ಮಾಜಿ ಹಾಕಿ ಆಟಗಾರ ಬಲ್‌ಬೀರ್ ಸಿಂಗ್ ಕುಲ್ಲರ್ ನಿಧನ

ಭಾರತ ಹಾಕಿ ತಂಡದ ಮಾಜಿ ಆಟಗಾರ ಬಲ್‌ಬೀರ್ ಸಿಂಗ್ ಕುಲ್ಲರ್ ನಿಧನರಾಗಿದ್ದಾರೆ. ಬಲ್‌ಬೀರ್ ಸಿಂಗ್ ಕುಲ್ಲರ್ 1968ರಲ್ಲಿ ಒಲಿಂಪಿಕ್‌ನಲ್ಲಿ ಕಂಚಿನ ಪದಕವನ್ನು ಗೆದ್ದ ತಂಡದ ಸದಸ್ಯರಾಗಿದ್ದರು. ಅವರಿಗೆ 75 ವರ್ಷ ವಯಸ್ಸಾಗಿತ್ತು.
ಬಲ್‌ಬೀರ್ ಸಿಂಗ್ ಇಧನದ ಬಗ್ಗೆ ಹಾಕಿ ಫೆಡರೇಷನ್ ಅಧಿಕೃತವಾಗಿ ಹೇಳಿಕೊಂಡಿದೆ. ಎರಡು ಬಾರಿ ಹಾಕಿ ಪದಕ ವಿಕೇಜ ತಂಡದ ಸದಸ್ಯ ಬಲ್‌ಬೀರ್ ಸಿಂಗ್ ವಿಧಿವಶರಾಗಿರುವುದನ್ನು ತಿಳಿಸಲು ವಿಷಾಧಿಸುತ್ತೇವೆ ಎಂದು ಹಾಕಿ ಫೆಡರೇಷನ್ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದೆ.
ಪಂಜಾಬ್‌ನ ಜಲಂಧರ್ ಜಿಲ್ಲೆಯ ಸನ್‌ಸರ್‌ಪುರ್ ಗ್ರಾಮದಲ್ಲಿ ಜನಿಸಿದ ಬಲ್‌ಬೀರ್ ಸಿಂಗ್ 1963ರಲ್ಲಿ ಫ್ರಾನ್ಸ್‌ನ ಲಿಯೋನ್‌ನಲ್ಲಿ ಪದಾರ್ಪಣೆ ಮಾಡಿದರು. ಉತ್ತಮವಾಗಿ ಆಡಿ ತಂಡದಲ್ಲಿ ಸ್ಥಾನವನ್ನು ಭದ್ರಪಡಿಸಿಕೊಂಡ ಬಲ್ಬೀರ್ ಸಿಂಗ್ ಅನೇಕ ದೇಶಗಳಿಗೆ ತೆರಳಿ ಭಾರತ ಹಾಲಿ ತಂಡವನ್ನು ಪ್ರತಿನಿಧಿಸಿದರು.
1966ರಲ್ಲಿ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನ ಗೆದ್ದ ತಂಡದ ಸದಸ್ಯರಾಗಿದ್ದ ಬಲ್‌ಬೀರ್ ಸಿಂಗ್ ಮೆಕ್ಸಿಕೋದಲ್ಲಿ 1968ರಲ್ಲಿ ನಡೆದ ಒಲಿಂಪಿಕ್‌ನಲ್ಲಿ ಕಂಚು ಗೆದ್ದ ತಂಡದ ಸದಸ್ಯರಾಗಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications