Hockey: ಪಾಕ್ ವಿರುದ್ಧ ಭಾರತಕ್ಕೆ 4-3 ಗೋಲುಗಳ ಜಯ
ಲಂಡನ್‌ನಲ್ಲಿ ನಡೆದ ಎಫ್‌ಐಎಚ್ ಪ್ರೊ ಲೀಗ್ 2026 ರ ರೋಮಾಂಚಕ ಪಂದ್ಯದಲ್ಲಿ, ಭಾರತ ಹಾಕಿ ತಂಡವು 4-3 ಗೋಲುಗಳ ಅಂತರದಿಂದ ಪಾಕಿಸ್ತಾನವನ್ನು ಸೋಲಿಸಿತು. ಈ ಅದ್ಭುತ ಗೆಲುವಿನೊಂದಿಗೆ, ಭಾರತವು ಪಾಕಿಸ್ತಾನದ ಮೇಲೆ ತನ್ನ ಪ್ರಾಬಲ್ಯವನ್ನು ಉಳಿಸಿಕೊಂಡಿತು.
ಪಂದ್ಯದ ಆರಂಭದಲ್ಲಿ ಪಾಕಿಸ್ತಾನ ಪಂದ್ಯದ ಮೇಲೆ ಹಿಡಿತ ಸಾಧಿಸುವ ಸೂಚನೆ ನೀಡಿತು. ಆದರೆ ಭಾರತ ಭರ್ಜರಿ ಪ್ರದರ್ಶನ ನೀಡಿತು. ಅಭಿಷೇಕ್, ನೀಲಕಾಂಠ್ ಶರ್ಮಾ, ಸುಖ್‌ಜೀತ್ ಸಿಂಗ್ ಮತ್ತು ರಾಜಿಂದರ್ ಭಾರತದ ಪರ ಅದ್ಭುತ ಗೋಲುಗಳನ್ನು ಬಾರಿಸಿದರು. ತಂಡಕ್ಕೆ 4-1 ಮುನ್ನಡೆ ನೀಡಿದರು. ಆದರೆ ಪಾಕ್ ಕೊನೆಯ ಕ್ಷಣದಲ್ಲಿ ಸತತ ಎರಡು ಗೋಲುಗಳನ್ನು ಬಾರಿಸಿ ಪಂದ್ಯವನ್ನು ಇನ್ನಷ್ಟು ರೋಮಾಂಚನಗೊಳಿಸಿತು. ಕೊನೆಯ ಕ್ಷಣದಲ್ಲಿ ಭಾರತದ ಆಟಗಾರರು ಒತ್ತಡವನ್ನು ಚೆನ್ನಾಗಿ ನಿಭಾಯಿಸಿದ್ದರಿಂದ ಪಾಕ್ ಮುನ್ನಡೆಯ ಕನಸು ನನಸಾಗಲಿಲ್ಲ.

ಮೊದಲ ಕ್ವಾರ್ಟರ್‌ನ ಕೊನೆಯ ನಿಮಿಷಗಳಲ್ಲಿ, ಭಾರತ ಭರ್ಜರಿ ರಣತಂತ್ರೊಂದಿಗೆ ಪುನರಾಗಮನ ಮಾಡಿತು. ಈ ಅವಧಿಯಲ್ಲಿ ಭಾರತಕ್ಕೆ ಪೆನಾಲ್ಟಿ ಅವಕಾಶಗಳು ಲಭಿಸಿದವು. ಆದರೆ ಪಾಕಿಸ್ತಾನದ ಉತ್ತಮ ರಕ್ಷಣಾ ಆಟ ಭಾರತದ ಆಸೆಗೆ ಪೆಟ್ಟು ನೀಡಿತು. ಭಾರತ ತಂಡವು ಮೊದಲ ಕ್ವಾರ್ಟರ್‌ನಲ್ಲಿ ಒಂದೇ ಒಂದು ಗೋಲು ಗಳಿಸಲು ಸಾಧ್ಯವೇ ಆಗಲಿಲ್ಲ. ಪರಿಣಾಮ ಪಾಕ್ ಮೊದಲ ಕ್ವಾರ್ಟರ್‌ನಲ್ಲಿ 1-0 ಮುನ್ನಡೆ ಸಾಧಿಸಿತು.
ಎರಡನೇ ಅವಧಿಯಲ್ಲಿ ಭರ್ಜರಿ ಪ್ರದರ್ಶನ
ಆದರೆ ಎರಡನೇ ಅವಧಿಯಲ್ಲಿ ಟೀಮ್ ಇಂಡಿಯಾ ಭರ್ಜರಿ ಪ್ರದರ್ಶನ ನೀಡಿತು. ಈ ಅವಧಿಯಲ್ಲಿ ಅಭಿಷೇಕ್ ಗೋಲು ಬಾರಿಸಿ ಅಂತರವನ್ನು ಸಮನಾಗಿಸುವಲ್ಲಿ ಶ್ರಮಿಸಿದರು. ಇನ್ನು ಭರವಸೆಯ ಆಟಗಾರ ನೀಲಕಂಠ ಶರ್ಮಾ ತಂಡದ ಗೋಲುಗಳ ಸಂಖ್ಯೆಯನ್ನು ಹಿಗ್ಗಿಸುವಲ್ಲಿ ಶ್ರಮಿಸಿದರು. ಪರಿಣಾಮ ಟೀಮ್ ಇಂಡಿಯಾ ಪಂದ್ಯದಲ್ಲಿ ಮೊದಲ ಬಾರಿಗೆ ಮುನ್ನಡೆ ಸಾಧಿಸಿತು. ಈ ಅವಧಿಯ ಮುಕ್ತಾಯದ ವೇಳೆ ಭಾರತ 2-1 ಗೋಲುಗಳ ಮುನ್ನಡೆ ಸಾಧಿಸಿತು.
ಮೂರನೇ ಕ್ವಾರ್ಟರ್‌ನಲ್ಲಿ ಭಾರತವು ಮೈದಾನದಲ್ಲಿ ಪ್ರಾಬಲ್ಯ ಸಾಧಿಸಿತು. ಭಾರತದ ಪರ ಸುಖ್‌ಜೀತ್ ಸಿಂಗ್ ಅತ್ಯುತ್ತಮ ಪ್ರದರ್ಶನ ನೀಡಿ ಮೂರನೇ ಗೋಲು ಗಳಿಸಿದರು, ಇದು ಟೀಮ್ ಇಂಡಿಯಾದ ಮುನ್ನಡೆಯನ್ನು ಮತ್ತಷ್ಟು ಹಿಗ್ಗಿಸಿತು.
ನಾಲ್ಕನೇ ಅವಧಿಯಲ್ಲಿ ಟೀಮ್ ಇಂಡಿಯಾ ಸಿಕ್ಕ ಪೆನಾಲ್ಟಿ ಅವಕಾಶವನ್ನು ಬಳಸಿಕೊಂಡು ಗೋಲು ಬಾರಿಸಿ ಅಂತರವನ್ನು 4-1ಕ್ಕೆ ಹೆಚ್ಚಿಸಿಕೊಂಡಿತು. ಭಾರತ ಈ ಪಂದ್ಯವನ್ನು ಸುಲಭವಾಗಿ ಗೆಲ್ಲಬಹುದು ಎಂಬ ಲೆಕ್ಕಾಚಾರ ಹಾಕಿಕೊಳ್ಳಲಾಗಿತ್ತು. ಆದರೆ ಕೊನೆಯ ನಿಮಿಷದಲ್ಲಿ ಪಾಕ್ ಪ್ರತಿದಾಳಿ ನಡೆಸಿ ಸತತ ಎರಡು ಗೋಲುಗಳನ್ನು ಗಳಿಸುವ ಮೂಲಕ ಭಾರತದ ರಕ್ಷಣಾ ವಿಭಾಗಕ್ಕೆ ಪೆಟ್ಟು ನೀಡಿತು. ಆದರೆ ನಂತರ ಟೀಮ್ ಇಂಡಿಯಾದ ಆಟಗಾರರು ಯಾವುದೇ ತಪ್ಪನ್ನು ಮಾಡದ ಕಾರಣ ಪಂದ್ಯವನ್ನು ಪಾಕ್ ಸೋತಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications