Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

FIH men's junior world cup: ಬೆಲ್ಜಿಯಂ ವಿರುದ್ಧ ಶೂಟೌಟ್‌ ಗೆದ್ದ ಭಾರತ

ಎಫ್‌ಐಎಚ್ ಪುರುಷರ ಜೂನಿಯರ್ ಹಾಕಿ ವಿಶ್ವಕಪ್ 2025ನಲ್ಲಿ ಭಾರತ ಅಮೋಘ ಪ್ರದರ್ಶನ ನೀಡಿದೆ. ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಭಾರತ, ಬೆಲ್ಜಿಯಂ ತಂಡವನ್ನು ಮಣಿಸಿತು. ರೋಚಕತೆ ಹುಟ್ಟಿಸಿದ್ದ ಪಂದ್ಯ ಶೂಟೌಟ್‌ ಕಡೆಗೆ ನಡೆಯಿತು. ಈ ವೇಳೆ ಸ್ಥಿರ ಪ್ರದರ್ಶನ ನೀಡಿದ ಭಾರತ 4-3 ಗೋಲುಗಳಿಂದ ಬಲಿಷ್ಠ ಬೆಲ್ಜಿಯಂ ತಂಡವನ್ನು ಮಣಿಸಿತು.

ಉಭಯ ತಂಡಗಳ ನಡುವಣ ಎಂಟರ ಘಟ್ಟದ ಪಂದ್ಯ ಚೆನ್ನೈನ ಮೇಯರ್ ರಾಧಾಕೃಷ್ಣನ್ ಹಾಕಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಭಾರತ ಸ್ಥಿರ ಪ್ರದರ್ಶನ ನೀಡಿತು. ನಿಗದಿತ ಸಮಯದ ಆಟದಲ್ಲಿ ಉಭಯ ತಂಡಗಳು ತಲಾ 2 ಗೋಲುಗಳನ್ನು ದಾಖಲಿಸಿದ್ದರಿಂದ, ಪಂದ್ಯದ ಫಲಿತಾಂಶ ಅರಿಯಲು ಪೆನಾಲ್ಟಿ ಶೂಟೌಟ್‌ ಮೊರೆ ಹೋಗಲಾಯಿತು. ಈ ವೇಳೆ ಭಾರತ 4 ಗೋಲು ಬಾರಿಸಿದರೆ, ಬೆಲ್ಜಿಯಂ 3 ಗೋಲು ಬಾರಿಸಿ ಸೋಲು ಕಂಡಿತು.

India edge Belgium in thrilling shootout to enter FIH Junior Men s Hockey World Cup 2025 semi-finals

ಬಲಿಷ್ಠ ಬೆಲ್ಜಿಯಂ ತಂಡ ಆರಂಭದಿಂದಲೂ ಪಂದ್ಯದ ಮೇಲೆ ಹಿಡಿತ ಸಾಧಿಸಿ ಅಬ್ಬರಿಸಿತು. ಬೆಲ್ಜಿಯಂ ತಂಡದ ಪರ 12ನೇ ನಿಮಿಷದಲ್ಲಿ ಕಾರ್ನೆಜ್-ಮ್ಯಾಸಾಂಟ್ ಗ್ಯಾಸ್ಪರ್ಡ್ ಗೋಲು ಬಾರಿಸಿ ಅಬ್ಬರಿಸಿದರು. ಈ ಅವಧಿಯಲ್ಲಿ ಭಾರತ ಗೋಲು ಬಾರಿಸುವ ಆಸೆ ಫಲಿಸಲಿಲ್ಲ. ಈ ಅವಧಿಯಲ್ಲಿ ಭಾರತ ಹಲವು ಭಾರಿ ಚೆಂಡನ್ನು ತೆಗೆದುಕೊಂಡು ಡಿ ಭಾಗದಲ್ಲಿ ಎಂಟ್ರಿ ನೀಡಿದರೂ ಸಹ ಗೋಲು ಬಾರಿಸುವಲ್ಲಿ ವಿಫಲವಾಯಿತು. ಆದರೆ ಭಾರತದ ಪರ ರೋಹಿತ್‌ 45ನೇ ನಿಮಿಷದಲ್ಲಿ ಗೋಲು ದಾಖಲಿಸಿ ಅಂತರವನ್ನು ಸಮನಾಗಿಸಿಕೊಂಡರು. ಪರಿಣಾಮ ಎರಡು ಅವಧಿಯ ಆಟದಲ್ಲಿ ಉಭಯ ತಂಡಗಳು ತಲಾ ಒಂದೊಂದು ಗೋಲು ಸಿಡಿಸಿದ್ದವು.

ಕೊನೆಯ ಕ್ಷಣದಲ್ಲಿ ಮಿಂಚಿದ ಬೆಲ್ಜಿಯಂ

ಮೂರನೇ ಅವಧಿಯ ಆರಂಭದಲ್ಲಿ ಭಾರತದ ಪರ ಶಾರದಾ ನಂದ್ ತಿವಾರಿ 47ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಅವಕಾಶವನ್ನು ಗೋಲಾಗಿ ಪರಿವರ್ತಿಸಿತು. ಈ ಮೂಲಕ ಭಾರತ ಮೊದಲ ಬಾರಿಗೆ ಮುನ್ನಡೆ ಸಾಧಿಸಿತು. ಕೊನೆಯಾವಧಿಯಲ್ಲಿ ಬೆಲ್ಜಿಯಂ ಅಬ್ಬರಿಸಿತು. ಪಂದ್ಯ ಮುಗಿಯಲು ಕೇವಲ ಸೆಕೆಂಡುಗಳಿರುವಾಗ ಬೆಲ್ಜಿಯಂ ಗೋಲು ಗಳಿಸಿ ಸ್ಕೋರ್ ಅನ್ನು 2-2 ಗೆ ಸಮಗೊಳಿಸಿತು.

ಪೆನಾಲ್ಟಿ ಶೂಟೌಟ್ ಗೆದ್ದ ಭಾರತ ಟೂರ್ನಿಯಲ್ಲಿ ತನ್ನ ಅಜೇಯ ಓಟವನ್ನು ಮುಂದುವರೆಸಿದೆ. ಲೀಗ್‌ ಹಂತದಲ್ಲಿ ಭಾರತ ಆಡಿದ ಎಲ್ಲ ಪಂದ್ಯಗಳನ್ನು ಗೆದ್ದು ನಾಕೌಟ್ ಹಂತಕ್ಕೆ ಅರ್ಹತೆ ಪಡೆದಿತ್ತು. ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲೂ ಆತಿಥೇಯ ತಂಡ ಅಮೋಘ ಆಟವನ್ನು ಆಡಿದೆ.

Story first published: Friday, December 5, 2025, 23:15 [IST]
Other articles published on Dec 5, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+