ಹಾಕಿ ವಿಶ್ವಕಪ್ 2018: ಉದ್ಘಾಟನಾ ಪಂದ್ಯದಲ್ಲಿ ಕೆನಡಾ ಕೆಡವಿದ ಬೆಲ್ಜಿಯಂ

ಭುವನೇಶ್ವರ, ನವೆಂಬರ್ 28: ಒಡಿಶಾದ ಭುವನೇಶ್ವರದಲ್ಲಿ ಬುಧವಾರ (ನವೆಂಬರ್ 28) ನಡೆದ ಪುರುಷರ ಹಾಕಿ ವಿಶ್ವಕಪ್ 2018ರ ಉದ್ಘಾಟನಾ ಪಂದ್ಯದಲ್ಲಿ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ ಬೆಲ್ಜಿಯಂ ತಂಡ ಕೆನಡಾವನ್ನು 2-0 ಅಂತರದಿಂದ ಹಿಮ್ಮೆಟ್ಟಿಸಿತು.
ಪಂದ್ಯ ಆರಂಭದಲ್ಲಿ ಬಲಿಷ್ಠ ಬೆಲ್ಜಿಯಂ 12ನೇ ನಿಮಿಷದಲ್ಲಿ ಗೋಲ್ ಬಾರಿಸಿ ಗೋಲ್ ಖಾತೆ ತೆರೆಯಿತು. ಬೆಲ್ಜಿಯಂ ನಾಯಕ ಥಾಮಸ್ ಬ್ರೈಲ್ಸ್ ಅವರು ಗೋಲ್ ಬಾರಿಸಿ ತಂಡಕ್ಕೆ 1-0ಯ ಮುನ್ನಡೆ ಕೊಟ್ಟರು. ಅದಾಗಿ ಮತ್ತೆ ಬೆಲ್ಜಿಯಂ ಪರ 22ನೇ ನಿಮಿಷದಲ್ಲಿ ಆರ್ಥರ್ ವ್ಯಾನ್ ಡೋರೆನ್ ದ್ವಿತೀಯ ಗೋಲ್ ಸಿಡಿಸಿದರು.
ಕೆನಡಾ ತಂಡ ಒಂದೂ ಗೋಲ್ ಬಾರಿಸಿದೆ ಇಕ್ಕಟ್ಟಿಗೆ ಒಳಗಾಯಿತು. ಆದರೆ ಪಂದ್ಯದ ಕೊನೆಯ ಹಂತದಲ್ಲಿ ಅಂದರೆ 48ನೇ ನಿಮಿಷದಲ್ಲಿ ಕೆನಡಾದ ಮಾರ್ಕ್ ಪಿಯರ್ಸನ್ ಅವರು ಗೋಲ್ ಬಾರಿಸಿ ಸೋಲಿನ ಅಂತರವನ್ನು ಕಿರಿದುಗೊಳಿಸಿದರು.
Story first published: Wednesday, November 28, 2018, 21:09 [IST]
Other articles published on Nov 28, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications