Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಹಾಕಿ ವಿಶ್ವಕಪ್: ದ.ಆಫ್ರಿಕಾ ಸೋಲಿಸಿದ ಭಾರತ ಬಲಿಷ್ಟ ಬೆಲ್ಜಿಯಂ ಮಣಿಸುತ್ತಾ?

Hockey World Cup 2018: Stern Belgium test awaits India after SA demolition

ಭುವನೇಶ್ವರ್, ಡಿಸೆಂಬರ್ 1: ಒಡಿಶಾದ ಭುವನೇಶ್ವರ್‌ನಲ್ಲಿರುವ ಕಳಿಂಗ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪುರುಷರ ಹಾಕಿ ವಿಶ್ವಕಪ್ ಟೂರ್ನಿಯ ಮೊದಲ ಪಂದ್ಯದಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ದ ಭರ್ಜರಿ 5-0 ಅಂತರದಿಂದ ಜಯಿಸಿತ್ತು. ದ್ವಿತೀಯ ಪಂದ್ಯದಲ್ಲಿ ಭಾರತದ ಪುರುಷರು ಬಲಿಷ್ಟ ಬೆಲ್ಜಿಯಂ ಸವಾಲು ಸ್ವೀಕರಿಸಲಿದ್ದಾರೆ.

2016ರ ರಿಯೋ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಜಯಿಸಿದ್ದ ಬೆಲ್ಜಿಯಂ, ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಕೆನಡಾವನ್ನು 2-1ರ ಅಂತರದಿಂದ ಸೋಲಿಸಿ ಮುನ್ನಡೆ ಸಾಧಿಸಿತ್ತು. ಹೀಗಾಗಿ ಭಾನುವಾರ (ಡಿಸೆಂಬರ್ 2) ಭಾರತ ಮತ್ತು ಬೆಲ್ಜಿಯಂ ನಡುವಣ ಪಂದ್ಯ ತೀವ್ರ ಕುತೂಹಲ ಮೂಡಿಸಿದೆ.

16 ವಿವಿಧ ರಾಷ್ಟ್ರೀಯ ತಂಡಗಳು ಪಾಲ್ಗೊಳ್ಳುತ್ತಿರುವ ಈ ಟೂರ್ನಿಯಲ್ಲಿ ಭಾರತಕ್ಕೆ ಗೆಲ್ಲಲು ಅವಕಾಶವಿದೆ. ಎಲ್ಲದಕ್ಕಿಂತ ಹೆಚ್ಚಾಗಿ ತವರಿನಲ್ಲಿ ಪಂದ್ಯಾಟ ನಡೆಯುತ್ತಿರುವುದರಿಂದ ದೇಸಿ ತಂಡ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆಯೂ ಇದೆ. ಒಂದುವೇಳೆ ಭಾರತ ಪ್ರಶಸ್ತಿ ಗೆದ್ದರೆ 43 ವರ್ಷಗಳ ಭಾರತವನ್ನು ಕಾಡಿದ್ದ ಹಾಕಿ ವಿಶ್ವಕಪ್ ಪ್ರಶಸ್ತಿಯ ಬರಗಾಲ ಅಂತ್ಯವಾಗಲಿದೆ.

ವಿಶ್ವ ರ್ಯಾಂಕಿಂಗ್ ನಲ್ಲಿ 3ನೇ ಸ್ಥಾನದಲ್ಲಿರುವ ಬೆಲ್ಜಿಯಂ, ವಿಶ್ವ ನಂ.5ನೇ ಸ್ಥಾನದಲ್ಲಿರುವ ಭಾರತಕ್ಕೆ ಕೊಂಚ ಸಲಾವಾಗುವುದನ್ನು ಅಲ್ಲಗೆಳೆಯುವಂತಿಲ್ಲ. ಆದರೆ ಭಾರತದ ಪುರುಷರ ಪ್ರದರ್ಶನ ಫಲಿತಾಂಶವನ್ನು ಅವಲಂಬಿಸಿದೆ. ಸಿ ಗ್ರೂಪ್‌ನ ಪಂದ್ಯ ಇದಾಗಿದ್ದು 7pmಗೆ ಆರಂಭಗೊಳ್ಳಲಿದೆ. 'ಸ್ಟಾರ್ ಸ್ಪೋರ್ಟ್ಸ್' ನೇರ ಪ್ರಸಾರ ಮಾಡಲಿದೆ. ಹಾಟ್ ಸ್ಟಾರ್ ನಲ್ಲೂ ಜಾಲತಾಣಿಗರು ಪಂದ್ಯವನ್ನು ವೀಕ್ಷಿಸಬಹುದು.

Story first published: Saturday, December 1, 2018, 21:44 [IST]
Other articles published on Dec 1, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+