ಹಾಕಿ ವಿಶ್ವಕಪ್ ಆರಂಭಕ್ಕೆ ಕ್ಷಣಗಣನೆ: ತವರಿನಲ್ಲಿ ಮಿಂಚಲು ಸಿದ್ಧವಾದ ಭಾರತ ತಂಡ

ಭಾರತದಲ್ಲಿ ನಡೆಯಲಿರುವ ಹಾಕಿ ವಿಶ್ವಕಪ್ 2023ನೇ ಆವೃತ್ತಿಯ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಜನವರಿ 13ರಿಂದ ನಡೆಯಲಿರುವ ಈ ಪ್ರತಿಷ್ಠಿತ ಟೂರ್ನಿ ಈ ತಿಂಗಳ 29ರಂದು ಫೈನಲ್ ಪಂದ್ಯ ನಡೆಯುವ ಮೂಲಕ ಅಂತ್ಯವಾಗಲಿದೆ. ಭುವನೇಶ್ವರ್ ಹಾಗೂ ರೌರ್ಕೆಲಾದ ಸ್ಟೇಡಿಯಂಗಳಲ್ಲಿ ಈ ವಿಶ್ವಕಪ್ ಕ್ರೀಡಾಕೂಟ ನಡೆಯಲಿದೆ.
16 ತಂಡಗಳು ಭಾಗವಹಿಸುವ ಈ ಟೂರ್ನಿಯಲ್ಲಿ ನಾಲ್ಕು ತಂಡಗಳ ತಲಾ ನಾಲ್ಕು ಗುಂಪುಗಳನ್ನಾಗಿ ವಿಂಗಡಿಸಲಾಗಿದ್ದು ಗ್ರೂಪ್ ಹಂತದಲ್ಲಿ ಮೊದಲ ಪಂದ್ಯಗಳು ನಡೆಯಲಿದೆ. ಪೂಲ್ 'ಎ'ಯಲ್ಲಿ ಆಸ್ಟ್ರೇಲಿಯಾ, ಅರ್ಜೆಂಟಿನಾ, ಫ್ರಾನ್ಸ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಇದ್ದರೆ ಪೂಲ್ 'ಬಿ'ಯಲ್ಲಿ ಬೆಲ್ಜಿಯಂ, ಜರ್ಮನಿ, ದಕ್ಷಿಣ ಕೊರಿಯಾ ಹಾಗೂ ಜಪಾನ್ ತಂಡಗಳು ಇದೆ. ಇನ್ನು ಪೂಲ್ 'ಸಿ' ವಿಭಾಗದಲ್ಲಿ ನೆದರ್ಲೆಂಡ್ಸ್, ಮಲೇಶಿಯಾ, ನ್ಯೂಜಿಲೆಂಡ್ ಹಾಗೂ ಚಿಲಿ ತಂಡ ಇದ್ದು ಪೂಲ್ 'ಡಿ'ಯಲ್ಲಿ ಭಾರತ, ಇಂಗ್ಲೆಂಡ್, ಸ್ಪೈನ್ ಹಾಗೂ ವೇಲ್ಸ್ ತಂಡಗಳು ಇವೆ.

ಸತತ 2ನೇ ಬಾರಿ ಭಾರತದಲ್ಲಿ ವಿಶ್ವಕಪ್
ಇನ್ನು ಸತತ 2ನೇ ಬಾರಿಗೆ ಭುವನೇಶ್ವರದಲ್ಲಿ ಹಾಕಿ ವಿಶ್ವಕಪ್ ಆಯೋಜನೆಯಾಗುತ್ತಿರುವುದು ಕುತೂಹಲಕಾರಿ ಅಂಶ. ಈ ಹಿಂದಿನ ವಿಶ್ವಕಪ್ 2018ರಲ್ಲಿ ಕೂಡ ಭುವನೇಶ್ವರ್ಲ್ಲಿಯೇ ಆಯೋಜನೆಯಾಗಿತ್ತು. ಕಳಿಂಗ ಸ್ಟೇಡಿಯಂನಲ್ಲಿ ನಡೆದ ಆ ಟೂರ್ನಿಯ ಫೈನಲ್ ಪಂದ್ಯದಲ್ಲಿ ನೆದರ್ಲೆಂಡ್ಸ್ ತಂಡವನ್ನು ಮಣಿಸಿ ಬೆಲ್ಜಿಯಂ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಒಟ್ಟಾರೆಯಾಗಿ ಭಾರತ ಆಯೋಜಿಸುತ್ತಿರುವ ನಾಲ್ಕನೇ ಹಾಕಿ ವಿಶ್ವಕಪ್ ಟೂರ್ನಿ ಇದಾಗಿದೆ
ಕಳೆದ ಬಾರಿಯ ವಿಶ್ವಕಪ್‌ಗೆ ಹೋಲಿಸಿದರೆ ಭಾರತ ತಂಡದಲ್ಲಿ ಕೆಲ ಬದಲಾವಣೆಗಳು ಆಗಿದ್ದರೂ ಕೆಲ ಆಟಗಾರರು ಹಿಂದಿನ ವಿಶ್ವಕಪ್‌ನಲ್ಲಿಯೂ ಭಾಗವಹಿಸಿದ ಅನುಭವ ಹೊಂದಿದ್ದಾರೆ. ಆಸ್ಟ್ರೇಲಿಯಾದ ಗ್ರಹಾಂ ರೀಡ್ ಪ್ರಸ್ತುತ ಭಾತತ ತಂಡದ ಮುಖ್ಯ ಕೋಚ್ ಆಗಿದ್ದು, ಹರ್ಮನ್‌ಪ್ರೀತ್ ಸಿಂಗ್ ಮೊದಲ ಬಾರಿಗೆ ವಿಶ್ವಕಪ್‌ನಲ್ಲಿ ಭಾರತೀಯ ತಂಡವನ್ನು ಮುನ್ನಡೆಸಲಿದ್ದಾರೆ.

ಜನವರಿ 13ರಿಂದ ಆರಂಭ
ಜನವರಿ 13ರಂದು ಅರ್ಜೆಂಟಿನಾ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಮುಖಾಮುಖಿಯಾಗುವ ಮೂಲಕ ಈ ವಿಶ್ವಕಪ್ ಟೂರ್ನಿಗೆ ಚಾಲನೆ ದೊರೆಯಲಿದೆ. ಇನ್ನು ಅದೇ ದಿನ ಭಾರತ ತಂಡ ಸ್ಟೈನ್ ವಿರುದ್ಧ ಸೆಣೆಸಾಡುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ. ಹಾಕಿ ವಿಶ್ವಕಪ್‌ನಲ್ಲಿ ಭಾರತ ಈವರೆಗೆ ಕೇವಲ ಒಂದು ಬಾರಿ ಮಾತ್ರವೇ ಚಾಂಪಿಯನ್ ಪಟ್ಟಕ್ಕೆರಿದ್ದು 1975ರಲ್ಲಿ ಪಾಕಿಸ್ತಾನವನ್ನು ಮಣಿಸಿ ಈ ಸಾಧನೆ ಮಾಡಿತ್ತು.

ಭಾರತದ ಸಂಪೂರ್ಣ ಸ್ಕ್ವಾಡ್ ಹೀಗಿದೆ
ಗೋಲ್‌ಕೀಪರ್‌ಗಳು: ಕ್ರಿಶನ್ ಬಹದ್ದೂರ್ ಪಾಠಕ್, ಪಿಆರ್ ಶ್ರೀಜೇಶ್
ಡಿಫೆಂಡರ್ಸ್: ಜರ್ಮನ್ಪ್ರೀತ್ ಸಿಂಗ್, ಸುರೇಂದರ್ ಕುಮಾರ್, ಹರ್ಮನ್ಪ್ರೀತ್ ಸಿಂಗ್ (ನಾಯಕ), ವರುಣ್ ಕುಮಾರ್, ಅಮಿತ್ ರೋಹಿದಾಸ್ (ಉಪನಾಯಕ), ನಿಲಮ್ ಸಂಜೀಪ್ ಕ್ಸೆಸ್
ಮಿಡ್‌ಫೀಲ್ಡರ್‌ಗಳು: ಮನ್‌ಪ್ರೀತ್ ಸಿಂಗ್, ಹಾರ್ದಿಕ್ ಸಿಂಗ್, ನೀಲಕಂಠ ಶರ್ಮಾ, ಶಂಶೇರ್ ಸಿಂಗ್, ವಿವೇಕ್ ಸಾಗರ್ ಪ್ರಸಾದ್, ಆಕಾಶದೀಪ್ ಸಿಂಗ್
ಫಾರ್ವರ್ಡ್‌ಗಳು: ಮನ್‌ದೀಪ್ ಸಿಂಗ್, ಲಲಿತ್ ಕುಮಾರ್ ಉಪಾಧ್ಯಾಯ, ಅಭಿಷೇಕ್, ಸುಖಜೀತ್ ಸಿಂಗ್
ಪರ್ಯಾಯ ಆಟಗಾರರು: ರಾಜಕುಮಾರ್ ಪಾಲ್, ಜುಗ್ರಾಜ್ ಸಿಂಗ್
ಮುಖ್ಯ ತರಬೇತುದಾರ: ಗ್ರಹಾಂ ರೀಡ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications