2024ರ ಎಫ್‌ಐಎಚ್ ಹಾಕಿ ವಿಶ್ವಕಪ್‌ಗಾಗಿ ಪುರುಷರ, ಮಹಿಳಾ ತಂಡಗಳನ್ನು ಪ್ರಕಟಿಸಿದ ಹಾಕಿ ಇಂಡಿಯಾ
ಒಮಾನ್‌ನ ಮಸ್ಕತ್‌ನಲ್ಲಿ ನಡೆಯಲಿರುವ ಮುಂಬರುವ 2024ರ ಎಫ್‌ಐಎಚ್ ಹಾಕಿ ವಿಶ್ವಕಪ್‌ಗೆ ಭಾರತೀಯ ಪುರುಷರ, ಮಹಿಳಾ ತಂಡಗಳನ್ನು ಹಾಕಿ ಇಂಡಿಯಾ ಭಾನುವಾರ, ಡಿಸೆಂಬರ್ 31ರಂದು ಪ್ರಕಟಿಸಿದೆ.
ಸಿಮ್ರಂಜೀತ್ ಸಿಂಗ್ ಮತ್ತು ರಜನಿ ಎಟಿಮಾರ್ಪು ಕ್ರಮವಾಗಿ ಭಾರತೀಯ ಪುರುಷರ ಮತ್ತು ಮಹಿಳೆಯರ ತಂಡಗಳನ್ನು ಮುನ್ನಡೆಸಲಿದ್ದಾರೆ ಎಂದು ಹಾಕಿ ಇಂಡಿಯಾ ತಿಳಿಸಿದೆ.
ಹಾಕಿ ಮಹಿಳಾ ವಿಶ್ವಕಪ್ ಜನವರಿ 24ರಿಂದ ಮತ್ತು 27ರ ನಡುವೆ ನಡೆಯಲಿದ್ದು, ಪುರುಷರ ಪಂದ್ಯಾವಳಿಯನ್ನು ಜನವರಿ 28ರಿಂದ ಜನವರಿ 31ರವರೆಗೆ ನಿಗದಿಪಡಿಸಲಾಗಿದೆ.

ಅನುಭವಿ ಗೋಲ್‌ಕೀಪರ್ ರಜನಿ ಎಟಿಮಾರ್ಪು ಅವರಿಗೆ ಡಿಫೆಂಡರ್ ಮಹಿಮಾ ಚೌಧರಿ ಅವರನ್ನು ಉಪನಾಯಕಿಯನ್ನಾಗಿ ನೇಮಕ ಮಾಡಿದ್ದರೆ, ಮನ್‌ದೀಪ್ ಮೋರ್ ಭಾರತೀಯ ಪುರುಷ ತಂಡದ ಉಪನಾಯಕರಾಗಿದ್ದಾರೆ.
ಭಾರತ ಮಹಿಳಾ ಹಾಕಿ ತಂಡದಲ್ಲಿ ಬನ್ಸಾರಿ ಸೋಲಂಕಿ ಎರಡನೇ ಗೋಲ್‌ಕೀಪರ್ ಆಗಿದ್ದು, ಅಕ್ಷತಾ ಅಬಾಸೊ ಧೆಕಾಲೆ ಮತ್ತು ಜ್ಯೋತಿ ಛತ್ರಿ ಡಿಫೆಂಡರ್‌ಗಳಾಗಿದ್ದಾರೆ.
ಮಿಡ್‌ಫೀಲ್ಡರ್‌ಗಳಲ್ಲಿ ಮರಿಯಾನಾ ಕುಜೂರ್ ಮತ್ತು ಮುಮ್ತಾಜ್ ಖಾನ್ ಅವರನ್ನು ಹೆಸರಿಸಲಾಗಿದ್ದು, ಅಜ್ಮಿನಾ ಕುಜೂರ್, ರುತಾಜಾ ದಾದಾಸೊ ಪಿಸಲ್ ಮತ್ತು ದೀಪಿಕಾ ಸೊರೆಂಗ್ ಫಾರ್ವರ್ಡ್ ಆಟಗಾರ್ತಿಯರಾಗಿ ಸ್ಥಾನ ಪಡೆದಿದ್ದಾರೆ.
ಭಾರತೀಯ ಮಹಿಳಾ ತಂಡವನ್ನು ನಮೀಬಿಯಾ, ಪೋಲೆಂಡ್ ಮತ್ತು ಯುನೈಟೆಡ್ ಸ್ಟೇಟ್ಸ್ (ಯುಎಸ್ಎ) ಜೊತೆಗೆ ಸಿ ಗುಂಪಿನಲ್ಲಿ ಒಟ್ಟುಗೂಡಿಸಲಾಗಿದೆ.
ಒಟ್ಟು 16 ತಂಡಗಳು ಹಾಕಿ ಮಹಿಳಾ ವಿಶ್ವಕಪ್‌ನಲ್ಲಿ ಭಾಗವಹಿಸಲಿದ್ದು, ಇದರಲ್ಲಿ ಫಿಜಿ, ಮಲೇಷ್ಯಾ, ನೆದರ್‌ಲ್ಯಾಂಡ್ಸ್ ಮತ್ತು ಆತಿಥೇಯ ಓಮನ್ ಪೂಲ್ ಎ ನಲ್ಲಿವೆ.

ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಉಕ್ರೇನ್ ಮತ್ತು ಜಾಂಬಿಯಾ ಪೂಲ್ ಬಿ ನಲ್ಲಿದ್ದರೆ ಮತ್ತು ಡಿ ಗುಂಪಿನಲ್ಲಿ ನ್ಯೂಜಿಲೆಂಡ್, ಪರಾಗ್ವೆ, ಥೈಲ್ಯಾಂಡ್ ಮತ್ತು ಉರುಗ್ವೆ ತಂಡಗಳು ಒಳಗೊಂಡಿವೆ.
"ತಂಡವು ಸಾಕಷ್ಟು ಅಂತಾರಾಷ್ಟ್ರೀಯ ಅನುಭವ ಮತ್ತು ಹಾಕಿ ಶ್ವಕಪ್‌ನಂತಹ ಪ್ರತಿಷ್ಠಿತ ಟೂರ್ನಿಯಲ್ಲಿ ಆಡುವ ಸವಾಲುಗಳ ತಿಳುವಳಿಕೆಯನ್ನು ಹೊಂದಿರುವ ಯುವ ಆಟಗಾರ್ತಿಯರನ್ನು ಒಳಗೊಂಡಿದೆ. ನಾವು ಚೆನ್ನಾಗಿ ಸಿದ್ಧರಾಗಿದ್ದೇವೆ ಮತ್ತು ಪಂದ್ಯಾವಳಿಗೂ ಮುನ್ನ ಲವಲವಿಕೆಯಿಂದ ಇದ್ದೇವೆ," ಎಂದು ಕೋಚ್ ಸೌಂದರ್ಯ ಹಾಕಿ ಇಂಡಿಯಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇನ್ನು ಒಲಿಂಪಿಕ್ ಕಂಚಿನ ಪದಕ ವಿಜೇತ ಸಿಮ್ರಂಜೀತ್ ಸಿಂಗ್ ನಾಯಕತ್ವದ ಭಾರತೀಯ ಪುರುಷರ ತಂಡದಲ್ಲಿ ಗೋಲ್‌ಕೀಪರ್‌ಗಳಾದ ಸೂರಜ್ ಕರ್ಕೇರಾ ಮತ್ತು ಪ್ರಶಾಂತ್ ಕುಮಾರ್ ಚೌಹಾಣ್ ಸ್ಥಾನ ಪಡೆದಿದ್ದಾರೆ.
ಮನ್‌ದೀಪ್ ಮೊರ್‌ಗೆ ಮಂಜೀತ್ ರಕ್ಷಣಾ ವಿಭಾಗದಲ್ಲಿ ಸೇರುತ್ತಾರೆ. ಮಿಡ್‌ಫೀಲ್ಡ್‌ನಲ್ಲಿ ಮೊಹಮ್ಮದ್ ರಹೀಲ್ ಮೌಸೀನ್ ಮತ್ತು ಮಣಿಂದರ್ ಸಿಂಗ್ ಮತ್ತು ಫಾರ್ವರ್ಡ್-ಲೈನ್‌ನಲ್ಲಿ ಪವನ್ ರಾಜ್‌ಭರ್, ಗುರ್ಜೋತ್ ಸಿಂಗ್ ಮತ್ತು ಉತ್ತಮ್ ಸಿಂಗ್ ಮತ್ತು ನಾಯಕ ಸಿಮ್ರಂಜೀತ್ ಇದ್ದಾರೆ.
ಪೂಲ್ ಬಿ ಗುಂಪಿನಲ್ಲಿರುವ ಭಾರತ ತಂಡವು ನಾಕೌಟ್ ಸುತ್ತುಗಳನ್ನು ಪ್ರವೇಶಿಸಲು ಈಜಿಪ್ಟ್, ಜಮೈಕಾ ಮತ್ತು ಸ್ವಿಟ್ಜರ್ಲೆಂಡ್ ವಿರುದ್ಧ ಆಡಬೇಕಿದೆ.
ಕಣದಲ್ಲಿರುವ ಇತರ ತಂಡಗಳಲ್ಲಿ ನೆದರ್ಲ್ಯಾಂಡ್ಸ್, ನೈಜೀರಿಯಾ, ಪಾಕಿಸ್ತಾನ ಮತ್ತು ಪೋಲೆಂಡ್ ಪೂಲ್ ಎ ನಲ್ಲಿ ಸ್ಥಾನ ಪಡೆದಿವೆ ಮತ್ತು ಆಸ್ಟ್ರೇಲಿಯಾ, ಕೀನ್ಯಾ, ನ್ಯೂಜಿಲೆಂಡ್, ಟ್ರಿನಿಡಾಡ್ ಮತ್ತು ಟೊಬಾಗೊ ಪೂಲ್ ಸಿ ತಂಡಗಳಾಗಿವೆ ಮತ್ತು ಪೂಲ್ ಡಿ ನಲ್ಲಿ ಫಿಜಿ, ಮಲೇಷ್ಯಾ, ಓಮನ್, ಯುನೈಟೆಡ್ ಸ್ಟೇಟ್ಸ್ (ಯುಎಸ್ಎ) ಸೇರಿವೆ.
"ಈ ರೋಚಕ ಸ್ವರೂಪದ ಹಾಕಿ ಪಂದ್ಯಾವಳಿಗಾಗಿ ನಾವು ಯುವ ಆಟಗಾರರು ಮತ್ತು ಅನುಭವ ಹೊಂದಿರುವ ಅತ್ಯಂತ ಸಮತೋಲಿತ ತಂಡವನ್ನು ಆಯ್ಕೆ ಮಾಡಿದ್ದೇವೆ," ಎಂದು ಪುರುಷರ ತಂಡದ ಕೋಚ್ ಸರ್ದಾರ್ ಸಿಂಗ್ ಹೇಳಿದರು.
"ಈ ತಂಡದಲ್ಲಿರುವ ಹಲವಾರು ಆಟಗಾರರು ಈಗಾಗಲೇ ಈ ಸ್ವರೂಪವನ್ನು ಆಡಿದ ಅನುಭವವನ್ನು ಹೊಂದಿದ್ದಾರೆ ಮತ್ತು ಉತ್ತಮ ಪ್ರದರ್ಶನ ನೀಡಲು ಉತ್ಸುಕರಾಗಿದ್ದಾರೆ. ನಾವು ಈ ಪಂದ್ಯಾವಳಿಗಾಗಿ ಶ್ರಮಿಸಿದ್ದೇವೆ ಮತ್ತು ಟೂರ್ನಿಯನ್ನು ಉತ್ತಮವಾಗಿ ಮುಗಿಸಲು ಎದುರು ನೋಡುತ್ತಿದ್ದೇವೆ,"ಎಂದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications