For Quick Alerts
ALLOW NOTIFICATIONS  
For Daily Alerts

Hockey 5s Asia cup Final: ಹಾಕಿಯಲ್ಲಿ ಪಾಕಿಸ್ತಾನವನ್ನು ಮಣಿಸಿ ಚಾಂಪಿಯನ್ ಪಟ್ಟಕ್ಕೇರಿದ ಭಾರತ

ಏಷ್ಯನ್ ಹಾಕಿ ಫೈವ್ಸ್ ವಿಶ್ವಕಪ್ ಅರ್ಹತಾ ಸುತ್ತಿನ ಫೈನಲ್ ಪಂದ್ಯದಲ್ಲಿ ಭಾರತ ಪಾಕಿಸ್ತಾನ ತಂಡವನ್ನು ಎದುರಿಸಿ ಜಯಭೇರಿ ಬಾರಿಸಿದೆ. ಈ ಮೂಲಕ ಏಷ್ಯನ್ ಫೈವ್ಸ್ ಚಾಂಪಿಯನ್‌ಶಿಪ್ ಗೆದ್ದುಕೊಂಡಿದೆ. ಎರಡು ತಂಡಗಳು ಕೂಡ ತಲಾ 4 ಗೋಲುಗಳನ್ನು ಬಾರಿಸಿ ಪಂದ್ಯದ ಮುಕ್ತಾಯದಲ್ಲಿ ಸಮಬಲ ಸಾಧಿಸಿದ್ದ ಕಾರಣ ಪೆನಾಲ್ಟಿ ಶೂಟೌಟ್ ಮೂಲಕ ಫಲಿತಾಂಶ ನಿರ್ಧರಿಸಲಾಗಿದೆ. ಈ ಫೆನಾಲ್ಟಿ ಶೂಟೌಟ್‌ನಲ್ಲಿ ಭಾರತ ಪಾಕಿಸ್ತಾನ ತಂಡವನ್ನು 6-4 ಅಂತರದಿಂದ ಮಣಿಸಿದೆ.

ಇದೇ ಮೊದಲ ಬಾರಿಗೆ ಭಾರತ ಹಾಕಿ ಫೈವ್ಸ್ ಮಾದರಿಯಲ್ಲಿ ಮೂರು ಮುಖಾಮುಖಿಯಲ್ಲಿಯೂ ಪಾಕಿಸ್ತಾನ ತಂಡವನ್ನು ಮಣಿಸಿದ ಸಾಧನೆ ಮಾಡಿದೆ. ಆದರೆ ಫೈನಲ್ ಪಂದ್ಯ ಭಾರತಕ್ಕೆ ಸವಾಲಿನಿಂದ ಕೂಡಿತ್ತು ಎನ್ನುವುದು ಕೂಡ ನಿಜ. ಮೊದಲಾರ್ಧ ಮುಕ್ತಾಯದ ಸಂದರ್ಭದಲ್ಲಿ ಭಾರತ 2-4 ಅಂತರದಿಂದ ಹಿನ್ನಡೆಯಲ್ಲಿತ್ತು. ಆದರೆ ಅದಾದ ಬಳಿಕ ಅದ್ಭುತವಾಗಿ ಕಮ್‌ಬ್ಯಾಕ್ ಮಾಡಿ ಪಂದ್ಯವನ್ನು ಸಮಬಲಕ್ಕೆ ತಂದು ನಿಲ್ಲಿಸುವಲ್ಲಿ ಯಶಸ್ವಿಯಾಗಿತ್ತು.

Hockey 5s Asia cup Final: India won against Pakistan in Penalty Shootout

ಈ ಪಂದ್ಯದಲ್ಲಿ ಭಾರತದ ಪರವಾಗಿ ಹೀರೋ ಆಗಿ ಹೊರಹೊಮ್ಮಿದವರು ಮೊಹಮ್ಮದ್ ರಹೀಲ್. 2-4 ಅಂತರದಿಂದ ಹಿನ್ನಡೆಯಲ್ಲಿದ್ದಾಗ ಸತತ ಎರಡು ಗೋಲು ಬಾರಿಸಿದ ರಹೀಲ್ ಭಾರತದ ಕಮ್‌ಬ್ಯಾಕ್‌ಗೆ ಕಾರಣವಾದರು. ಹೀಗಾಗಿ ಭಾರತ ಪೆನಾಲ್ಟಿ ಶೂಟೌಟ್ ಮೂಲಕ ಫಲಿತಾಂಶ ಕಂಡುಕೊಳ್ಳಲು ಸಾಧ್ಯವಾಯಿತು.

ಈ ಪಂದ್ಯ ಆರಂಭವಾದ ಐದನೇ ನಿಮಿಷದಲ್ಲಿಯೇ ಪಾಕಿಸ್ತಾನ ತನ್ನ ಮೊದಲ ಗೋಲು ದಾಖಲಿಸಿತ್ತು. ಅಬ್ದುಲ್ ರೆಹ್ಮಾನ್ ಪಾಕ್ ತಂಡಕ್ಕೆ ಆರಂಭಿಕ ಮುನ್ನಡೆಯನ್ನು ಒದಗಿಸುವಲ್ಲಿ ಯಶಸ್ವಿಯಾಗಿದ್ದರು. ಆದರೆ ಅದಾದ ಎರಡೇ ನಿಮಿಷದಲ್ಲಿ ಭಾರತ ಕೂಡ ಮೊದಲ ಗೋಲು ಬಾರಿಸುವ ಮೂಲಕ 1-1 ಅಂತರದಿಂದ ಸಮಬಲ ಸಾಧಿಸಿತು. ಜುಗ್ರಾಜ್ ಸಿಂಗ್ ಈ ಗೋಲು ಬಾರಿಸಿದ್ದರು.

ಪಂದ್ಯದ ಹತ್ತಮೇ ನಿಮಿಷದಲ್ಲಿ ಭಾರತದ ಪರವಾಗಿ ಮಣಿಂದರ್ ಸಿಂಗ್ ಗೋಲು ಸಿಡಿಸುವ ಮೂಲಕ ಭಾರತ 2-1 ಅಂತರದಿಂದ ಮುನ್ನಡೆ ಸಾಧಿಸಿತು. ಆದರೆ 13ನೇ ನಿಮಿಷದಲ್ಲಿ ಪಾಕಿಸ್ತಾನ ಕೂಡ ಸಮಬಲಗ ಗೋಲು ಸಿಡಿಸಿತ್ತು. ಅದಾದ ಬಳಿಕ ಪಾಖಿಸ್ತಾನ ಮೊದಲಾರ್ಧದಲ್ಲಿಯೇ ಮತ್ತೊಂದು ಗೋಲು ಸಿಡಿಸಿತ್ತು. ಅಲ್ಲಿಗೆ ಪಾಕಿಸ್ತಾನ ತಂಡ ಭಾರತಕ್ಕಿಂತ ಮುನ್ನಡೆ ಸಾಧಿಸುವಲ್ಲಿ ಯಶಸ್ವಿಯಾಗಿತ್ತು.

ಬಳಿಕ ದ್ವಿತಿಯಾರ್ಧದಲ್ಲಿಯೂ ಪಾಕಿಸ್ತಾನ ಮತ್ತೊಂದು ಗೋಲು ಸಿಡಿಸಿತ್ತು, ಈ ಮೂಲಕ ಪಾಕಿಸ್ತಾನ ತಂಡ ಭಾರತಕ್ಕಿಂತ 2 ಗೋಲುಗಳ ಮುನ್ನಡೆ ಸಾಧಿಸಿತು. ಆದರೆ ಈ ಖೂಷಿ ಹೆಚ್ಚು ಕಾಲ ಇರಲಿಲ್ಲ. ಭಾರತದ ಪರವಾಗೊ ರಹೀಲ್ ಮೂರನೇ ಗೋಲು ಸಿಡಿಸಿದರು. ಬಳಿಕ ಪಂದ್ಯದ 27ನೇ ನಿಮಿಷದಲ್ಲಿ ಭಾರತ ನಾಲ್ಕನೇ ಗೋಲು ಬಾರಿಸುವ ಮೂಲಕ ಪಂದ್ಯದಲ್ಲಿ ಸಮಬಲ ಸಾಧಿಸಿತು. ಈ ಬಾರಿ ಮತ್ತೆ ರಹೀಲ್ ಭಾರತಕ್ಕೆ ಹೀರೋ ಆಗಿ ಮೆರೆದಿದ್ದಾರೆ. ಈ ಮೂಲಕ ಭಾರತ ಈ ಪಂದ್ಯದಲ್ಲಿ ಸಮಬಲ ಸಾಧಿಸಿತು.

Story first published: Saturday, September 2, 2023, 22:40 [IST]
Other articles published on Sep 2, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+