Hockey World Cup 2023: ಜ.13ರಿಂದ ಹಾಕಿ ವಿಶ್ವಕಪ್‌ಗೆ ಚಾಲನೆ; ತವರಿನಲ್ಲಿ 2ನೇ ಪ್ರಶಸ್ತಿ ಮೇಲೆ ಕಣ್ಣಿಟ್ಟ ಭಾರತ

2023ರ ಪುರುಷರ ಹಾಕಿ ವಿಶ್ವಕಪ್ ಆವೃತ್ತಿಯನ್ನು ಶುಕ್ರವಾರ, ಜನವರಿ 13ರಿಂದ ಅಧಿಕೃತವಾಗಿ ಆರಂಭಗೊಳ್ಳಲಿದ್ದು, ಒಡಿಶಾದ ಭುವನೇಶ್ವರ್ ಮತ್ತು ರೂರ್ಕೆಲಾದಲ್ಲಿ ಪಂದ್ಯಾವಳಿಯನ್ನು ಆಯೋಜಿಸಲಾಗುತ್ತಿದೆ.
1975ರಲ್ಲಿ ಚೊಚ್ಚಲ ಬಾರಿಗೆ ಹಾಕಿ ವಿಶ್ವಕಪ್ ಗೆದ್ದ ನಂತರ, ತವರು ನೆಲದಲ್ಲಿ ಎರಡನೇ ಬಾರಿಗೆ ವಿಶ್ವಕಪ್ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿರುವ ಭಾರತ ಹಾಕಿ ತಂಡದ ಮೇಲೆ ನಿರೀಕ್ಷೆ ದೊಡ್ಡದಾಗಿದೆ. 48 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಹಾಕಿ ವಿಶ್ವಕಪ್ ಟೂರ್ನಿ ಆತಿಥ್ಯ ಭಾರತಕ್ಕೆ ಸಿಕ್ಕಿದೆ.
ಟೊಕಿಯೋ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದ ನಂತರ, ಕಳೆದ ವರ್ಷ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತ ಹಾಕಿ ತಂಡ ಬೆಳ್ಳಿ ಪದಕವನ್ನು ಗೆದ್ದುಕೊಂಡಿತು.
ಇದೀಗ ಆತಿಥೇಯ ಭಾರತ ತಂಡವನ್ನು ಸ್ಪೇನ್, ವೇಲ್ಸ್ ಮತ್ತು ಇಂಗ್ಲೆಂಡ್ ತಂಡಗಳ ಜೊತೆಗೆ ಕಠಿಣ 'ಡಿ' ಗುಂಪಿನಲ್ಲಿ ಸೇರಿಸಲಾಗಿದೆ. ಜನವರಿ 13ರಂದು ಸ್ಪೇನ್ ವಿರುದ್ಧ ಭಾರತ ಹಾಜಿ ತಂಡ ತಮ್ಮ ಅಭಿಯಾನವನ್ನು ಆರಂಭಿಸಲಿದೆ.

ಹಾಕಿ ವಿಶ್ವಕಪ್ ಪಂದ್ಯಾವಳಿಗಾಗಿ ಹಾಕಿ ಇಂಡಿಯಾ ಪ್ರಕಟಿಸಿದ ಭಾರತ ತಂಡವು ಯುವ ಮತ್ತು ಅನುಭವದ ಪರಿಪೂರ್ಣ ಮಿಶ್ರಣವನ್ನು ಹೊಂದಿದೆ. ಹರ್ಮನ್‌ಪ್ರೀತ್ ಸಿಂಗ್ ಅವರು ತಂಡದ ನಾಯಕತ್ವವನ್ನು ಮನ್‌ಪ್ರೀತ್ ಸಿಂಗ್ ಅವರಿಂದ ವಹಿಸಿಕೊಂಡಿದ್ದಾರೆ.
ಇನ್ನು ಅಮಿತ್ ರೋಹಿದಾಸ್ ಅವರು ಉಪನಾಯಕರಾಗಿ ಆಯ್ಕೆಯಾಗಿದ್ದು, ಪಂದ್ಯಾವಳಿಯ ಸಮಯದಲ್ಲಿ ಹರ್ಮನ್‌ಪ್ರೀತ್ ಅವರೊಂದಿಗೆ ಡ್ರ್ಯಾಗ್‌ಫ್ಲಿಕ್ ಮಾಡುವ ಜವಾಬ್ದಾರಿಯನ್ನು ಹಂಚಿಕೊಂಡಿದ್ದಾರೆ.
ಹಾಕಿ ವಿಶ್ವಕಪ್‌ಗೆ ಭಾರತ ತಂಡ
ಗೋಲ್‌ಕೀಪರ್ಸ್: ಕ್ರಿಶನ್ ಬಹದ್ದೂರ್ ಪಾಠಕ್, ಶ್ರೀಜೇಶ್ ಪರಟ್ಟು ರವೀಂದ್ರನ್
ಡಿಫೆಂಡರ್‌ಗಳು: ಜರ್ಮನ್‌ಪ್ರೀತ್ ಸಿಂಗ್, ಸುರೇಂದರ್ ಕುಮಾರ್, ಹರ್ಮನ್‌ಪ್ರೀತ್ ಸಿಂಗ್ (ನಾಯಕ), ವರುಣ್ ಕುಮಾರ್, ಅಮಿತ್ ರೋಹಿದಾಸ್ (ಉಪನಾಯಕ), ನಿಲಮ್ ಸಂಜೀಪ್ ಕ್ಸೆಸ್
ಮಿಡ್‌ಫೀಲ್ಡರ್‌ಗಳು: ಮನ್‌ಪ್ರೀತ್ ಸಿಂಗ್, ಹಾರ್ದಿಕ್ ಸಿಂಗ್, ನೀಲಕಂಠ ಶರ್ಮಾ, ಶಂಶೇರ್ ಸಿಂಗ್, ವಿವೇಕ್ ಸಾಗರ್ ಪ್ರಸಾದ್, ಆಕಾಶದೀಪ್ ಸಿಂಗ್
ಫಾರ್ವರ್ಡ್ ಆಟಗಾರರು: ಮನ್‌ದೀಪ್ ಸಿಂಗ್, ಲಲಿತ್ ಕುಮಾರ್ ಉಪಾಧ್ಯಾಯ, ಅಭಿಷೇಕ್, ಸುಖಜೀತ್ ಸಿಂಗ್
ಪರ್ಯಾಯ ಆಟಗಾರರು: ರಾಜಕುಮಾರ್ ಪಾಲ್, ಜುಗರಾಜ್ ಸಿಂಗ್.

ಹರ್ಮನ್‌ಪ್ರೀತ್‌ಗೆ ಹೊಸ ಪಾತ್ರ, ಗುರಿ ಒಂದೇ
2023ರ ಹಾಕಿ ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತ ತಂಡದ ನಾಯಕ ಹರ್ಮನ್‌ಪ್ರೀತ್ ಸಿಂಗ್‌ಗೆ ಗುರಿ ಒಂದೇ ಆಗಿರುತ್ತದೆ. ಭಾರತಕ್ಕೆ ಬ್ಯಾಕ್‌ಲೈನ್‌ನಲ್ಲಿ ಬಂಡೆಯಾಗಿ ನಿಲ್ಲುವುದು ಮತ್ತು ತನ್ನ ದಾರಿಯಲ್ಲಿ ಬರುವ ಪೆನಾಲ್ಟಿ ಕಾರ್ನರ್‌ಗಳನ್ನು ಗೋಲುಗಳಾಗಿ ಪರಿವರ್ತಿಸುವುದಾಗಿದೆ.
ಭಾರತದ ಹೊಸ ನಾಯಕ ಹರ್ಮನ್‌ಪ್ರೀತ್ ಸಿಂಗ್ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಆರು ಗೋಲುಗಳನ್ನು ಗಳಿಸಿದ್ದು ಮತ್ತು ಭಾರತ ತಂಡದ ಪರ ಅತಿ ಹೆಚ್ಚು ಸ್ಕೋರರ್ ಆಗಿ ಹೊರಹೊಮ್ಮಿದರು. ಅದೇ ಫಾರ್ಮ್ ಅನ್ನು ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಮುಂದುವರೆಸಿದರು. ಅಲ್ಲಿ ಒಂಬತ್ತು ಗೋಲುಗಳೊಂದಿಗೆ ಜಂಟಿ ಎರಡನೇ ಅತಿ ಹೆಚ್ಚು ಸ್ಕೋರರ್ ಆದರು.
FIH ಪ್ರೊ ಲೀಗ್‌ನ 2022-23 ಋತುವಿನಲ್ಲಿ 27 ವರ್ಷ ವಯಸ್ಸಿನ ಹರ್ಮನ್‌ಪ್ರೀತ್ ಸಿಂಗ್ ಆರು ಗೋಲುಗಳೊಂದಿಗೆ ಜಂಟಿ ಅತಿ ಹೆಚ್ಚು ಸ್ಕೋರರ್ ಆಗಿದ್ದರು. ಇದೀಗ ಹರ್ಮನ್‌ಪ್ರೀತ್ ಸಿಂಗ್ ಗುರಿಯು ಭಾರತಕ್ಕೆ ವಿಶ್ವಕಪ್ ಗೆಲ್ಲುವುದು ಮಾತ್ರವಲ್ಲ, ಪ್ರತಿ ಪಂದ್ಯದಲ್ಲೂ ಗೋಲು ಗಳಿಸಲು ಮುಂದೆ ನಿಂತು ಹೋರಾಡಬೇಕಿದೆ.
ಶುಕ್ರವಾರದ ಪಂದ್ಯಗಳು:
ಇಂಗ್ಲೆಂಡ್ vs ವೇಲ್ಸ್ (ಭಾರತೀಯ ಕಾಲಮಾನ ಸಂಜೆ 5 ಗಂಟೆ)
ಭಾರತ vs ಸ್ಪೇನ್ (ಭಾರತೀಯ ಕಾಲಮಾನ ಸಂಜೆ 7 ಗಂಟೆ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications