Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಭಾರತ ಕಿರಿಯರ ಹಾಕಿ ತಂಡದ ಕೋಚ್‌ ಜೂಡ್‌ ಫೆಲಿಕ್ಸ್‌ ತಲೆದಂಡ!

Hockey India sacks Jude Felix, advertises for new junior mens hockey coach

ಹೊಸದಿಲ್ಲಿ, ಜೂನ್‌ 19: ಮ್ಯಾಡ್ರಿಡ್‌ನಲ್ಲಿ ನಡೆದ 8 ರಾಷ್ಟ್ರಗಳ ನಡುವಣ ಹಾಕಿ ಟೂರ್ನಿಯಲ್ಲಿ ಭಾರತ ಕಿರಿಯರ ಹಾಕಿ ತಂಡ ನಿರಾಶಾದಾಯಕ 6ನೇ ಸ್ಥಾನ ಪಡೆದ ಹಿನ್ನೆಲೆಯಲ್ಲಿ ಕೋಚ್‌ ಜೂಡ್‌ ಫೆಲಿಕ್ಸ್‌ ಅವರನ್ನು ಹಾಕಿ ಇಂಡಿಯಾ ಕಿತ್ತೊಗೆದಿದೆ.

ವಿಶ್ವಕಪ್‌ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ

ಹಾಕಿ ಇಂಡಿಯಾ, ಭಾರತದ ಕಿರಿಯರ ಹಾಕಿ ತಂಡಕ್ಕೆ ನೂತನ ಕೋಚ್‌ ನೇಮಕ ಕುರಿತಾಗಿ ಬುಧವಾರ ಜಾಹೀರಾತು ನೀಡಿದ ಬಳಿಕ ಈ ವಿದ್ಯಮಾನ ಬೆಳಕಿಗೆ ಬಂದಿದೆ. ಕಿರಿಯರ ವಿಭಾಗದಲ್ಲಿ ವಿಶ್ವ ಚಾಂಪಿಯನ್ಸ್‌ ಆಗಿರುವ ಭಾರತ ತಂಡ ಇತ್ತೀಚಿನ ಟೂರ್ನಿಯಲ್ಲಿ ನೀಡಿದ ಕಳಪೆ ಪ್ರದರ್ಶನವೇ ಜೂಡ್‌ ಫೆಲಿಕ್ಸ್‌ ಅವರ ತಲೆದಂಡಕ್ಕೆ ಪ್ರಮುಖ ಕಾರಣವಾಗಿದೆ ಎಂದು ಹಾಕಿ ಇಂಡಿಯಾದ ಮೂಲಗಳು ತಿಳಿಸಿವೆ.

"ಇದು ನಿರೀಕ್ಷಿತ. ಮ್ಯಾಡ್ರಿಡ್‌ನಲ್ಲಿ ನಡೆದ 8 ರಾಷ್ಟ್ರಗಳ ನಡುವಣ ಟೂರ್ನಿಯಲ್ಲಿ ಭಾರತ ತಂಡದ ಅತ್ಯಂತ ಕಳಪೆ ಪ್ರದರ್ಶನದ ಬಳಿಕ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ,'' ಎಂದು ಹಾಕಿ ಇಂಡಿಯಾದ ಮೂಲಗಳು ಹೇಳಿವೆ.

ಟೂರ್ನಿಯಲ್ಲಿ ಭಾರತ ಕಿರಿಯರ ತಂಡ ಆಸ್ಟ್ರೇಲಿಯಾ ವಿರುದ್ಧ 0-4, ನೆದರ್ಲೆಂಡ್ಸ್‌ ವಿರುದ್ಧ 2-3, ಸ್ಪೇನ್‌ ವಿರುದ್ಧ 1-3, ಗ್ರೇಟ್‌ ಬ್ರಿಟನ್‌ ಎದುರು 1-2 ಅಂತರದಲ್ಲಿ ಸೋಲು ಸುಣ್ಣವಾಗಿತ್ತು. ಕೇವಲ ಆಸ್ಟ್ರಿಯಾ ವಿರುದ್ಧದ ಪಂದ್ಯದಲ್ಲಿ 4-2 ಗೋಲ್‌ಗಳಿಂದ ತನ್ನ ಏಕಮಾತ್ರ ಗೆಲುವನ್ನು ದಾಖಲಿಸಿತ್ತು.

2017ರಲ್ಲಿ ಭಾರತ ಕಿರಿಯರ ಹಾಕಿ ತಂಡದ ಕೋಚ್‌ ಆಗಿ ನೇಮಕಗೊಂಡಿದ್ದ ಜೂಡ್‌ ಫೆಲಿಕ್ಸ್‌ ಈ ಸಂಗತಿಯನ್ನು ಖಾತ್ರಿ ಪಡಿಸಿದ್ದಾರೆ. "ಹೌದು. ನಾನು ಭಾರತ ಕಿರಿಯರ ಹಾಕಿ ತಂಡದ ಕೋಚ್‌ ಆಗಿ ಉಳಿದಿಲ್ಲ. ಈ ಸಂಗತಿಯನ್ನು 2-3 ದಿನಗಳ ಹಿಂದಷ್ಟೇ ಹಾಕಿ ಇಂಡಿಯಾ ನನಗೆ ಇ-ಮೇಲ್‌ ಮೂಲಕ ತಿಳಿಸಿದೆ. ಈ ವಿಚಾರವಾಗಿ ಸದ್ಐಕ್ಕೆ ಹೆಚ್ಚೇನು ಹೇಳಲಾರೆ,'' ಎಂದು ಹೇಳಿದ್ದಾರೆ.

ಇದೇ ವೇಳೆ ಮ್ಯಾಡ್ರಿಡ್‌ನಲ್ಲಿ ನಡೆದ ಟೂರ್ನಿಯ ವರದಿಯನ್ನು ಇನ್ನು 2 ದಿನಗಳ ಒಳಗಾಗಿ ಹಾಕಿ ಇಂಡಿಯಾಗೆ ಸಲ್ಲಿಸುವುದಾಗಿ ಭಾರತ ತಂಡದ ಮಾಜಿ ನಾಯಕ ಫೆಲಿಕ್ಸ್‌ ಹೇಳಿದ್ದಾರೆ. "ಪ್ರತಿ ಟೂರ್ನಿಯ ಬಳಿಕ ವರದಿ ಸಲ್ಲಿಸುವ ಸಂಸ್ಕೃತಿ ಇದೆ. ಈ ವರೆದಿಯನ್ನು ಇನ್ನು ಎರಡು ದಿನಗಳಲ್ಲಿ ಸಲ್ಲಿಸಲಿದ್ದೇನೆ,'' ಎಂದಿದ್ದಾರೆ.

Story first published: Wednesday, June 19, 2019, 20:00 [IST]
Other articles published on Jun 19, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+