ಅತೀರೋಚಕ ಪಂದ್ಯ ಗೆದ್ದ ಬೆಲ್ಜಿಯಂ 'ಹಾಕಿ ವಿಶ್ವಕಪ್' ಚೊಚ್ಚಲ ಚಾಂಪಿಯನ್

ಭುವನೇಶ್ವರ್, ಡಿಸೆಂಬರ್ 16: ಹಾಕಿ ವಿಶ್ವಕಪ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಫೈನಲ್ ಪಂದ್ಯ ಗೋಲಿಲ್ಲದೆ ಮುಗಿದಿದೆ. ಅಲ್ಲದೆ ಶೂಟೌಟ್‌ನಲ್ಲೂ ಪಂದ್ಯ ಸಮಬಲಗೊಂಡಿದೆ. ಕೊನೆಗೆ ಸಡನ್ ಡೆತ್ ಶೂಟೌಟ್ ನಲ್ಲಿ ನೆದರ್‌ಲ್ಯಾಂಡ್ ವಿರುದ್ಧ ಮೇಲುಗೈ ಸಾಧಿಸಿದ ಬೆಲ್ಜಿಯಂ ಚೊಚ್ಚಲ 'ಒಡಿಶಾ ಹಾಕಿ ವಿಶ್ವಕಪ್ 2018' ಚಾಂಪಿಯನ್ ಟ್ರೋಫಿಗೆ ಮುತ್ತಿಕ್ಕಿತು.
ಭಾನುವಾರ (ಡಿಸೆಂಬರ್ 16) ಕಳಿಂಗ ಹಾಕಿ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ಬೆಲ್ಜಿಯಂ vs ನೆದರ್‌ಲ್ಯಾಂಡ್ಸ್ ನಡುವಣ ಹಾಕಿ ವಿಶ್ವಕಪ್ ಫೈನಲ್ ಪಂದ್ಯ ನಾಲ್ಕು ಕ್ವಾರ್ಟರ್‌ನಲ್ಲೂ ಒಂದೇ ಒಂದು ಗೋಲ್ ದಾಖಲಾಗದ ಅಪರೂಪದ ಪಂದ್ಯವಾಗಿ ಗುರುತಿಸಿಕೊಂಡಿತು. ಆದರೆ ಪೆನಾಲ್ಟಿ ಶೂಟೌಟ್‌ನಲ್ಲಿ ಬೆಲ್ಜಿಯಂ ಮೇಲುಗೈ ಸಾಧಿಸಿತು.
ಪಂದ್ಯಾರಂಭದಿಂದಲೂ ಎರಡೂ ತಂಡಗಳು ಚಾಂಪಿಯನ್ ಪಟ್ಟಕ್ಕಾಗಿ ತೀವ್ರ ಸೆಣಸಾಟ ನಡೆಸಿದವು. ಆದರೆ ವಿಶ್ವ ರ್ಯಾಂಕಿಂಗ್‌ನಲ್ಲಿ ತೃತೀಯ ಸ್ಥಾನದಲ್ಲಿರುವ ಬೆಲ್ಜಿಯಂಗಾಗಲಿ, ಚತುರ್ಥ ಸ್ಥಾನದಲ್ಲಿರುವ ನೆದರ್ಲ್ಯಾಂಡ್‌ಗಾಗಲಿ ಗೋಲ್ ದಾಖಲಿಸಲಾಗಿರಲಿಲ್ಲ.
ಪಂದ್ಯ 0-0ಯಿಂದ ಮುಕ್ತಾಯಗೊಂಡಾಗ ಶೂಟೌಟ್‌ಗೆ ಅವಕಾಶ ನೀಡಲಾಯ್ತು. ಈ ವೇಳೆ ಹತ್ತು ಶೂಟೌಟ್ ಅವಕಾಶಗಳಲ್ಲೂ ಫಲಿತಾಂಶ 2-2ರಲ್ಲೇ ನಿಂತಿತು. ಕೊನೆಗೆ ಸಡನ್ ಡೆತ್ ಶೂಟೌಟ್‌ಗೆ ಅವಕಾಶ ನೀಡಲಾಯಿತು. ಆಗ ಬೆಲ್ಜಿಯಂ ಒಂದು ಗೋಲ್ ಬಾರಿಸಿ 'ಚೊಚ್ಚಲ ಹಾಕಿ ವಿಶ್ವಕಪ್ ಚಾಂಪಿಯನ್' ಆಗಿ ಮೆರೆಯಿತು.
ಇದಕ್ಕೂ ಮೊದಲು ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಬಲಿಷ್ಟ ಆಸ್ಟ್ರೇಲಿಯಾ ತಂಡ ಇಂಗ್ಲೆಂಡ್ ತಂಡವನ್ನು 8-1ರ ಅಂತರದಿಂದ ಸೋಲಿಸಿತು. ಈ ವೇಳೆ ಆಸ್ಟ್ರೇಲಿಯಾದ ಟಾಮ್ ಕ್ರೈಗ್ ಅವರು ಕ್ರಮವಾಗಿ 9, 19, 34ನೇ ನಿಮಿಷಗಳಲ್ಲಿ ಗೋಲ್ ಬಾರಿಸಿ ಹ್ಯಾಟ್ರಿಕ್ ಸಾಧನೆ ಮೆರೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications