ಹಾಕಿ ವಿಶ್ವಕಪ್: ಆರಂಭೋತ್ಸವಕ್ಕೆ ಶಾರುಖ್, ಮಾಧುರಿ, ರೆಹಮಾನ್ ಮೆರಗು

ಭುವನೇಶ್ವರ, ನವೆಂಬರ್ 28: 'ಮಾನವೀಯತೆಯ ಏಕತೆ' ಸಂದೇಶದೊಂದಿಗೆ ಬುಧವಾರ (ನವೆಂಬರ್ 28) ಪ್ರಾರಂಭಗೊಳ್ಳುತ್ತಿರುವ ಪುರುಷರ ಹಾಕಿ ವಿಶ್ವಕಪ್ 2018ರ ಆರಂಭೋತ್ಸವದಲ್ಲಿ ಬಾಲಿವುಡ್ ಸೂಪರ್ ಸ್ಟಾರ್‌ಗಳಾದ ಶಾರುಖ್ ಖಾನ್, ಮಾಧುರಿ ದೀಕ್ಷಿತ್ ಮತ್ತು ಮ್ಯೂಸಿಕ್ ಮಾಂತ್ರಿಕ ಎಆರ್ ರೆಹಮಾನ್ ಪ್ರಮುಖಾಕರ್ಷಣೆಯಾಗಿ ರಂಜಿಸಿದರು.
ಆಕರ್ಷಕ ವಿಶ್ವಕಪ್ ಟ್ರೋಫಿಯನ್ನು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅನಾವರಣಗೊಳಿಸಿದರು. ಈ ಪ್ರತಿಷ್ಠಿತ ಟೂರ್ನಿಯಲ್ಲಿ ಸುಮಾರು 16 ದೇಶಗಳು ಪಾಲ್ಗೊಳ್ಳಲಿದ್ದು, ಎಲ್ಲಾ ರಾಷ್ಟ್ರಗಳ ತಂಡದ ನಾಯಕರು ವಿಶ್ವಕಪ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಪ್ರಾರಂಭೋತ್ಸವದ ಅಂಗವಾಗಿ ಮೊದಲು 'ದ ಅರ್ಥ್ ಸಾಂಗ್' ಎನ್ನುವ ರೂಪಕವನ್ನು ಪ್ರದರ್ಶಿಸಲಾಯಿತು. ನೂಪುರ್ ಮಹಾಜನ್ ಬರೆದು ನಿರ್ದೇಶಿಸಿರುವ ಈ ರೂಪಕದಲ್ಲಿ ಮಾಧುರಿ ದೀಕ್ಷಿತ್ ಭೂಮಿ ತಾಯಿಯಾಗಿ ಕಣ್ಮನ ಸೆಳೆದರು.

ಮನಗೆದ್ದ ಮಾಧುರಿ
ಆರಂಭೋತ್ಸವದಲ್ಲಿ ಭೂಮಿ ತಾಯಿಯಾಗಿ ರೂಪದಲ್ಲಿ ಪಾಲ್ಗೊಂಡಿದ್ದ ಮಾಧುರಿ ದೀಕ್ಷಿತ್, ಆರಂಭೋತ್ಸವ ಕಾರ್ಯಕ್ರಮದ ಪ್ರಮುಖಾಕರ್ಷಣೆಯಾಗಿದ್ದರು. ಭಗವತ್‌ಗೀತದ ಉಪನಿಷತ್‌ನ ಕೆಲ ವಿಚಾರಗಳನ್ನು ಒಳಗೊಂಡಿದ್ದ ಈ ರೂಪಕ ಇಂಗ್ಲಿಷ್-ಹಿಂದಿ ಎರಡೂ ಭಾಷೆಗಳ ಪ್ರದರ್ಶಿಸಲ್ಪಡುವ ಮೂಲಕ ಪ್ರೇಕ್ಷಕರ ಮನಸೂರೆಗೊಳಿಸಿತು.

ಎಆರ್ ರೆಹಮಾನ್ ಸಂಗೀತ
ತವರಿನಲ್ಲಿ ನಡೆಯುವ ಬಹುತೇಕ ಅಂತಾರಾಷ್ಟ್ರೀಯ ಟೂರ್ನಿಗಳ ಆರಂಭೊತ್ಸವದ ವೇಳೆ ಸಂಗೀತ ಮಾಂತ್ರಿಕ ಎಆರ್ ರೆಹಮಾನ್ ಸಂಗೀತ ರಂಜಿಸೋದಿದೆ. ಈ ಬಾರಿಯೂ ರಹಮಾನ್ 'ಜೈ ಹಿಂದ್ ಜೈ ಹಿಂದ್' ಸಂಗೀತದೊಂದಿಗೆ ಗಮನ ಸೆಳೆದರು. ಇದು ಹಾಕಿ ವಿಶ್ವಕಪ್‌ನ ಅಧಿಕೃತ ಗೀತೆಯೂ ಹೌದು.

ಶಾರುಖ್ ಮೆರಗು
ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಕೂಡ ಕಾರ್ಯಕ್ರಮದಲ್ಲಿ ಆಕರ್ಷಣೆ ಮೂಡಿಸಿದರು. ಸ್ಟೇಜ್ ನಲ್ಲಿ ನಿಂತು ಶಾರೂಖ್ ಖಾನ್ 'ಚಕ್ ದೇ ಇಂಡಿಯಾ' ಸಿನಿಮಾದ 'ವೊ ಸತ್ತರ್ ಮಿನ್ಯೂಟ್' ಡೈಲಾಗ್ ಹೇಳಿದ್ದು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.

ಮುಖ್ಯಮಂತ್ರಿಗಳಿಂದ ಅಧಿಕೃತ ಚಾಲನೆ
ಇಂಟರ್ ನ್ಯಾಷನಲ್ ಫೆಡರೇಷನ್ ಹಾಕಿ (ಎಫ್‌ಐಎಚ್) ಪುರುಷರ ಹಾಕಿ ವಿಶ್ವಕಪ್ ಟೂರ್ನಿಗೆ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅಧಿಕೃತ ಚಾಲನೆ ನೀಡಿದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಬಳಿಕ ಟೂರ್ನಿಗೆ ಚಾಲನೆ ನೀಡಲಾಯಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications