ಎಫ್ಐಎಚ್ ಹಾಕಿ: ಪಾಕಿಸ್ತಾನವನ್ನು 4-0ಯಿಂದ ಸದೆಬಡಿದ ಭಾರತ

ನವದೆಹಲಿ, ಜೂ. 23: ನೆದರ್ಲ್ಯಾಂಡ್ ನ ಬ್ರೆಡಾದಲ್ಲಿ ಶನಿವಾರ ನಡೆದ ಫೆಡರೇಶನ್ ಇಂಟರ್ ನ್ಯಾಷನಲ್ ಹಾಕಿ ಚಾಂಪಿಯನ್ ಶಿಪ್ ಟ್ರೋಫಿ ಆರಂಭಿಕ ಪಂದ್ಯದಲ್ಲಿ ಭಾರತದ ಪುರುಷರ ತಂಡ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ 4-0ಯ ಭರ್ಜರಿ ಗೆಲುವು ಸಾಧಿಸಿದೆ.
ಪಂದ್ಯಾರ್ಧದಲ್ಲಿ 1-0ಯ ಮುನ್ನಡೆಯಲ್ಲಿದ್ದ ಭಾರತ ಪಂದ್ಯ ಕೊನೆಗೊಳ್ಳುತ್ತಲೇ ಸಾಲಾಗಿ ಮೂರು ಗೋಲ್ ಗಳನ್ನು ದಾಖಲಿಸಿ ಪಾರಮ್ಯ ಮೆರೆಯಿತು. ಭಾರತ ಪರ ರಮಣ್ ದೀಪ್ ಸಿಂಗ್, ದಿಲ್ ಪ್ರೀತ್ ಸಿಂಗ್, ಮನ್ದೀಪ್ ಸಿಂಗ್, ಲಲಿತ್ ಉಪಾಧ್ಯಾಯ ಗೋಲ್ ಸಿಡಿಸಿ ತಂಡದ ಗೆಲುವಿಗೆ ಕಾರಣರಾದರು.
25ನೇ ನಿಮಿಷದಲ್ಲಿ ರಮಣ್ ದೀಪ್ ಮೊದಲ ಗೋಲ್ ಬಾರಿಸಿ ಭಾರತಕ್ಕೆ 1-0ಯ ಮುನ್ನಡೆ ಕೊಟ್ಟರು. ಪಂದ್ಯದ ಮುಕ್ಕಾಲು ಅವಧಿವರೆಗೂ ಭಾರತ ಸಣ್ಣ ಮುನ್ನಡೆಯಲ್ಲೇ ಇತ್ತು. ಆದರೆ ಅನಂತರ ತಿರುಗಿಬಿದ್ದ ಭಾರತ ಎದುರಾಳಿ ವಿರುದ್ಧ ಒಂದರ ಮೇಲೊಂದು ಗೋಲ್ ಬಾರಿಸುತ್ತ ಸಾಗಿತು.
54ನೇ ನಿಮಿಷದಲ್ಲಿ 17ರ ಹರೆಯದ ದಿಲ್ ಪ್ರೀತ್ ಭಾರತದ ಗೋಲನ್ನು ದ್ವಿಗುಣಗೊಳಿಸಿದರು. ಅದಾಗಿ 57ನೇ ನಿಮಿಷದಲ್ಲಿ ಮನ್ ದೀಪ್ ಮೂರನೇ ಗೋಲನ್ನು ಸೇರಿಸಿದರು. ಪಂದ್ಯದ ಕೊನೇ ಹಂತದಲ್ಲಿ ಲಲಿತ್ ನಾಲ್ಕನೇ ಗೋಲ್ ಬಾರಿಸಿ ಭಾರತದ ಪ್ರಾಬಲ್ಯವನ್ನು ಸಾರಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications