ಹಾಕಿ ವಿಶ್ವಕಪ್ 2018: ಆರಂಭಕ್ಕೂ ಮುನ್ನ ನೀವಿದನ್ನು ಗಮನಿಸಲೇಬೇಕು!

ಬೆಂಗಳೂರು, ನವೆಂಬರ್ 27: ಭುವನೇಶ್ವರ್‌ನ ಕಳಿಂಗ ಸ್ಟೇಡಿಯಂನಲ್ಲಿ ಪುರುಷರ 14ನೇ ಹಾಕಿ ವಿಶ್ವಕಪ್ ಟೂರ್ನಿ ಆರಂಭಗೊಳ್ಳುವುದರಲ್ಲಿದೆ. ಸುಮಾರು 43 ವರ್ಷಗಳ ಕಾಲ ಭಾರತವನ್ನು ಕಾಡಿದ್ದ ಹಾಕಿ ವಿಶ್ವಕಪ್ ಟ್ರೋಫಿ ಬರವನ್ನು ನೀಗಿಸಲು ಭಾರತಕ್ಕೆ ಅಪೂರ್ವ ಅವಕಾಶ ಬಂದೊದಗಿದೆ.
1975ರಲ್ಲಿ ಕಡೆಯ ಸಾರಿ ಭಾರತದ ಪುರುಷರು ಹಾಕಿ ವಿಶ್ವಕಪ್ ಟ್ರೋಫಿ ಜಯಿಸಿದ್ದರು. ಆದರೆ ಅನಂತರ ಬಹುಕಾಲ ಭಾರತ ವಿಶ್ವಕಪ್ ಪ್ರಶಸ್ತಿ ಜಯಿಸಿಲ್ಲ. ಈ ಬಾರಿ ತವರಿನಲ್ಲೇ ಪ್ರತಿಷ್ಠಿತ ಟೂರ್ನಿ ನಡೆಯುತ್ತಿರುವುದರಿಂದ ಭಾರತ ಗೆಲ್ಲುವ ನಿರೀಕ್ಷೆಯಿದೆ.
ನವೆಂಬರ್ 28ರಿಂದ ಟೂರ್ನಿ ಆರಂಭಗೊಳ್ಳಲಿದ್ದು, ಎ, ಬಿ, ಸಿ, ಡಿ ಗ್ರೂಪ್‌ಗಳ ಮಧ್ಯೆ ಕಾದಾಟ ನಡೆಯಲಿದೆ. ಮೊದಲ ಪಂದ್ಯದಲ್ಲಿ ಬೆಲ್ಜಿಯಂ ಮತ್ತು ಕೆನಡಾ ತಂಡಗಳು ಸೆಣಸಾಡಲಿವೆ. ಅದೇ ದಿನ ಭಾರತ ತಂಡ ದಕ್ಷಿಣ ಆಫ್ರಿಕಾ ಸವಾಲು ಸ್ವೀಕರಿಸಲಿದೆ.

43 ವರ್ಷಗಳ ಹಿಂದೆ ಜಯ
ಭಾರತದ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ 1975ರಲ್ಲಿ ಮಲೇಷ್ಯಾದ ಕೌಲಾಲಂಪುರ್ ನಲ್ಲಿ ನಡೆದಿದ್ದ ವಿಶ್ವಕಪ್ ಫೈನಲ್ ನಲ್ಲಿ ಭಾರತ ಪ್ರಶಸ್ತಿ ಜಯಿಸಿತ್ತು. ಅನಂತರ ಹಾಕಿ ವಿಶ್ವಕಪ್ ಟೂರ್ನಿಯಲ್ಲಿ ಭಾರತ 5ನೇ ಸ್ಥಾನ ಗಳಿಸಿದ್ದೇ ಹೆಚ್ಚೆನಿಸಿತ್ತು. 1982 ಮತ್ತು 1994ರಲ್ಲಿ ಭಾರತ ಐದನೇ ಸ್ಥಾನ ಗಳಿಸಿತ್ತು.

5ನೇ ಸ್ಥಾನದಲ್ಲಿ ಭಾರತ
ಮನ್‌ಪ್ರೀತ್ ಸಿಂಗ್ ನಾಯಕತ್ವದ ಭಾರತದ ಪುರುಷರ ಹಾಕಿ ತಂಡ ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ನವೆಂಬರ್ 28ರಂದು ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಸವಾಲು ಸ್ವೀಕರಿಸಲಿದೆ. ಭಾರತವೀಗ ಇಂಟರ್ ನ್ಯಾಷನಲ್ ಹಾಕಿ ಫೆಡರೇಷನ್ (ಎಫ್‌ಐಎಚ್) ರ್ಯಾಂಕಿಂಗ್ ನಲ್ಲಿ 5ನೇ ಸ್ಥಾನದಲ್ಲಿದೆ.

ಬೆಲ್ಜಿಯಂ ಬಲಿಷ್ಠ
ಒಲಿಂಪಿಕ್ಸ್ ಮತ್ತು ಯುರೋಪಿಯನ್ ಟೂರ್ನಿಯಲ್ಲಿ ಬೆಳ್ಳಿ ಪದಕ ವಿಜೇತ ಬೆಲ್ಜಿಯಂ ತಂಡ ಈ ಬಾರಿ ಮೊದಲ ಪಂದ್ಯದಲ್ಲಿ ಕೆನಡಾ ಸವಾಲು ಸ್ವೀಕರಿಸಲಿದೆ. ಎಫ್‌ಐಎಚ್ ರ್ಯಾಂಕಿಂಗ್ ನಲ್ಲಿ 3ನೇ ಸ್ಥಾನದಲ್ಲಿರುವ ಬೆಲ್ಜಿಯಂ ಬಲಿಷ್ಠ ತಂಡ. ಭಾರತ, ಕೆನಡಾ, ದಕ್ಷಿಣ ಆಫ್ರಿಕಾ, ಮತ್ತು ಬೆಲ್ಜಿಯಂ ಈ ತಂಡಗಳು ಪೂಲ್ 'ಸಿ'ಯಲ್ಲಿವೆ.

ದಿನಕ್ಕೆರಡು ಪಂದ್ಯ
ಪಂದ್ಯಗಳು ಕ್ರಮವಾಗಿ 5pm ಮತ್ತು 7pmಗೆ ನಡೆಯಲಿವೆ. ಡಿಸೆಂಬರ್ 12 ಮತ್ತು 13 ರಂದು ಕ್ವಾರ್ಟರ್ ಫೈನಲ್ಸ್ ನಡೆಯಲಿದೆ. ಡಿಸೆಂಬರ್ 14 ಸೆಮಿಫೈನಲ್ಸ್, ಡಿಸೆಂಬರ್ 15ರಂದು ಫೈನಲ್ ನಡೆಯಲಿದೆ. 'ಸ್ಟಾರ್ ಸ್ಪೋರ್ಟ್ಸ್' ಪಂದ್ಯವನ್ನು ನೇರ ಪ್ರಸಾರ ಮಾಡಲಿದ್ದು, ಹಾಟ್ ಸ್ಟಾರ್ ನಲ್ಲೂ ಜಾಲತಾಣಿಗರು ಪಂದ್ಯವನ್ನು ವೀಕ್ಷಿಸಬಹುದು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications