Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Asian Games 2023: ಜಪಾನ್ ಬಗ್ಗುಬಡಿದ ಭಾರತ ಹಾಕಿ ತಂಡಕ್ಕೆ ಸ್ವರ್ಣ ಪದಕ; ಗತವೈಭವಕ್ಕೆ ಮರಳಿದ ಭಾರತೀಯ ಹಾಕಿ

ಶುಕ್ರವಾರ, ಅಕ್ಟೋಬರ್ 6ರಂದು ನಡೆದ 2023ರ ಏಷ್ಯನ್ ಗೇಮ್ಸ್‌ನ ಪುರುಷರ ಹಾಕಿ ಪಂದ್ಯಾವಳಿಯ ಫೈನಲ್‌ನಲ್ಲಿ ಜಪಾನ್ ವಿರುದ್ಧ ಗೆದ್ದುಬೀಗಿದ ಭಾರತ ತಂಡ ಚಿನ್ನದ ಪದಕಕ್ಕೆ ಕೊರಳೊಡ್ಡಿತು.

ಭಾರತೀಯ ಹಾಕಿ ಗತವೈಭವಕ್ಕೆ ಮರಳಿದ್ದು, ಬಲಿಷ್ಠ ಜಪಾನ್ ವಿರುದ್ಧ 5-1 ಗೋಲುಗಳ ಅಂತರದಿಂದ ಚಿನ್ನದ ಪದಕ ಗೆದ್ದುಕೊಂಡಿತು. ಈ ಮೂಲಕ 2023ರ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಪಡೆ 100 ಪದಕಗಳನ್ನು ತಲುಪಿ ಐತಿಹಾಸಿಕ ಸಾಧನೆ ಮಾಡಿದೆ.

asian-games-2023-hockey-final

ಏಷ್ಯನ್ ಗೇಮ್ಸ್ ಪುರುಷರ ಹಾಕಿಯಲ್ಲಿ ಭಾರತ ಮತ್ತೊಮ್ಮೆ ಏಷ್ಯನ್ ಚಾಂಪಿಯನ್ ಆಗಿದೆ. ಟೊಕಿಯೋ ಒಲಿಂಪಿಕ್ಸ್‌ನಲ್ಲಿ ಕಂಚು ಗೆದ್ದ ನಂತರ, ಹ್ಯಾಂಗ್‌ಝೌನಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ ಅತ್ಯುತ್ತಮ ಪ್ರದರ್ಶನದೊಂದಿಗೆ ಹರ್ಮನ್‌ಪ್ರೀತ್ ಸಿಂಗ್ ನಾಯಕತ್ವದ ಭಾರತ ಚಿನ್ನದ ಪದಕಕ್ಕೆ ಕೊರಳೊಡ್ಡಿದೆ.

ಎಲ್ಲದಕ್ಕಿಂತ ಮುಖ್ಯವಾಗಿ ಭಾರತ ಹಾಕಿ ತಂಡವು ಮುಂದಿನ ವರ್ಷ ನಡೆಯುವ 2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ತನ್ನ ಸ್ಥಾನವನ್ನು ಖಚಿತಪಡಿಸಿಕೊಂಡಿದೆ.

ಏಷ್ಯನ್ ಗೇಮ್ಸ್‌ನಲ್ಲಿ ಪುರುಷ ಮತ್ತು ಮಹಿಳೆಯರ ಹಾಕಿಯಲ್ಲಿ ಚಿನ್ನದ ಪದಕ ವಿಜೇತರು ಮಾತ್ರ ಒಲಿಂಪಿಕ್ ನೇರ ಅರ್ಹತೆಯ ಭರವಸೆ ಹೊಂದಿದ್ದಾರೆ. ಭಾರತದ ತಂಡವು ಪ್ರಬಲ ಪ್ರದರ್ಶನದೊಂದಿಗೆ ತನ್ನ ಕೆಲಸವನ್ನು ಪೂರ್ಣಗೊಳಿಸಿದ್ದು, ಇದು ಹೊಸ ಕೋಚ್ ಕ್ರೇಗ್ ಫುಲ್ಟನ್ ಹೆಮ್ಮೆಪಡುವಂತೆ ಮಾಡಿದೆ.

asian-games-2023-hockey-final

ಇದು 1966, 1998, ಮತ್ತು 2014ರ ನಂತರ ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಪುರುಷರ ಹಾಕಿ ತಂಡಕ್ಕೆ 4ನೇ ಚಿನ್ನದ ಪದಕವಾಗಿದೆ. ಭಾರತವು 4 ವರ್ಷಗಳ ಹಿಂದೆ ಜಕಾರ್ತಾ ಏಷ್ಯನ್ ಗೇಮ್ಸ್‌ನಲ್ಲಿ ಕಂಚಿನ ಪದಕಕ್ಕೆ ತೃಪ್ತಿಪಟ್ಟಿತ್ತು.

ಏಷ್ಯನ್ ಗೇಮ್ಸ್‌ನಲ್ಲಿ ಭಾರತವು ಹಾಕಿಯಲ್ಲಿ ಜಂಟಿ ಎರಡನೇ ಅತ್ಯಂತ ಯಶಸ್ವಿ ಪುರುಷರ ತಂಡವಾಗಿದೆ. ದಕ್ಷಿಣ ಕೊರಿಯಾ ಪುರುಷರ ತಂಡ ಕೂಡ 4 ಚಿನ್ನದ ಪದಕಗಳನ್ನು ಗೆದ್ದುಕೊಂಡಿದ್ದಾರೆ. ಏಷ್ಯನ್ ಗೇಮ್ಸ್‌ನಲ್ಲಿ ಪಾಕಿಸ್ತಾನ 9 ಚಿನ್ನದ ಪದಕಗಳೊಂದಿಗೆ ಅತ್ಯಂತ ಯಶಸ್ವಿ ಪುರುಷರ ತಂಡವಾಗಿದೆ.

ಜಪಾನ್ ವಿರುದ್ಧ ಶಿಸ್ತಿನ ಆಟ ಪ್ರದರ್ಶಿಸಿದ ಭಾರತ

ಗ್ರೂಪ್ ಹಂತದಲ್ಲಿ ಭಾರತ ತಂಡವನ್ನು ಸೋಲಿಸಿದ್ದರಿಂದ ಹೆಚ್ಚಿನ ಆತ್ಮವಿಶ್ವಾಸದಿಂದ ಹಾಲಿ ಚಾಂಪಿಯನ್ ಜಪಾನ್ ಫೈನಲ್ ಪ್ರವೇಶಿಸಿತ್ತು. ಸೆಮಿಫೈನಲ್‌ನಲ್ಲಿ ಭಾರತ ತಂಡ ಕೊರಿಯಾ ವಿರುದ್ಧದ ಕಠಿಣ ಪರೀಕ್ಷೆಯನ್ನು ಎದುರಿಸಿ 5-3 ಅಂತರದಲ್ಲಿ ಗೆಲುವು ಕಂಡಿತ್ತು.

ಜಪಾನ್ ತಂಡಕ್ಕೆ ಬ್ರೇಕ್ ಹಾಕುವತ್ತ ಗಮನಹರಿಸಿತು ಮತ್ತು ಭಾರತಕ್ಕೆ ಆರಂಭಿಕ ಮುನ್ನಡೆ ಪಡೆಯಲು ಜಪಾನ್ ಅವಕಾಶ ನೀಡಲಿಲ್ಲ. ಮೊದಲ ಕ್ವಾರ್ಟರ್‌ನ ಅಂತ್ಯಕ್ಕೆ 0-0 ಆಗಿ ಉಳಿದಿದ್ದರಿಂದ ತಮ್ಮ ತಂತ್ರದಲ್ಲಿ ಯಶಸ್ವಿಯಾದರು.

15ನೇ ನಿಮಿಷದಲ್ಲಿ ಸುರ್ಜೀತ್ ಒಂದು ಗೋಲು ಹೊಡೆದರು. ಆದರೆ ರೆಫರಿ ಡಿ ಒಳಗೆ ಫೌಲ್‌ಗೆ ಪ್ರಯೋಜನವನ್ನು ನೀಡಲಿಲ್ಲ ಮತ್ತು ಭಾರತಕ್ಕೆ ಪೆನಾಲ್ಟಿ ಕಾರ್ನರ್ ನೀಡಿದರು, ಅದನ್ನು ಗೋಲಾಗಿ ಪರಿವರ್ತಿಸಲು ಸಾಧ್ಯವಾಗಲಿಲ್ಲ.

ಎರಡನೇ ಕ್ವಾರ್ಟರ್‌ನಲ್ಲಿಯೂ ಜಪಾನ್ ರಕ್ಷಣಾತ್ಮಕ ಶಿಸ್ತಿನ ಮುಂದುವರಿಸಿತು. ಆದಾಗ್ಯೂ, ಮನ್‌ಪ್ರೀತ್ ಸಿಂಗ್ ಪಡೆ ಒಂದು ಫೀಲ್ಡ್ ಗೋಲಿನ ಮೂಲಕ ಮುನ್ನಡೆ ಸಾಧಿಸಿತು ಮತ್ತು 1-0 ಮುನ್ನಡೆಯೊಂದಿಗೆ ಮೊದಲಾರ್ಧ ಮುಗಿಸಿತು.

ಮನ್‌ಪ್ರೀತ್ ಅವರ ರಿವರ್ಸ್ ಸ್ಟ್ರೈಕ್ ಗುರಿಯತ್ತ ಹಾರಿ, ಜಪಾನ್ ತಂಡವನ್ನು ಹೆಚ್ಚು ಪರೀಕ್ಷಿಸಲು ಭಾರತಕ್ಕೆ ಅಗತ್ಯವಾದ ಆತ್ಮವಿಶ್ವಾಸ ನೀಡಿತು. ನಿರೀಕ್ಷೆಯಂತೆ 3ನೇ ಕ್ವಾರ್ಟರ್‌ನಲ್ಲಿ ಜಪಾನ್ ಹೆಚ್ಚು ದುರ್ಬಲವಾಯಿತು.

3ನೇ ಕ್ವಾರ್ಟರ್‌ನಲ್ಲಿ ಭಾರತವು 3 ಪೆನಾಲ್ಟಿ ಕಾರ್ನರ್‌ಗಳನ್ನು ಹೊಂದಿತ್ತು ಮತ್ತು 3ನೇ ಪ್ರಯತ್ನದಲ್ಲಿ ಮನ್‌ಪ್ರೀತ್ ಸಿಂಗ್ ಅವರ ದಾಳಿ ಭಾರತಕ್ಕೆ 2-0 ಅಂತರದ ಮುನ್ನಡೆ ನೀಡಿತು.

ಅಮಿತ್ ರೋಹಿದಾಸ್ ಪೆನಾಲ್ಟಿ ಕಾರ್ನರ್‌ನಿಂದ ಭಾರತಕ್ಕೆ 3-0 ಅಂತರದ ಮುನ್ನಡೆ ತಂದುಕೊಟ್ಟರು ಮತ್ತು 3ನೇ ಕ್ವಾರ್ಟರ್‌ನ ಅಂತ್ಯದ ವೇಳೆಗೆ ಜಪಾನ್ ಆಗಲೇ ಧೂಳೀಪಟವಾದಂತೆ ತೋರುತ್ತಿತ್ತು.

ನಾಲ್ಕನೇ ಕ್ವಾರ್ಟರ್‌ನ ಆರಂಭದಲ್ಲಿ ಅಭಿಷೇಕ್ ಗಳಿಸಿದ ಗೋಲಿನಿಂದ ಭಾರತ 4-0 ಮುನ್ನಡೆ ಸಾಧಿಸಿತು. ಆದಾಗ್ಯೂ, ಮಿಡ್‌ಫೀಲ್ಡರ್ ಸೆರೆನ್ ತನಕಾ ಪೆನಾಲ್ಟಿ ಕಾರ್ನರ್ ಒಂದನ್ನು ಹೊಡೆದಿದ್ದರಿಂದ ಜಪಾನ್ ಅಂತಿಮವಾಗಿ ಒಂದು ಗೋಲು ಪಡೆಯಿತು.

ಆದಾಗ್ಯೂ ಭಾರತೀಯ ನಾಯಕ ಹರ್ಮನ್‌ಪ್ರೀತ್ ಸಿಂಗ್ ಮತ್ತೊಂದು ಸಂವೇದನಾಶೀಲ ಪೆನಾಲ್ಟಿ ಕಾರ್ನರ್ ಗೋಲ್‌ನೊಂದಿಗೆ ತನ್ನ ಮೊತ್ತವನ್ನು ದ್ವಿಗುಣಗೊಳಿಸುವುದರೊಂದಿಗೆ ಅಂತಿಮ ಕ್ವಾರ್ಟರ್‌ನ ಕೊನೆಯಲ್ಲಿ ಭಾರತಕ್ಕೆ 5-1 ಗೋಲುಗಳಿಂದ ಗೆದ್ದು ಬೀಗಿತು.

Story first published: Friday, October 6, 2023, 17:33 [IST]
Other articles published on Oct 6, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+