ಹಾಕಿ: ಐರ್ಲೆಂಡ್ ವಿರುದ್ಧ ಚಾಂಪಿಯನ್ ಆಸ್ಟ್ರೇಲಿಯಾಕ್ಕೆ ಪ್ರಾಯಾಸದ ಜಯ

ಭುವನೇಶ್ವರ್, ನವೆಂಬರ್ 30: ಭುವನೇಶ್ವರ್ ನ ಕಳಿಂಗ ಸ್ಟೇಡಿಯಂನಲ್ಲಿ ಶುಕ್ರವಾರ (ನವೆಂಬರ್ 30) ನಡೆದ ಪುರುಷರ ಹಾಕಿ ವಿಶ್ವಕಪ್ ಬಿ ಗ್ರೂಪ್‌ನ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ 2-1ರ ಪ್ರಾಯಾಸದ ಜಯ ಗಳಿಸಿದೆ.
ವಿಶ್ವ ನಂ. 1 ಆಸ್ಟ್ರೇಲಿಯಾ ತಂಡ ವಿಶ್ವ ನಂ.10ನೆಯ ಐರ್ಲೆಂಡನ್ನು ಸುಲಭವಾಗಿ ಸೋಲಿಸುವ ಯೋಜನೆಯಲ್ಲಿತ್ತು. ಆದರೆ ಐರ್ಲೆಂಡ್ ಸುಲಭವಾಗಿ ಸೋಲೊಪ್ಪಿಕೊಳ್ಳಲಿಲ್ಲ, ಬದಲಿಗೆ ಎದುರಾಳಿಗೆ ಭರ್ಜರಿ ಪೈಪೋಟಿ ನೀಡಿತು. ಹೀಗಾಗಿ ಗೋಲ್ ಅಂತರ 2-1ರಲ್ಲಿ ನಿಂತಿತು.
ಆಸ್ಟ್ರೇಲಿಯಾ ಪರ ಬ್ಲೇಕ್ ಗೋವರ್ಸ್ (11ನೇ ನಿಮಿಷದಲ್ಲಿ) ಮತ್ತು ಟಿಮ್ ಬ್ರಾಂಡ್ ಗೋಲ್ ಬಾರಿಸಿ ತಂಡದ ಗೆಲುವಿಗೆ ಕಾರಣರಾದರೆ, ಶೇನ್ ಒ ಡೊನೋಘು ಐರ್ಲೆಂಡ್ ಪರ ಒಂದು ಗೋಲ್ ಬಾರಿಸಿ ಸೋಲಿನ ಅಂತರವನ್ನು ಕಿರಿದುಗೊಳಿಸಿದರು. ಅಂತೂ ಪಂದ್ಯ ಉತ್ತಮ ಪೈಪೋಟಿಯೊಂದಿಗೆ ಸಾಗಿದ್ದು ಸುಳ್ಳಲ್ಲ.
Story first published: Friday, November 30, 2018, 22:16 [IST]
Other articles published on Nov 30, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications