For Quick Alerts
ALLOW NOTIFICATIONS  
For Daily Alerts

FIH Men's Hockey: ಜಮೈಕಾ ವಿರುದ್ಧ ಭಾರತಕ್ಕೆ 13-0 ಗೋಲುಗಳ ಅಂತರದ ಜಯ: ಕ್ವಾರ್ಟರ್ ಫೈನಲ್‌ಗೆ ಲಗ್ಗೆ

ಮಣಿಂದರ್ ಸಿಂಗ್ ಅವರ ನಾಲ್ಕು ಗೋಲುಗಳ ಸಹಾಯದಿಂದ ಭಾರತವು ಮೂರನೇ ಮತ್ತು ಅಂತಿಮ ಪೂಲ್ ಪಂದ್ಯದಲ್ಲಿ ಜಮೈಕಾವನ್ನು 13-0 ಅಂತರದಿಂದ ಸೋಲಿಸಿ ಎಫ್‌ಐಎಚ್ ಹಾಕಿ 5 ಪುರುಷರ ವಿಶ್ವಕಪ್‌ನ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿತು.

ಎರಡನೇ ನಿಮಿಷದಲ್ಲಿ ಎರಡು ಗೋಲು ಗಳಿಸಿದ ನಂತರ ಮಣಿಂದರ್ 28 ಮತ್ತು 29ನೇ ನಿಮಿಷದಲ್ಲಿ ಗೋಲು ಗಳಿಸಿದರು. ಈ ಮೂಲಕ ಮಣಿಂದರ್ ಸಿಂಗ್ ನಾಲ್ಕೂ ಫೀಲ್ಡ್ ಗೋಲುಗಗಳಿಸಿ ಜಯದಲ್ಲಿ ಮಿಂಚಿದರು. ಇದಲ್ಲದೆ ಮಂಜೀತ್ (5 ಮತ್ತು 24ನೇ ನಿಮಿಷ), ರಾಹೀಲ್ ಮೊಹಮ್ಮದ್ (16 ಮತ್ತು 27ನೇ ನಿಮಿಷ) ಮತ್ತು ಮಂದೀಪ್ ಮೋರ್ (23 ಮತ್ತು 27ನೇ ನಿಮಿಷ) ತಲಾ 2 ಗೋಲು ಗಳಿಸಿದರು.

FIH Men Hockey: star player Maninder Singh Shines As India Thrash Jamaica 13-0, Enter Quarterfinals

ಉತ್ತಮ್ ಸಿಂಗ್ (5ನೇ ನಿಮಿಷ), ಪವನ್ ರಾಜ್‌ಭರ್ (9ನೇ ನಿಮಿಷ) ಮತ್ತು ಗುರ್ಜೋತ್ ಸಿಂಗ್ (14ನೇ ನಿಮಿಷ) ತಲಾ ಒಂದು ಗೋಲು ಗಳಿಸಿದರು. ಭಾರತ ಮೊದಲ ನಿಮಿಷದಿಂದಲೇ ಆಕ್ರಮಣಕಾರಿ ಆಟಕ್ಕೆ ಮಣೆ ಹಾಕಿತು. ಅಲ್ಲದೆ ಆರಂಭಿಕ ಎರಡನೇ ನಿಮಿಷದಲ್ಲೇ ಟೀಮ್ ಇಂಡಿಯಾ 2 ಗೋಲು ದಾಖಲಿಸಿತು. ಇದರ ನಂತರ, ಉತ್ತಮ್ ಮತ್ತು ಮಂಜೀತ್ ಅವರ ತಲಾ ಒಂದು ಗೋಲಿನ ನೆರವಿನಿಂದ ಟೀಮ್ ಇಂಡಿಯಾ ಮೊದಲ ಆರು ನಿಮಿಷಗಳಲ್ಲಿ ಸ್ಕೋರ್ 4-0 ಗೋಲುಗಳ ಮುನ್ನಡೆ ಸಾಧಿಸಿತು.

ಟೀಮ್ ಇಂಡಿಯಾ ಆಟಗಾರರು ಉತ್ತಮ ಲೀಡ್ ಪಡೆದ ಮೇಲೂ ಆಕ್ರಮಣಕಾರಿ ಆಟವನ್ನು ಮುಂದುವರೆಸುವುದನ್ನು ನಿಲ್ಲಿಸಲಿಲ್ಲ. ಪವನ್ ಮತ್ತು ಗುರ್ಜೋತ್ ಗೋಲು ಸಹ ಮೊದಲಾವಧಿಯ ಗೋಲು ದಾಖಲಿಸಿದರು. ಈ ಮೂಲಕ ಟೀಮ್ ಇಂಡಿಯಾ 6-0 ಗೋಲುಗಳಿಂದ ಮುನ್ನಡೆ ಸಾಧಿಸಿದರು.

FIH Men Hockey: star player Maninder Singh Shines As India Thrash Jamaica 13-0, Enter Quarterfinals

ದ್ವಿತೀಯಾರ್ಧದಲ್ಲೂ ಟೀಮ್ ಇಂಡಿಯಾ ಚೆಂಡಿನ ಮೇಲೆ ಸತತ ನಿಯಂತ್ರಣ ಸಾಧಿಸಿದ ಭಾರತ ಸತತ ಗೋಲು ಬಾರಿಸುವ ಪ್ರಯತ್ನ ಮುಂದುವರಿಸಿತು . ರಾಹೀಲ್, ಮಂದೀಪ್, ಮಂಜೀತ್ ಮತ್ತು ಮಣಿಂದರ್ ಗೋಲು ಗಳಿಸಿ ಭಾರತಕ್ಕೆ ದೊಡ್ಡ ಜಯ ತಂದುಕೊಟ್ಟರು.

ಪೂಲ್ ಬಿ ನಲ್ಲಿ ಭಾರತ ಸ್ವಿಟ್ಜರ್ಲೆಂಡ್ ಅನ್ನು ಸೋಲಿಸಿತ್ತು. ಆದರೆ ಈಜಿಪ್ಟ್ ವಿರುದ್ಧ ಸೋತಿತ್ತು. ಈ ಗೆಲುವಿನೊಂದಿಗೆ ಭಾರತ ಕೊನೆಯ 8ರ ಘಟ್ಟಕ್ಕೆ ಲಗ್ಗೆ ಇಟ್ಟಿದೆ. ಈ ಅವಧಿಯಲ್ಲಿ ಭಾರತದ ಹಾಕಿ ಜಾದೂಗಾರರ ಆಕ್ರಮಣಕಾರಿ ಧೋರಣೆಯ ಮುಂದೆ ಜಮೈಕಾದ ರಕ್ಷಣೆ ಸಂಪೂರ್ಣ ವಿಫಲವಾಯಿತು. ಮಣಿಂದರ್ ಸಿಂಗ್ ಟೀಂ ಇಂಡಿಯಾಗೆ ಶುಭಾರಂಭ ಮಾಡಿದರೆ, ಅವರ ನಂತರ ಇತರ ಆಟಗಾರರು ಕೂಡ ಅದ್ಭುತ ಆಟದ ಪ್ರದರ್ಶನ ನೀಡಿ ಗಮನ ಸೆಳೆದರು.

Story first published: Monday, January 29, 2024, 15:32 [IST]
Other articles published on Jan 29, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+