FIH Hockey Pro League: ಶೂಟೌಟ್‌ನಲ್ಲಿ ಅಬ್ಬರಿಸಿದ ಶ್ರೀಜೇಶ್: ಭಾರತಕ್ಕೆ 4-2 ಗೋಲುಗಳ ಅಂತರದಿಂದ ಜಯ
ಅನುಭವಿ ಗೋಲ್ ಕೀಪರ್ ಪಿಆರ್ ಶ್ರೀಜೇಶ್ ಶೂಟೌಟ್‌ನಲ್ಲಿ ನೀಡಿದ ವೀರಾವೇಶದ ಪ್ರದರ್ಶನದ ಬಲದಿಂದ ಭಾರತವು ಭಾನುವಾರ ಕಳಿಂಗ ಹಾಕಿ ಕ್ರೀಡಾಂಗಣದಲ್ಲಿ ನಡೆದ ಎಫ್‌ಐಎಚ್ ಹಾಕಿ ಪ್ರೊ ಲೀಗ್ 2023/24 ರ ತನ್ನ ಎರಡನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ನೆದರ್‌ಲ್ಯಾಂಡ್ ವಿರುದ್ಧ 4-2 ಗೋಲುಗಳ ಅಂತರದಿಂದ ರೋಚಕ ಜಯ ಸಾಧಿಸಿತು.
ಭಾರತದ ಪರ ಹಾರ್ದಿಕ್ ಸಿಂಗ್ (13ನೇ ನಿಮಿಷ) ಮತ್ತು ಹರ್ಮನ್‌ಪ್ರೀತ್ ಸಿಂಗ್ (58ನೇ ನಿಮಿಷ) ತಲಾ ಒಂದು ಗೋಲು ಗಳಿಸಿದರು. ನೆದರ್‌ಲ್ಯಾಂಡ್ ತಂಡದ ಪರ ಜಿಪ್ ಜಾನ್ಸೆನ್ (30ನೇ ನಿಮಿಷ) ಮತ್ತು ಕೊಯೆನ್ ಬಿಜೆನ್ (39ನೇ ನಿಮಿಷ) ಗೋಲು ಬಾರಿಸಿ ಡ್ರಾ ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ಶ್ರೀಜೇಶ್ ಅವರು ಶೂಟೌಟ್‌ನಲ್ಲಿ ಸೊಗಸಾದ ಪ್ರದರ್ಶನ ನೀಡಿ ಎರಡು ಗೋಲುಗಳನ್ನು ಸೇವ್ ಮಾಡಿದರು. ಭಾರತದ ಪರ ಹರ್ಮನ್‌ಪ್ರೀತ್ ಸಿಂಗ್, ಸುಖಜೀತ್ ಸಿಂಗ್, ಲಲಿತ್ ಉಪಾಧ್ಯಾಯ ಮತ್ತು ಶಂಶೇರ್ ಸಿಂಗ್ ಶೂಟೌಟ್‌ನಲ್ಲಿ ಗೋಲಾಗಿ ಪರಿವರ್ತಿಸುವಲ್ಲಿ ಸಫಲರಾದರು.
ಆರಂಭದಲ್ಲಿ ಅಬ್ಬರಿಸಿದ ಭಾರತ
ಪಂದ್ಯದ ಆರಂಭದಿಂದಲೂ ಭರ್ಜರಿ ಪ್ರದರ್ಶನ ನೀಡಿದ ಟೀಮ್ ಇಂಡಿಯಾ ಪಂದ್ಯದ ಮೇಲೆ ಹಿಡಿತ ಸಾಧಿಸಲು ಹರಸಾಹಸ ಪಟ್ಟಿತು. ಅಲ್ಲದೆ ಈ ಅವಧಿಯಲ್ಲಿ ಚೆಂಡಿನ ಮೇಲೆ ಹಿಡಿತ ಸಾಧಿಸಲು ಶ್ರಮಿಸಿತು. ಅಲ್ಲದೆ ಈ ಅವಧಿಯ ಕೊನೆಯ ಎರಡು ನಿಮಿಷದಲ್ಲಿ ಭಾರತದ ಪರ ಹಾರ್ದಿಕ್ ಸಿಂಗ್ ಗೋಲು ಬಾರಿಸಿ ಅಬ್ಬರಿಸಿದರು. ಪರಿಣಾಮ ಭಾರತ 1-0 ಮುನ್ನಡೆ ಸಾಧಿಸಿತು.

ಎರಡನೇ ಅವಧಿಯಲ್ಲಿ ಸಬಲದ ಹೋರಾಟ
ಎರಡನೇ ಅವಧಿಯಲ್ಲೂ ಟೀಮ್ ಇಂಡಿಯಾ ಗೋಲು ಬಾರಿಸುವ ಯೋಜನೆಯೊಂದಿಗೆ ಅಂಗಳಕ್ಕೆ ಇಳಿಯಿತು. ಆದರೆ ನೆದರ್‌ಲ್ಯಾಂಡ್ ತಂಡ ಉತ್ತಮ ಪ್ರದರ್ಶನ ನೀಡಿತು. ಈ ಅವಧಿಯ ಕೊನೆಯ ಕ್ಷಣದಲ್ಲಿ ಎದುರಾಳಿ ತಂಡದ ಜಿಪ್ ಜಾನ್ಸೆನ್ ಗೋಲು ಬಾರಿಸಿ ಅಬ್ಬರಿಸಿದರು. ಅಲ್ಲದೆ ಗೋಲುಗಳು ಸಮಗೊಂಡಿದ್ದರಿಂದ ಪಂದ್ಯ ರೋಚಕತೆ ಹುಟ್ಟಿಸಿತು.
ಕೊನೆಯ ಕ್ಷಣದಲ್ಲಿ ಮಿಂಚಿದ ಭಾರತ
ಮೂರನೇ ಅವಧಿಯ ಆರಂಭದಲ್ಲಿ ನೆದರ್‌ಲ್ಯಾಂಡ್ ತಂಡ ಉತ್ತಮ ಆಟವನ್ನು ಆಡಿತು. ಈ ಅವಧಿಯಲ್ಲಿ ಭಾರತದ ರಕ್ಷಣಾ ವಿಭಾಗವನ್ನು ತಪ್ಪಿಸಿ ಗೋಲು ಬಾರಿಸುವ ಕನಸು ಹಾಕಿಕೊಂಡಿತ್ತು. ಫಲವಾಗಿ ಪಂದ್ಯದ 9ನೇ ನಿಮಿಷದಲ್ಲಿ ಗೋಲು ಬಾರಿಸಿ, ಗೋಲಿನ ಅಂತರವನ್ನು ಹಿಗ್ಗಿಸಿತು. ಈ ಅವಧಿಯಲ್ಲಿ ಗೋಲು ಬಾರಿಸುವ ಭಾರತದ ಆಸೆ ಫಲಿಸಲಿಲ್ಲ. ಆದರೆ ನಾಲ್ಕನೇ ಅವಧಿಯ ಕೊನೆಯ ಕ್ಷಣದಲ್ಲಿ ಟೀಮ್ ಇಂಡಿಯಾದ ಹರ್ಮನ್ ಪ್ರಿತ್ ಸಿಂಗ್ ಸೊಗಸಾದ ಗೋಲು ಬಾರಿಸಿ ಆರ್ಭಟಿಸಿದರು. ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications