For Quick Alerts
ALLOW NOTIFICATIONS  
For Daily Alerts

ಹಾಕಿː ಪಾಕಿಸ್ತಾನಕ್ಕೆ ಮಣ್ಣುಮುಕ್ಕಿಸಿ ಚಿನ್ನ ಗೆದ್ದ ಭಾರತ

ಇಂಚಿಯಾನ್, ಅ. 2 : ಭಾರತ ತಂಡ ಏಷ್ಯಾ ಖಂಡದ ಹಾಕಿ ಸಾಮ್ರಾಟನಾಗಿ ಪ್ರಜ್ವಲಿಸಿದೆ. ಏಷ್ಯನ್‌ ಗೇಮ್ಸ್‌ನಲ್ಲಿ ಗುರುವಾರ ಭಾರತಕ್ಕೆ ಮರೆಯಲಾಗದ ದಿನ. ಹಾಕಿ ಮತ್ತು ಮಹಿಳೆಯರ ರಿಲೆಯಲ್ಲಿ ಚಿನ್ನದ ಪದಕ ಭಾರತದ ಪಾಲಾಗಿದೆ.

ಭಾರತಕ್ಕೆ ಒಂದೆಡೆ ಪಾಕಿಸ್ತಾನ ಮಣಿಸಿದ ಸಂತೋ‍ಷವಾದರೆ, ಇನ್ನೊಂದೆಡೆ 2016ರ ರಿಯೋ ಒಲಿಂಪಿಕ್ಸ್‌ಗೆ ಪ್ರವೇಶ ಪಡೆದ ಸಂತಸ. ಕುತೂಹಲ ಕೆರಳಿಸಿದ್ದ ಹಾಕಿ ಪಂದ್ಯದ ಅವಧಿ ಪೂರ್ಣವಾದಾಗ 1-1 ರಿಂದ ಎರಡೂ ತಂಡಗಳು ಸಮಬಲ ಸಾಧಿಸಿದ್ದವು. ನಂತರ ಪೆನಾಲ್ಟಿ ಶೂಟೌಟ್‌ಗೆ ಅವಕಾಶ ನೀಡಿದಾಗ ಭಾರತ ಪದಕದ ಮೇಲೆ ಅಚ್ಚೊತ್ತಿತು. ಪೆನಾಲ್ಟಿ ಶೂಟೌಟ್‌ನಲ್ಲಿ 4-2 ರಿಂದ ಪಾಕಿಸ್ತಾನವನ್ನು ಬಗ್ಗು ಬಡಿದು ವಿಜಯದ ನಗೆ ಬೀರಿತು.[ಬಾಕ್ಸರ್ ಸರಿತಾ ಬೆಂಬಲಕ್ಕೆ ನಿಂತ ಕ್ರೀಡಾಪ್ರೇಮಿಗಳು]

ಸತತ ನಾಲ್ಕನೇ ಏಷ್ಯನ್ ಗೆಮ್ಸ್ ಚಿನ್ನದ ಪದಕದ ಮೇಲೆ ಕಣ್ಣಿಟ್ಟಿದ್ದ ಪಾಕಿಸ್ತಾನದ ಆಸೆಗೆ ಭಾರತದ ಆಟಗಾರರ ಕೆಚ್ಚೆದೆ ಆಟ ತಣ್ಣೀರು ಎರಚಿತು. 16 ವರ್ಷಗಳ ಬಳಿಕ ಭಾರತ ಚಿನ್ನದ ಸಾಧನೆ ಮಾಡಿತು. ಪೆನಾಲ್ಟಿ ಶೂಟೌಟ್‌ನಲ್ಲಿ 3-2ರ ಮುನ್ನಡೆ ಸಾಧಿಸಿದ್ದಾಗ ಧರ್ಮವೀರ್‌ ಸಿಂಗ್ ಅವರು ಸಿಡಿಸಿದ ಚೆಂಡು ಗೋಲು ಪೆಟ್ಟಿಗೆ ಸೇರುತ್ತಿದಂತೆ ಭಾರತದ ಕ್ರೀಡಾಪ್ರೇಮಿಗಳ ಹರ್ಷೋದ್ಗಾರ ಮುಗಿಲು ಮುಟ್ಟಿತು.

ಪೆನಾಲ್ಟಿ ಶೂಟೌಟ್‌ ಗೋಲು ದಾಖಲಿಸಿದವರು
ಭಾರತ-ಆಕಾಶದೀಪ ಸಿಂಗ್, ರೂಪಿಂದರ್ ಪಾಲ್ ಸಿಂಗ್, ಬಿರೇಂದರ್‌, ಧರ್ಮವೀರ್ ಸಿಂಗ್
ಪಾಕಿಸ್ತಾನ- ಮಹಮದ್ ವಾಖಾಸ್, ಶಫಕ್ತ್‌ ರಸೂಲ್

ಪೆನಾಲ್ಟಿ ಶೂಟೌಟ್‌ ಗೋಲು ತಪ್ಪಿಸಿಕೊಂಡವರು
ಭಾರತ-ಮನಪ್ರೀತ್ ಸಿಂಗ್
ಪಾಕಿಸ್ತಾನ-ಅಬ್ದುಲ್ ಹಸೀಮ್‌ ಖಾನ್, ಮಹಮದ್‌ ಉಮರ್ ಬುಟ್ಟೊ

ಪಂದ್ಯದ ವೇಳೆ ಗೋಲು ದಾಖಲಿಸಿದವರು
ಕೋತಾಜಿತ್‌ ಸಿಂಗ್ (ಭಾರತ)
ಮಹಮದ್ ರಿಜ್ವಾನ್ (ಪಾಕಿಸ್ತಾನ)(ಪಿಟಿಐ ಚಿತ್ರಗಳು)

ಮಹಿಳೆಯರ ರಿಲೆಯಲ್ಲೂ ಚಿನ್ನ
ಮಹಿಳೆಯರ ರಿಲೆಯಲ್ಲೂ ಭಾರತಕ್ಕೆ ಚಿನ್ನದ ಪದಕ. ಕರ್ನಾಟಕದ ಪೂವಮ್ಮ ಕೈ ತಪ್ಪಲಿದ್ದ ಬಂಗಾರವನ್ನು ತಮ್ಮ ಮಿಂಚಿನ ಓಟದ ಮೂಲಕ ಭಾರತದ ಮುಡಿಗೇರಿಸಿದರು. ಒಟ್ಟು 50 ಪದಕಗಳನ್ನು ದಾಖಲಿಸಿದ ಭಾರತ ಪದಕ ಪಟ್ಟಿಯಲ್ಲಿ 11 ನೇ ಸ್ಥಾನ ಪಡೆದುಕೊಂಡಿತು.

povvamaaaa

ಪ್ರಿಯಾಂಕಾ ಪನ್ವರ್, ತಿಂಟು ಲೂಕಾ, ಮನ್‌ದೀಪ್‌ ಕೌರ್ ಮತ್ತು ಕರ್ನಾಟಕದ ಎಂ.ಆರ್.ಪೂವಮ್ಮ ಅವರನ್ನು ಒಳಗೊಂಡ ಭಾರತದ ಮಹಿಳಾ ರಿಲೆ ತಂಡ ಎಲ್ಲರಿಗಿಂತ ಮುಂಚೆ ಗುರಿ ಮುಟ್ಟಿ ಚಿನ್ನ ಮುಡಿಗೇರಿಸಿಕೊಂಡಿತು. ಮಹಿಳೆಯರ ಡಿಸ್ಕಸ್‌ ಎಸೆತದಲ್ಲಿ ಸೀಮಾ ಪೂನಿಯಾ ಚಿನ್ನ ಗೆದ್ದ ನಂತರ ಅಥ್ಲೇಟಿಕ್ಸ್ ವಿಭಾಗದಲ್ಲಿ ಭಾರತಕ್ಕೆ ದೊರೆತ ಎರಡನೇ ಚಿನ್ನದ ಪದಕ ಇದಾಗಿದೆ.(ಪದಕ ಪಟ್ಟಿ)

ಮಹಿಳೆಯರ ರಿಲೆಯಲ್ಲಿ ಜಪಾನ್‌ ಬೆಳ್ಳಿಗೆ ತೃಪ್ತಿ ಪಡಬೇಕಾಯಿತು. ಚೀನಾಕ್ಕೆ ದಕ್ಕಿದ್ದು ಕಂಚು. ಏಷ್ಯನ್ ಗೇಮ್ಸ್ ರಿಲೆಯಲ್ಲಿ ಭಾರತಕ್ಕೆ ಇದು ನಾಲ್ಕನೇ ಚಿನ್ನದ ಪದಕವಾಗಿದೆ.

Story first published: Wednesday, January 3, 2018, 10:15 [IST]
Other articles published on Jan 3, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+