Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Hockey World Cup 2023: ಜಪಾನ್ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು; 9ನೇ ಸ್ಥಾನ ಖಚಿತ?

Hockey World Cup 2023: India Win Against Japan By 8-0 Goals

ಗುರುವಾರ, ಜನವರಿ 26ರಂದು ಒಡಿಶಾದ ರೂರ್ಕೆಲಾದಲ್ಲಿನ ಬಿರ್ಸಾ ಮುಂಡಾ ಸ್ಟೇಡಿಯಂನಲ್ಲಿ ನಡೆದ ಎಫ್‌ಐಎಚ್ ಪುರುಷರ ಹಾಕಿ ವಿಶ್ವಕಪ್ 2023ರ 9-16ನೇ ಸ್ಥಾನದ ವರ್ಗೀಕರಣ ಪಂದ್ಯದಲ್ಲಿ ಭಾರತ ಹಾಕಿ ತಂಡ 8-0 ಗೋಲುಗಳಿಂದ ಜಪಾನ್ ವಿರುದ್ಧ ಭರ್ಜರಿ ಗೆಲುವು ದಾಖಲಿಸಿತು.

ಮೊದಲ ಕ್ವಾರ್ಟರ್‌ನಲ್ಲಿ ಜಪಾನ್ ಮತ್ತು ಭಾರತ ಆಕ್ರಮಣಕಾರಿ ಆಟದ ಮೂಲಕ ಸಮಬಲದ ಪೈಪೋಟಿ ನೀಡಿದವು. ಆದರೆ ಎರಡೂ ತಂಡಗಳು ಗೋಲು ಗಳಿಸಲು ಸಾಧ್ಯವಾಗಲಿಲ್ಲ. ಭಾರತಕ್ಕೆ ದೊರೆತ ಎರಡು ಪೆನಾಲ್ಟಿ ಕಾರ್ನರ್ ದೊರೆತ ಉತ್ತಮ ಅವಕಾಶಗಳನ್ನು ಕೈಚೆಲ್ಲಿದರು.

ಭಾರತ ತಂಡವು ದ್ವಿತೀಯಾರ್ಧದಲ್ಲಿ ಆರಂಭಿಕ ಪೆನಾಲ್ಟಿ ಕಾರ್ನರ್ ಅನ್ನು ಗೆದ್ದುಕೊಂಡಿತು, ಅಲ್ಲಿಯೂ ಗೋಲು ಬರಲಿಲ್ಲ. ಜಪಾನ್ ಸತತ ಪೆನಾಲ್ಟಿ ಕಾರ್ನರ್ ಅವಕಾಶ ಪಡೆದರೂ, ಭಾರತದ ಬಲಿಷ್ಠ ರಕ್ಷಣೆ ಎದುರು ಗೋಲು ಗಳಿಸಲು ವಿಫಲರಾದರು. ಎರಡನೇ ಕ್ವಾರ್ಟರ್ ಕೂಡ ಗೋಲುಗಳಿಲ್ಲದೆ ಕೊನೆಗೊಂಡಿತು.

ಮೂರನೇ ಕ್ವಾರ್ಟರ್‌ನಲ್ಲಿ 32ನೇ ನಿಮಿಷದಲ್ಲಿ ಮನದೀಪ್ ಸಿಂಗ್ ಗೋಲಿನ ಖಾತೆ ತೆರೆದರು. ಅನಂತರ ಅಭಿಷೇಕ್ (35 ಮತ್ತು 43ನೇ ನಿಮಿಷ), ವಿವೇಕ್ ಸಾಗರ್ ಪ್ರಸಾದ್ (39ನೇ ನಿಮಿಷ) ಮತ್ತು ಹರ್ಮನ್‌ಪ್ರೀತ್ ಸಿಂಗ್ (45 ಮತ್ತು 58ನೇ ನಿಮಿಷ), ಮನ್‌ಪ್ರೀತ್ ಸಿಂಗ್ (58ನೇ ನಿಮಿಷ) ಮತ್ತು ಸುಖಜೀತ್ ಸಿಂಗ್ (59ನೇ ನಿಮಿಷ) ಭಾರತ ತಂಡಕ್ಕೆ ಗೋಲು ಗಳಿಸಿದರು.

ಶನಿವಾರ, ಜನವರಿ 28ರಂದು ನಡೆಯಲಿರುವ 9-12ನೇ ಸ್ಥಾನದ ವರ್ಗೀಕರಣ ಪಂದ್ಯದಲ್ಲಿ ಭಾರತ ಹಾಕಿ ತಂಡ ಮುಂದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ.

Story first published: Friday, January 27, 2023, 2:50 [IST]
Other articles published on Jan 27, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+