Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

FIH ಹಾಕಿ ಸೀರೀಸ್‌ ಫೈನಲ್ಸ್‌ ಟೂರ್ನಿ: ಸೆಮಿಫೈನಲ್ಸ್‌ಗೆ ಭಾರತ ಲಗ್ಗೆ

FIH: India thrash Uzbekistan 10-0, reach semifinals

ಭುವನೇಶ್ವರ್‌, ಜೂನ್‌ 10: ಪ್ರಶಸ್ತಿ ಗೆಲ್ಲುವ ಫೇವರಿಟ್‌ ತಂಡವಾಗಿರುವ ಆತಿಥೇಯ ಭಾರತ, ಇಲ್ಲಿ ನಡೆಯುತ್ತಿರುವ ಎಫ್‌ಐಎಚ್‌ ಸೀರೀಸ್‌ ಫೈನಲ್ಸ್‌ ಟೂರ್ನಿಯಲ್ಲಿ ಉಜ್ಬೇಕಿಸ್ತಾನ ವಿರುದ್ಧ 10-0 ಅಂತರದ ಭರ್ಜರಿ ಗೆಲುವಿನೊಂದಿಗೆ ಸೆಮಿಫೈನಲ್ಸ್‌ಗೆ ಕಾಲಿಟ್ಟಿದೆ.

ವಿಶ್ವಕಪ್‌ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ

ಪಂದ್ಯದಲ್ಲಿ ಭಾರತ ತಂಡದ ಪರ ಗೋಲ್‌ಗಳ ಸುರುಮಳೆಗೈದ ಆಕಾಶ್‌ದೀಪ್‌ ಸಿಂಗ್‌ ಹ್ಯಾಟ್ರಿಕ್‌ (11ನೇ, 26ನೇ ಮತ್ತು 53ನೇ ನಿಮಿಷ) ಸಂಭ್ರಮ ಆಚರಿಸಿದರೆ, ವರುಣ್‌ ಕುಮಾರ್‌ (4ನೇ ಮತ್ತು 22ನೇ ನಿ.), ಮನ್‌ದೀಪ್‌ ಸಿಂಗ್‌ (30ನೇ ಮತ್ತು 60ನೇ ನಿ.), ಅಮಿತ್‌ ರೋಹಿದಾಸ್‌ (15ನೇ ನಿ.), ನೀಲಕಂಠ ಶರ್ಮಾ (27ನೇ ನಿ.) ಹಾಗೂ ಗುರುಸಾಹಿಬ್ಜಿತ್‌ ಸಿಂಗ್‌ (45ನೇ ನಿ.) ಚೆಂಡನ್ನು ಗುರಿ ಮುಟ್ಟಿಸಿ ತಂಡಕ್ಕೆ ಭರ್ಜರಿ ಗೆಲುವು ತಂದುಕೊಟ್ಟರು.

ಇದರೊಂದಿಗೆ ಭಾರತ ತಂಡ 'ಎ' ಗುಂಪಿನಲ್ಲಿ ಆಡಿದ ಎಲ್ಲಾ ಪಂದ್ಯಗಳನ್ನು ಗೆದ್ದು ಅಗ್ರಸ್ಥಾನದೊಂದಿಗೆ ಅಂತಿಮ ನಾಲ್ಕರ ಘಟ್ಟಕ್ಕೆ ಕಾಲಿಟ್ಟಿದ್ದು, ಇದೀಗ ಫೈನಲ್‌ ಅರ್ಹತೆಗಾಗಿ ಅಪಾಯಕಾರಿ ಜಪಾನ್‌ ಅಥವಾ ಪೋಲೆಂಡ್‌ ಸವಾಲನ್ನು ಎದುರಿಸಲಿದೆ. ಇದೇ ವೇಳೆ 'ಎ' ಗುಂಪಿನಲ್ಲಿ ದ್ವಿತೀಯ ಸ್ಥಾನ ಪಡೆದ ಅಮೆರಿಕ ತಂಡ ಮತ್ತೊಂದು ಸೆಮಿಫೈನಲ್ಸ್‌ನಲ್ಲಿ ರಷ್ಯಾ ಅಥವಾ ಸೌತ್‌ ಆಫ್ರಿಕಾ ವಿರುದ್ಧ ಪೈಪೋಟಿ ನಡೆಸಲಿದೆ.

ಮನ್‌ಪ್ರೀತ್‌ ಸಿಂಗ್‌ ಸಾರಥ್ಯದ ಭಾರತ ತಂಡ ಇದಕ್ಕೂ ಮುನ್ನ ಲೀಗ್‌ ಹಂತದಲ್ಲಿ ಪೋಲೆಂಡ್‌ ಎದುರು 3-1 ಗೋಲ್‌ಗಳ ಜಯ ದಾಖಲಿಸಿತ್ತು.

Story first published: Monday, June 10, 2019, 23:43 [IST]
Other articles published on Jun 10, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+