ಹಾಕಿ ವಿಶ್ವಕಪ್: ಇಂಗ್ಲೆಂಡ್ ಸೋಲಿಸಿದ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ

ಭುವನೇಶ್ವರ್, ಡಿಸೆಂಬರ್ 4: ಭುವನೇಶ್ವರ್ ನ ಕಳಿಂಗ ಸ್ಟೇಡಿಯಂನಲ್ಲಿ ಮಂಗಳವಾರ (ಡಿಸೆಂಬರ್ 4) ನಡೆದ ಪುರುಷರ ಹಾಕಿ ವಿಶ್ವಕಪ್ 13ನೇ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಹಾಲಿ ಚಾಂಪಿಯನ್ 3-0ಯ ಗೆಲುವನ್ನಾಚರಿಸಿದೆ. ಇಲ್ಲಿಗೆ ಆಡಿರುವ ಏರಡೂ ಪಂದ್ಯಗಳಲ್ಲಿ ಜಯ ಸಾಧಿಸಿರುವ ಆಸ್ಟ್ರೇಲಿಯಾ ಗ್ರೂಪ್ ಬಿ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದೆ.
ವಿಶ್ವ ನಂ.1 ತಂಡ ಆಸ್ಟ್ರೇಲಿಯಾ ಮತ್ತು ವಿಶ್ವ ನಂ.7ನೇ ಇಂಗ್ಲೆಂಡ್ ನಡುವಿನ ಈ ಪಂದ್ಯ ಒಂದು ರೀತಿಯಲ್ಲಿ ಒನ್ ಸೈಡ್ ಮ್ಯಾಚ್ ಎನಿಸಿತು. ಇಂಗ್ಲೆಂಡ್ ತಕ್ಕ ಹೋರಾಟ ನಡೆಸಿತಾದರೂ ಕೂಡ ಆಸ್ಟ್ರೇಲಿಯಾ ಎದುರಾಳಿಗೆ ಒಂದೂ ಗೋಲ್ ಬಾರಿಸಲು ಅವಕಾಶ ನೀಡದೆ ಗೆಲುವು ದಾಖಲಿಸುವಲ್ಲಿ ಯಶಸ್ವಿಯಾಯಿತು.
ಪಂದ್ಯದ ಪ್ರಥಮಾರ್ಥ ಗೋಲಿಲ್ಲದೆ ಬೋರ್ ಹೊಡೆಸಿತು. ಆದರೆ ದ್ವಿತೀಯಾರ್ಧದ 47ನೇ ನಿಮಿಷದಲ್ಲಿ ಆಸ್ಟ್ರೇಲಿಯಾದ ಜೇಕ್ ವೆಟ್ಟನ್, 50ನೇ ನಿಮಿಷದಲ್ಲಿ ಬ್ಲೇಕ್ ಗೋವರ್ಸ್, 56ನೇ ನಿಮಿಷದಲ್ಲಿ ಕೋರೆ ವೈಯರ್ ಗೋಲ್ ಬಾರಿಸಿ ತಂಡಕ್ಕೆ 3-0ಯ ಮುನ್ನಡೆ ಕೊಟ್ಟರು.
Story first published: Tuesday, December 4, 2018, 20:43 [IST]
Other articles published on Dec 4, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications