ಉರಿದ ಪಾಕಿಸ್ತಾನಕ್ಕೆ ಫೈನಲ್ ನಲ್ಲಿ ಜರ್ಮನಿ ಗುದ್ದು
ಭುವನೇಶ್ವರ, ಡಿ. 15: ಚಾಂಪಿಯನ್ಸ್ ಟ್ರೋಫಿ ಹಾಕಿ ಪಂದ್ಯಾವಳಿ ಜರ್ಮನಿ ಪಾಲಾಗಿದೆ. ಪಾಕಿಸ್ತಾನವನ್ನು 2-0 ಅಂತರದಲ್ಲಿ ಜಯಿಸಿದ ಜರ್ಮನಿ ಪಟ್ಟ ಅಲಂಕರಿಸಿದೆ.
ಇಲ್ಲಿನ ಕಾಳಿಂಗ ಕ್ರೀಡಾಂಗಣದಲ್ಲಿ ಕ್ರಿಸ್ಟೋಫರ್ ವೆಸ್ಲೆ(18 ನೇ ನಿಮಿಷ) ಮತ್ತು ಫ್ಲೋರಿಯನ್ (56ನೇ ನಿಮಿಷ) ದಲ್ಲಿ ಸಿಡಿಸಿದ ಗೋಲು ಜರ್ಮನಿಗೆ ಸುಲಭ ಜಯ ತಂದುಕೊಟ್ಟಿತು. ಇತ್ತ ಪಾಕಿಸ್ತಾನ ಕನಿಷ್ಠ ಒಂದು ಗೋಲು ಗಳಿಸಲಾಗದೆ ನಿರಾಶೆ ಅನುಭವಿಸಿತು.[ಹುಚ್ಚಾಟ ತೋರಿದ ಪಾಕಿಸ್ತಾನದ ಜತೆ ಹಾಕಿ ಆಡಲ್ಲ]

ಈ ಮೂಲಕ ಜರ್ಮನಿ ಒಟ್ಟು ಹತ್ತು ಸಾರಿ ಚಾಂಪಿಯನ್ಸ್ ಟ್ರೋಫಿ ಹಾಕಿ ಪಂದ್ಯಾವಳಿ ಗೆದ್ದಂತಾಯಿತು. 2007 ರಲ್ಲಿ ಜರ್ಮನಿ ಕೊನೆಯ ಬಾರಿಗೆ ಪ್ರಶಸ್ತಿಗೆ ಮುತ್ತಿಕ್ಕಿತ್ತು. ಪಂದ್ಯದ ಆರಂಭದಿಂದಲೂ ಆಕ್ರಮಣಕಾರಿ ಆಟಕ್ಕೆ ಮುಂದಾದ ಜರ್ಮನ್ನರು ಪಾಕಿಸ್ತಾನಕ್ಕೆ ಸರಿಯಾದ ನಿಯಂತ್ರಣವನ್ನೇ ಹಾಕಿದರು. ಭಾರತದ ವಿರುದ್ಧ ಗೆದ್ದು ಹುಚ್ಚಾಟ ತೋರಿದ್ದ ಪಾಕ್ ಆಟಗಾರು ಜರ್ಮನಿ ಮುಂದೆ ಸೋತು ಸುಣ್ಣವಾದರು.
ಮೊದಲಾರ್ಧದಲ್ಲಿ 1-0 ಮುನ್ನಡೆ ಸಾಧಿಸಿದ್ದ ಜರ್ಮನಿ ಪಂದ್ಯದ ಕೊನೆ ಘಟ್ಟದಲ್ಲಿ ಇನ್ನೊಂದು ಗೋಲು ದಾಖಲಿಸಿ ಪಂದ್ಯವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿತು. ಫೈನಲ್ ಸೋತರೂ ಪಾಕಿಸ್ತಾನ ಆಟಗಾರರು ಸಂಭ್ರಮಿಸುತ್ತಲೇ ಇದ್ದಿದ್ದು ಮಾತ್ರ ವಿಚಿತ್ರವಾಗಿತ್ತು.
ಚಾಂಫಿಯನ್ಸ್ ಟ್ರೋಫಿ ಅಂತಿಮ ಸ್ಥಾನಗಳು
1. ಜರ್ಮನಿ
2. ಪಾಕಿಸ್ತಾನ
3. ಆಸ್ಟ್ರೇಲಿಯಾ
4. ಭಾರತ
5. ನೆದರಲ್ ಲೆಂಡ್
6. ಅರ್ಜೆಂಟೀನಾ
7. ಇಂಗ್ಲೆಂಡ್
8. ಬೆಲ್ಜಿಯಂ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications