Asian Hockey Champions Trophy 2024: ಭಾರತ vs ಪಾಕಿಸ್ತಾನ ನಡುವಿನ ಮಹಾಕಾಳಗಕ್ಕೆ ದಿನಾಂಕ ಫಿಕ್ಸ್
ಒಲಿಂಪಿಕ್ಸ್‌ನಲ್ಲಿ ಸತತ ಎರಡನೇ ಕಂಚು ಗೆದ್ದುಕೊಂಡಿರುವ ಭಾರತ ಹಾಕಿ ತಂಡ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ತನ್ನ ಪ್ರಶಸ್ತಿಯನ್ನು ಉಳಿಸಿಕೊಳ್ಳಲು ಭರ್ಜರಿ ತಯಾರಿ ನಡೆಸಿದೆ. ಈ ಬಾರಿಯ ಏಷ್ಯನ್ ಹಾಕಿ ಚಾಂಪಿಯನ್ಸ್ ಟ್ರೋಫಿ ಚೀನಾದಲ್ಲಿ ಸೆಪ್ಟೆಂಬರ್ 8 ರಿಂದ ಪ್ರಾರಂಭವಾಗಲಿದೆ.
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭರ್ಜರಿ ಪ್ರದರ್ಶನ ನೀಡಿರುವ ಉತ್ಸಾಹದಲ್ಲಿರುವ ಟೀಮ್ ಇಂಡಿಯಾ ಈ ಬಾರಿಯೂ ಏಪ್ಯಾಕಪ್‌ನಲ್ಲಿ ಮಿಂಚುವ ನಿರೀಕ್ಷೆಯಲ್ಲಿದೆ. ಹರ್ಮನ್ ಪ್ರೀತ್ ಸಿಂಗ್ ನೇತೃತ್ವದ ಟೀಮ್ ಇಂಡಿಯಾ ಬಲಿಷ್ಠವಾಗಿದ್ದು, ಟ್ರೋಫಿ ಗೆಲ್ಲುವ ನೆಚ್ಚಿನ ತಂಡವಾಗಿದೆ.

ಭಾರತದ ಮೊದಲ ಪಂದ್ಯ?
ಭಾರತ ತಂಡ ಇಂದು (ಭಾನುವಾರ) ಆತಿಥೇಯ ಚೀನಾ ವಿರುದ್ಧ ತನ್ನ ಅಭಿಯಾನ ಆರಂಭಿಸಲಿದೆ. ಎಲ್ಲಾ ತಂಡಗಳು ಒಂದೇ ರೌಂಡ್-ರಾಬಿನ್ ಮಾದರಿಯಲ್ಲಿ ಪರಸ್ಪರರ ವಿರುದ್ಧ ಆಡಲಿವೆ. ನಂತರ ಸೂಪರ್-4 ತಂಡಗಳು ಸೆಮಿ-ಫೈನಲ್ ಪಂದ್ಯಗಳಿಗೆ ಅರ್ಹತೆ ಪಡೆಯಲಿದೆ.
ಈ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲಲು ಭಾರತ ಪ್ರಬಲ ಪೈಪೋಟಿ ಹೊಂದಿದೆ. ಟೂರ್ನಿಯಲ್ಲಿ ಚೀನಾ, ಜಪಾನ್, ಪಾಕಿಸ್ತಾನ, ಕೊರಿಯಾ ಮತ್ತು ಮಲೇಷ್ಯಾದಂತಹ ಬಲಿಷ್ಠ ತಂಡಗಳನ್ನು ಭಾರತ ಎದುರಿಸಬೇಕಿದೆ.
ಭಾರತ vs ಪಾಕಿಸ್ತಾನ ಪಂದ್ಯ?
ಭಾರತ ತನ್ನ 5ನೇ ಪಂದ್ಯದಲ್ಲಿ ಪಾಕಿಸ್ತಾನವನ್ನು ಎದುರಿಸಲಿದೆ. ಚೀನಾದ ನಂತರ ಭಾರತ ತಂಡವು ಜಪಾನ ವಿರುದ್ಧ ಆಡಲಿದೆ. ಇದಾದ ಬಳಿಕ ಹರ್ಮನ್‌ಪ್ರೀತ್ ಪಡೆ ಮಲೇಷ್ಯಾವನ್ನು ಎದುರಿಸಲಿದೆ. ದಕ್ಷಿಣ ಕೊರಿಯಾ ವಿರುದ್ಧ ಟೀಮ್ ಇಂಡಿಯಾದ 4ನೇ ಪಂದ್ಯ ಫಿಕ್ಸ್ ಆಗಿದೆ.
ಸೆಪ್ಟೆಂಬರ್ 14 ರಂದು ಪಾಕಿಸ್ತಾನ ಮತ್ತು ಭಾರತ ನಡುವಿನ ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಹಣಾಹಣಿಯನ್ನು ನೋಡಲು ಕ್ರೀಡಾಭಿಮಾನಿಗಳು ಕಾತರರಾಗಿದ್ದಾರೆ.
ಲೈವ್ ಸ್ಟೀಮಿಂಗ್?
2024ರ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯ ಎಲ್ಲ ಪಂದ್ಯಗಳ ನೇರಪ್ರಸಾರವನ್ನು Sony Sports Ten 1 SD and HD TV ಚಾನೆಲ್‌ಗಳಲ್ಲಿ ವೀಕ್ಷಿಸಬಹುದು. ಅಲ್ಲದೆ, SonyLIV ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಭಾರತದ ಎಲ್ಲಾ ಪಂದ್ಯಗಳ ಲೈವ್ ಸಹ ಲಭ್ಯವಿದೆ.
ಭಾರತದ ವೇಳಾಪಟ್ಟಿ
*ಭಾರತ vs ಚೀನಾ- ಸೆಪ್ಟೆಂಬರ್ 8- ಮಧ್ಯಾಹ್ನ 3 ಗಂಟೆಗೆ
*ಭಾರತ vs ಜಪಾನ್- ಸೆಪ್ಟೆಂಬರ್ 9- ಮಧ್ಯಾಹ್ನ 3 ಗಂಟೆಗೆ
*ಭಾರತ vs ಮಲೇಷ್ಯಾ- ಸೆಪ್ಟೆಂಬರ್ 11- ಮಧ್ಯಾಹ್ನ 3:30 ಗಂಟೆಗೆ
*ಭಾರತ vs ದಕ್ಷಿಣ ಕೊರಿಯಾ- ಸೆಪ್ಟೆಂಬರ್ 12- ಮಧ್ಯಾಹ್ನ 1:15 ಗಂಟೆಗೆ
*ಭಾರತ vs ಪಾಕಿಸ್ತಾನ- ಸೆಪ್ಟೆಂಬರ್ 14- ಮಧ್ಯಾಹ್ನ 1:15 ಗಂಟೆಗೆ
*ಸೆಪ್ಟೆಂಬರ್ 16- ಸೆಮಿಫೈನಲ್
*ಸೆಪ್ಟೆಂಬರ್ 17- ಫೈನಲ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications