For Quick Alerts
ALLOW NOTIFICATIONS  
For Daily Alerts

ಹಾಕಿ ವಿಶ್ವಕಪ್: ನ್ಯೂಜಿಲ್ಯಾಂಡ್ ಸೋಲಿಸಿದ ಇಂಗ್ಲೆಂಡ್ ಕ್ವಾರ್ಟರ್ ಫೈನಲ್‌ಗೆ

Hockey World Cup: England knockout New Zealand, enter quarters

ಭುವನೇಶ್ವರ್, ಡಿಸೆಂಬರ್ 10: ಒಡಿಶಾದ ಭುವನೇಶ್ವರ್‌ನಲ್ಲಿರುವ ಕಳಿಂಗ ಅಂತಾರಾಷ್ಟ್ರೀಯ ಹಾಕಿ ಸ್ಟೇಡಿಯಂನಲ್ಲಿ ಸೋಮವಾರ (ಡಿಸೆಂಬರ್ 10) ನಡೆದ ಪುರುಷರ ಹಾಕಿ ವಿಶ್ವಕಪ್ ಕ್ರಾಸ್‌ ಓವರ್ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ತಂಡವನ್ನು 2-0ಯಿಂದ ಸೋಲಿಸಿರುವ ಇಂಗ್ಲೆಂಡ್ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದೆ.

ಇಂಗ್ಲೆಂಡ್ ಪರ 25ನೇ ನಿಮಿಷದಲ್ಲಿ ವಿಲ್ ಕ್ಯಾಲ್ನನ್ ಗೋಲ್ ಬಾರಿಸಿ ತಂಡಕ್ಕೆ ಮುನ್ನಡೆ ಕೊಟ್ಟರು. ಅದಾಗಿ 44ನೇ ನಿಮಿಷದಲ್ಲಿ ಲ್ಯೂಕ್ ಟೇಲರ್ 2ನೇ ಗೋಲ್ ಬಾರಿಸಿ ಇಂಗ್ಲೆಂಡ್‌ನ ಸುಲಭ ಗೆಲುವನ್ನು ಸಾರಿದರು. ನ್ಯೂಜಿಲ್ಯಾಂಡ್ ಗೋಲ್‌ಗಾಗಿ ಪರದಾಡಿತಾದರೂ ಒಂದೂ ಗೋಲ್ ಬಾರಿಸಲು ಇಂಗ್ಲೆಂಡ್ ಅವಕಾಶ ನೀಡಲಿಲ್ಲ.

ಅಂತಿಮ 8ರ ಹಂತಕ್ಕೆ ಪ್ರವೇಶಿಸಿರುವ ಇಂಗ್ಲೆಂಡ್ ಕ್ವಾರ್ಟರ್ ಫೈನಲ್ ನಲ್ಲಿ ಒಲಿಂಪಿಕ್ಸ್ ಚಾಂಪಿಯನ್ ಅರ್ಜೆಂಟೀನಾದ ಸವಾಲು ಸ್ವೀಕರಿಸಲಿದೆ. ಅತ್ತ ಅರ್ಜೆಂಟೀನಾ ಕ್ವಾರ್ಟರ್ ಫೈನಲ್‌ಗೆ ನೇರ ಪ್ರವೇಶ ಗಿಟ್ಟಿಸಿಕೊಂಡಿದೆ. ಬುಧವಾರ (ಡಿಸೆಂಬರ್ 12) ಅರ್ಜೆಂಟೀನಾ-ಇಂಗ್ಲೆಂಡ್ ಕಾದಾಟ ನಡೆಯಲಿದೆ.

Story first published: Monday, December 10, 2018, 21:03 [IST]
Other articles published on Dec 10, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+