Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಹಾಕಿ ವಿಶ್ವಕಪ್ 2018: ಕೆನಡಾ ವಿರುದ್ಧ ಗೆದ್ದೇ ಗೆಲ್ಲುವ ಹುಮ್ಮಸ್ಸಿನಲ್ಲಿ ಭಾರತ

Hockey World Cup, preview: India eye convincing win against Canada

ಭುವನೇಶ್ವರ್, ಡಿಸೆಂಬರ್ 7: ಪುರುಷರ ಹಾಕಿ ವಿಶ್ವ ರ್ಯಾಂಕಿಂಗ್‌ನಲ್ಲಿ 11ನೇ ಸ್ಥಾನದಲ್ಲಿರುವ ಕೆನಡಾ ವಿರುದ್ಧ ವಿಶ್ವ 5ನೇ ಶ್ರೇಯಾಂಕಿತ ಭಾರತ ಗೆಲುವಿನ ನಿರೀಕ್ಷೆಯಲ್ಲಿದೆ. ಭುವನೇಶ್ವರ್‌ನ ಕಳಿಂಗ ಅಂತಾರಾಷ್ಟ್ರೀಯ ಹಾಕಿ ಸ್ಟೇಡಿಯಂನಲ್ಲಿ ಶನಿವಾರ (ಡಿಸೆಂಬರ್ 8) ನಡೆಯುವ ವಿಶ್ವಕಪ್ ಪಂದ್ಯದಲ್ಲಿ ಇತ್ತಂಡಗಳು ಮುಖಾಮುಖಿಯಾಗುತ್ತಿವೆ.

ಹಾಕಿ ವಿಶ್ವಕಪ್ 2018 ಮುಖಪುಟ (ಪಾಯಿಂಟ್ ಟೇಬಲ್‌ ಸೇರಿ ಹೆಚ್ಚಿನ ಮಾಹಿತಿಗಳು ಇಲ್ಲಿವೆ)

'ಸಿ' ಗ್ರೂಪ್‌ನಲ್ಲಿರುವ ಭಾರತ ಮತ್ತು ಕೆನಡಾ ತಂಡಗಳು ಟೂರ್ನಿಯ 20ನೇ ಪಂದ್ಯಕ್ಕಾಗಿ ಎದುರು-ಬದುರಾಗುತ್ತಿವೆ. ಆಡಿರುವ ಎರಡು ಪಂದ್ಯಗಳಲ್ಲಿ ಭಾರತ ಒಂದರಲ್ಲಿ ಗೆದ್ದು ಮತ್ತೊಂದರಲ್ಲಿ ಬೆಲ್ಜಿಯಂ ಎದುರು ಡ್ರಾ ಸಾಧಿಸಿತ್ತು. ಅತ್ತ ಕೆನಡಾ, ಆಡಿರುವ ಎರಡರಲ್ಲಿ ಒಂದರಲ್ಲಿ ಸೋತು ಮತ್ತೊಂದರಲ್ಲಿ ಸಮಬಲ ಸಾಧಿಸಿತ್ತು.

ಪೂಲ್ 'ಸಿ'ಯಲ್ಲಿ ಬಲಿಷ್ಟ ತಂಡಗಳಾಗಿರುವ ಭಾರತ ಮತ್ತು ಬೆಲ್ಜಿಯಂ ತಂಡಗಳು ತಲಾ 4 ಅಂಕಗಳನ್ನು ಹಂಚಿಕೊಂಡು ಮುಂಚೂಣಿಯಲ್ಲಿವೆ. ಬಲಿಷ್ಟ ಬೆಲ್ಜಿಯಂ ಎದುರು ಭಾರತ, ಟೂರ್ನಿಯ ಹಿಂದಿನ ಪಂದ್ಯದಲ್ಲಿ ಆಡಿದ್ದ ಪರಿ, ಸಮಬಲ ಸಾಧಿಸಿದ್ದ ರೀತಿ ನೋಡಿದರೆ ನಾಳಿನ (ಡಿ. 8) ಪಂದ್ಯದಲ್ಲಿ ಗೆಲುವು ಖಚಿತ. ಹಾಗಂತ ಪಂದ್ಯಕ್ಕೂ ಮುನ್ನ ನಿರ್ಧಾರಕ್ಕೆ ಬರುವುದು ಸರಿಯಲ್ಲವಷ್ಟೆ.

ಟೂರ್ನಿಯಲ್ಲಿ ಭಾರತ, ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಮುಖಾಮುಖಿಯಲ್ಲಿ 5-0ಯ ಜಯ ಸಾಧಿಸಿತ್ತು. ಬೆಲ್ಜಿಯಂ ಎದುರಿನ ದ್ವಿತೀಯ ಹೋರಾಟವನ್ನು 2-2ರಿಂದ ಸಮಬಲಗೊಳಿಸಿಕೊಂಡಿತ್ತು. ಇದೀಗ ಕೆನಡಾ ಎದುರು ಗೆದ್ದು ಕ್ವಾರ್ಟರ್ ಫೈನಲ್ ಹಾದಿಯನ್ನು ಸುಗಮಗೊಳಿಸುವ ಯೋಜನೆಯಲ್ಲಿ ಭಾರತದ ಹಾಕಿ ಪುರುಷರಿದ್ದಾರೆ.

Story first published: Friday, December 7, 2018, 21:39 [IST]
Other articles published on Dec 7, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+