ಹಾಕಿ ವಿಶ್ವಕಪ್ 2018: ನ್ಯೂಜಿಲ್ಯಾಂಡ್‌ಗೆ ಸುಲಭ ಸೋಲುಣಿಸಿದ ಅರ್ಜೆಂಟೀನಾ

ಭುವನೇಶ್ವರ್, ಡಿಸೆಂಬರ್ 3: ಒಡಿಶಾದ ಭುವನೇಶ್ವರ್‌ನ ಕಳಿಂಗ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ಸೋಮವಾರ (ಡಿಸೆಂಬರ್ 3) ನಡೆದ ಪುರುಷರ ಗ್ರೂಪ್ 'ಎ' ವಿಶ್ವಕಪ್ ಪಂದ್ಯದಲ್ಲಿ ನ್ಯೂಜಿಲ್ಯಾಂಡ್‌ಗೆ ಅರ್ಜೆಂಟೀನಾ ತಂಡ 3-0 ಅಂತರದ ಸೋಲುಣಿಸಿದೆ. ಈ ಮೂಲಕ ಅರ್ಜೆಂಟೀನಾ ತಂಡ ಟೂರ್ನಿಯ ಕ್ವಾರ್ಟರ್ ಫೈನಲ್‌ಗೆ ನೇರ ಪ್ರವೇಶ ಗಿಟ್ಟಿಸಿಕೊಳ್ಳಲಿದೆ.
ಹಾಕಿ ವಿಶ್ವಕಪ್ ಮುಖಪುಟಕ್ಕೆ ಕ್ಲಿಕ್ಕಿಸಿ. ಪಾಯಿಂಟ್ ಟೇಬಲ್ ಸೇರಿ ಟೂರ್ನಿಯ ಹೆಚ್ಚಿನ ಮಾಹಿತಿಗಳು ಇಲ್ಲಿ ಸಿಗುತ್ತವೆ.
ಪಂದ್ಯದ ಮೊದಲ ಕ್ವಾರ್ಟರ್ ನಲ್ಲಿ ಗೋಲ್ ದಾಖಲಾಗಿರಲಿಲ್ಲ. ಆದರೆ ದ್ವಿತೀಯ ಕ್ವಾರ್ಟರ್ ನಲ್ಲಿ ಅರ್ಜೆಂಟೀನಾ ಗೋಲ್ ದಾಖಲಸಿತು. ಅರ್ಜೆಂಟೀನಾದ ಅಗಸ್ಟಿನ್ ಮಝಿಲ್ಲಿ ಅವರು 22ನೇ ನಿಮಿಷದಲ್ಲಿ ಗೋಲ್ ಬಾರಿಸಿ ತಂಡಕ್ಕೆ ಮುನ್ನಡೆ ಕೊಟ್ಟರು.
ಅದಾಗಿ ತೃತೀಯ ಕ್ವಾರ್ಟರ್ ನ 41ನೇ ನಿಮಿಷದಲ್ಲಿ ಮತ್ತೆ ಅರ್ಜೆಂಟೀನಾದ ಲ್ಯೂಕಾಸ್ ವಿಲ್ಲಾ ಗೋಲ್ ಬಾರಿಸಿ ತಂಡದ ಮುನ್ನಡೆ ಹೆಚ್ಚಿಸಿಕೊಂಡರು. ತಂಡದ ಪರ 55ನೇ ನಿಮಿಷದಲ್ಲಿ ಲ್ಯೂಕಾಸ್ ಮಾರ್ಟಿನೆಜ್ ಅವರಿಂದ ಮೂರನೇ ಗೋಲ್ ದಾಖಲಾಯಿತು.
ಅತ್ತ ನ್ಯೂಜಿಲ್ಯಾಂಡ್ ಒಂದೂ ಗೋಲ್ ಬಾರಿಸದೆ ಒಲಿಂಪಿಕ್ ಚಾಂಪಿಯನ್ ಅರ್ಜೆಂಟೀನಾ ಎದುರು ಸುಲಭವಾಗಿ ಶರಣಾಯಿತು. 'ಎ' ಗ್ರೂಪ್‌ನಿಂದ ಸೋಮವಾರವೇ ನಡೆದ ಇದಕ್ಕೂ ಮೊದಲಿನ (11ನೇ) ಸ್ಪೇನ್ ಮತ್ತು ಫ್ರಾನ್ಸ್ ನಡುವಣ ಪಂದ್ಯ 1-1ರ ಸಮಬಲದೊಂದಿಗೆ ಅಂತ್ಯಗೊಂಡಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications