Asian Hockey Champions Trophy: ಭಾರತ-ಪಾಕಿಸ್ತಾನ ನಡುವಿನ ಫೈನಲ್ ಪಂದ್ಯದ ಕನಸಿಗೆ ತಣ್ಣೀರೆರಚಿದ ಚೀನಾ
ಚೀನಾದಲ್ಲಿ ನಡೆಯುತ್ತಿರುವ 2024ರ ಏಷ್ಯಾನ್ ಹಾಕಿ ಚಾಂಪಿಯನ್ ಟ್ರೋಫಿ ಟೂರ್ನಿ ಅಂತಿಮ ಘಟ್ಟ ತಲುಪಿದೆ. ಈ ಟೂರ್ನಿಯ ಫೈನಲ್ ಪಂದ್ಯದಲ್ಲಿ ಕಾದಾಡಲು ಹಾಲಿ ಚಾಂಪಿಯನ್ ಭಾರತ ಮತ್ತು ಚೀನಾ ತಂಡಗಳು ಸಜ್ಜಾಗಿವೆ.
ಫೈನಲ್ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಹೈ ವೋಲ್ಟೇಜ್ ಪಂದ್ಯ ನಡೆಯಲಿದೆ ಎಂದು ಅಭಿಮಾನಿಗಳು ನಿರೀಕ್ಷಿಸಿದ್ದರು. ಆದರೆ ಪಾಕಿಸ್ತಾನದ ಕನಸಿಗೆ ಚೀನಾ ತಣ್ಣೀರೆರಚಿದೆ. ಆದರೆ ಸೆಮಿಫೈನಲ್ ಪಂದ್ಯದಲ್ಲಿ ದಕ್ಷಿಣ ಕೊರಿಯಾ ತಂಡವನ್ನು ಸೋಲಿಸುವ ಮೂಲಕ ಟೀಮ್ ಇಂಡಿಯಾ ಫೈನಲ್‌ಗೆ ಎಂಟ್ರಿ ಕೊಟ್ಟಿದೆ.

ಇತ್ತ ಆತಿಥೇಯ ಚೀನಾ ತಂಡ ಪಾಕಿಸ್ತಾನವನ್ನು ಸೋಲಿಸಿ ಏಷ್ಯಾನ್ ಹಾಕಿ ಚಾಂಪಿಯನ್ ಟ್ರೋಫಿ ಇತಿಹಾಸದಲ್ಲಿ ಮೊದಲ ಫೈನಲ್ ಪ್ರವೇಶಿಸಿದೆ. ಎರಡನೇ ಸೆಮಿಫೈನಲ್‌ನಲ್ಲಿ ಭಾರತ ಎದುರು ಸೋತಿದ್ದ ಕೊರಿಯಾ ವಿರುದ್ಧ ಪಾಕಿಸ್ತಾನ ಈಗ ಕಂಚಿನ ಪದಕಕ್ಕಾಗಿ ಪೈಪೋಟಿ ನಡೆಸುತ್ತಿದೆ.
ಸೆಮಿಫೈನಲ್‌ನಲ್ಲಿ ಆಗಿದ್ದೇನು?
ಚೀನಾದ ಹುಲುನ್‌ಬುಯರ್‌ನಲ್ಲಿರುವ ಮೋಕಿ ಸ್ಟೇಡಿಯಂನಲ್ಲಿ ಸೋಮವಾರ ನಡೆದ ಚೀನಾ ಮತ್ತು ಪಾಕಿಸ್ತಾನ ನಡುವಿನ ಪಂದ್ಯವೂ ರೋಚಕತೆಯಿಂದ ಕೂಡಿತ್ತು. ಎರಡು ತಂಡಗಳು ಫೈನಲ್‌ಗೆ ಆರ್ಹತೆ ಪಡೆಯಲು ಪ್ರಬಲ ಪೈಪೋಟಿ ನಡೆಸಿದವು. ಉಭಯ ತಂಡಗಳು 1-1 ಗೋಲುಗಳಿಂದ ಪಂದ್ಯವನ್ನು ಅಂತ್ಯಗೊಳಿಸಿದವು.
ಆದರೆ ಚೀನಾ ತಂಡವು ಪಾಕಿಸ್ತಾನವನ್ನು ಶೂಟೌಟ್‌ನಲ್ಲಿ 2-0 ಗೋಲುಗಳಿಂದ ಸೋಲಿಸಿ ಫೈನಲ್ ಪ್ರವೇಶಿಸಿತು. ಈ ಟೂರ್ನಿಯಲ್ಲಿ ಅತಿ ಹೆಚ್ಚು ಪ್ರಶಸ್ತಿಗಳನ್ನು ಗೆದ್ದ ಎರಡನೇ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಪಾಕಿಸ್ತಾನ ಸೋಲುವ ಮೂಲಕ ಭಾರೀ ಮುಖಭಂಗ ಅನುಭವಿಸಿತು.
ಶೂಟೌಟ್‌ನಲ್ಲಿ ಚೀನಾ ಪರ ಗೋಲ್‌ಕೀಪರ್ ಕೈಯು ವಾಂಗ್ ಅತ್ಯುತ್ತಮ ಪ್ರದರ್ಶನವನ್ನು ನೀಡಿದರೆ, ಬೆನ್ಹೈ ಚೆನ್ ಮತ್ತು ಚಾನ್ಲಿಯಾಂಗ್ ಲಿನ್ ಗೋಲು ಗಳಿಸಿದರು. ಇದಕ್ಕೂ ಮುನ್ನ ಪಂದ್ಯದ ಆರಂಭದಲ್ಲಿ ಯುವಾನ್ಲಿನ್ ಲು 18ನೇ ನಿಮಿಷದಲ್ಲಿ ಚೀನಾಕ್ಕೆ 1-0 ಮುನ್ನಡೆ ತಂದುಕೊಟ್ಟಿದ್ದರು.
ಆರಂಭದಿಂದಲ್ಲೇ ಫೈನಲ್ ತಲುಪುವ ಪಾಕಿಸ್ತಾನದ ಹಾದಿಗೆ ಚೀನಾ ಮುಳ್ಳಿನ ಹಾಸಿಗೆ ಹಾಕಿತ್ತು. ಚೆಂಡಿನ ಮೇಲೆ ಹೆಚ್ಚು ಹೊತ್ತು ಪ್ರಾಬಲ್ಯ ಸಾಧಿಸಿದ ಚೀನಾ ತಂಡವು ಪಾಕಿಸ್ತಾನ ಗೋಲು ಗಳಿಸದಂತೆ ಒತ್ತಡ ಹೇರಿತು. ಹೀಗಾಗಿ ಪಾಕಿಸ್ತಾನ ತಂಡ ಚೀನಾ ಎದುರು ಮಂಕಾಯಿತು.
ಇದರ ಲಾಭ ಪಡೆದ ಚೀನಾ ಎರಡನೇ ಕ್ವಾರ್ಟರ್‌ನಲ್ಲಿ ಕೂಡ ಅದ್ಭುತವಾಗಿ ಡಿಫೆಂಡ್ ಮಾಡಿತು. ಪಾಕಿಸ್ತಾನ 37ನೇ ನಿಮಿಷದಲ್ಲಿ ಅಹ್ಮದ್ ನದೀಮ್ ಮೂಲಕ ಗೋಲು ದಾಖಲಿಸಿತು. ಆದರೆ ಪಾಕಿಸ್ತಾನಕ್ಕೆ ಮತ್ತೊಂದು ಗೋಲು ಹೊಡೆಯದಂತೆ ಚೀನಾ ಆಟ ಪ್ರದರ್ಶನ ಮಾಡಿತು. ಹೀಗಾಗಿ ಪಂದ್ಯ ಶೂಟೌಟ್‌ಗೆ ತಲುಪಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications