ಆದರೆ ಭಾರತ ಇನ್ನೂ ಒಂದು ಗೋಲಿನೊಂದಿಗೆ ಭಾರೀ ಅಂತರದ ಹಿನ್ನಡೆಯಲ್ಲಿತ್ತು. ಮೂರನೆ ಕ್ವಾರ್ಟರ್ ಅಂತ್ಯದಲ್ಲಿ 5-1 ಅಂತರದಿಂದ ಜಪಾನ್ ಭಾರೀ ಮುನ್ನಡೆ ಸಾಧಿಸಿತ್ತು.

ಇನ್ನು ನಾಲ್ಕನೇ ಕ್ವಾರ್ಟರ್‌ನಲ್ಲಿ ಭಾರತ ತಂಡ ಮೇಲುಗೈ ಸಾಧಿಸಿತಾದರೂ ಅದು ಜಪಾನ್ ತಂಡದ ಮುನ್ನಡೆಗೆ ಸಮವಾಗಲಿಲ್ಲ. ನಾಲ್ಕನೇ ಕ್ವಾರ್ಟರ್‌ನಲ್ಲಿ ಭಾರತ ಎರಡು ಗೋಲು ದಾಖಲಿಸುವಲ್ಲಿ ಯಶಸ್ವಿಯಾಯಿತು. ಈ ಮೂಲಕ ಭಾರತ ಒಟ್ಟು ಮೂರು ಗೋಲು ದಾಖಲಿಸಿತು. ಆದರೆ ಜಪಾನ್‌ಗಿಂತ ಎರಡು ಗೋಲುಗಳಷ್ಟು ಹಿಂದಿತ್ತು ಭಾರತ. ಅಂತಿಮವಾಗಿ ಜಪಾನ್ ತಂಡ ಭಾರತದ ವಿರುದ್ಧ 5-3 ಅಂತರದಿಂದ ಗೆಲುವು ಸಾಧಿಸಿ ಫೈನಲ್‌ಗೆ ಪ್ರವೇಶ ಪಡೆದುಕೊಂಡಿದೆ.

Story first published: Tuesday, December 21, 2021, 21:24 [IST]
Other articles published on Dec 21, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+