For Quick Alerts
ALLOW NOTIFICATIONS  
For Daily Alerts

Sultan Azlan Shah Cup: ಫೈನಲ್‌ನಲ್ಲಿ ಭಾರತಕ್ಕೆ ನಿರಾಸೆ: ಬೆಲ್ಜಿಯಂಗೆ ಪ್ರಶಸ್ತಿ

ಇಪೋ: ಸುಲ್ತಾನ್ ಅಜ್ಲಾನ್ ಷಾ ಕಪ್ ಹಾಕಿ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಭಾರತ ನಿರಾಸೆ ಅನುಭವಿಸಿದೆ. ಪ್ರಶಸ್ತಿ ಸುತ್ತಿನ ಕಾದಾಟದಲ್ಲಿ ಭಾರತ 0-1 ಗೋಲುಗಳ ಅಂತರದಿಂದ ಬೆಲ್ಜಿಯಂ ವಿರುದ್ಧ ನಿರಾಸೆ ಅನುಭವಿಸಿತು. ಈ ಮೂಲಕ ಬೆಲ್ಜಿಯಂ ಚೊಚ್ಚಲ ಬಾರಿಗೆ ಟ್ರೋಫಿಗೆ ಮುತ್ತಿಟ್ಟು ಸಂಭ್ರಮಿಸಿದೆ.

ಭಾನುವಾರ ನಡೆದ ಫೈನಲ್‌ ಪಂದ್ಯದಲ್ಲಿ ಎರಡು ಬಲಿಷ್ಠ ತಂಡಗಳು ಕಾದಾಟ ನಡೆಸಿದವು. ಈ ವೇಳೆ ಭಾರತದ ಆಟಗಾರರು ಭರ್ಜರಿ ಪ್ರದರ್ಶನ ನೀಡಿದರು. ಈ ಅವಧಿಯ ಆಟದಲ್ಲಿ ಭಾರತ ಗೋಲು ಬಾರಿಸುವ ಪ್ರಯತ್ನವನ್ನು ಪಟ್ಟಿತು ಆದರೆ, ಸಫಲವಾಗಲಿಲ್ಲ. ಇನ್ನು ಬೆಲ್ಜಿಯಂ ಸಹ ಹಲವು ಬಾರಿ ಚೆಂಡನ್ನು ಗೋಲು ಪೆಟ್ಟಿಗೆಯ ಹತ್ತಿರ ತಂದಿತು. ಆದರೆ ಭಾರತದ ಗೋಲಿ ಅಮೋಘವಾಗಿ ತಡೆಯುವಲ್ಲಿ ಸಫಲರಾದರು. ಪರಿಣಾಮ ಮೊದಲಾವಧಿಯಲ್ಲಿ ಗೋಲುಗಳು ದಾಖಲಾಗಲಿಲ್ಲ. ಭಾರತ ಹಾಗೂ ಬೆಲ್ಜಿಯಂಗೆ ಅವಧಿಯಲ್ಲಿ ಒಂದು ಪೆನಾಲ್ಟಿ ಕಾರ್ನರ್ ಅವಕಾಶವೂ ಲಭಿಸಿತು. ಇದನ್ನು ಬಳಸಿಕೊಳ್ಳುವಲ್ಲಿ ಎರಡೂ ತಂಡಗಳು ವಿಫಲವಾದವು.

India Lose Sultan Azlan Shah Cup Final 0-1 to Belgium Belgians Lift Maiden Trophy in Ipoh

ಎರಡನೇ ಅವಧಿಯ ಆಟದಲ್ಲಿ ಬೆಲ್ಜಿಯಂ ಗೋಲು ಬಾರಿಸಲು ಹಲವು ಬಾರಿ ಪ್ರಯತ್ನ ಪಟ್ಟಿತು. ಈ ಅವಧಿಯಲ್ಲಿ ಬೆಲ್ಜಿಯಂ ಆಸೆ ಫಲಿಸಲಿಲ್ಲ. ಅಲ್ಲದೆ ಒಂದು ಬಾರಿ ಪೆನಾಲ್ಟಿ ಕಾರ್ನರ್ ಅವಕಾಶ ಲಭಿಸಿದರೂ ಈ ಅವಕಾಶವನ್ನು ಬಳಸಿಕೊಳ್ಳುವಲ್ಲಿ ಬೆಲ್ಜಿಯಂ ಎಡವಿತು. ಪರಿಣಾಮ ಎರಡನೇ ಅವಧಿಯ ಆಟದಲ್ಲೂ ಯಾವುದೇ ಗೋಲುಗಳು ದಾಖಲಾಗಲಿಲ್ಲ.

ಭರ್ಜರಿ ಗೋಲು

ಮೂರನೇ ಅವಧಿಯ ಆಟದಲ್ಲಿ ಬೆಲ್ಜಿಯಂ ಆಕ್ರಮಣಕಾರಿ ಆಟವನ್ನು ಆಡಿತು. ಈ ಅವಧಿಯಲ್ಲಿ 4ನೇ ನಿಮಿಷದಲ್ಲಿ ಹೆಲಿನ್ ಗಿಲ್ಲೌಮ್ ಗೋಲು ಪೆಟ್ಟಿಗೆ ಎಡದಿಂದ ನೂಕಿದ ಚೆಂಡಿಗೆ ಸ್ಟಾಕ್‌ಬ್ರೋಕರ್ ಥಿಬಿಯೊ ಗೋಲು ಪೆಟ್ಟಿಗೆಯಲ್ಲಿ ನೂಕುವಲ್ಲಿ ಸಫಲರಾದರು. ಬೆಲ್ಜಿಯಂ ಪಂದ್ಯದಲ್ಲಿ ಮುನ್ನಡೆ ಸಾಧಿಸಿತು. ಈ ಅವಧಿಯ ಆಟ ಮುಗಿದಾಗ ಬೆಲ್ಜಿಯಂ 1-0 ಗೋಲುಗಳ ಮುನ್ನಡೆ ಸಾಧಿಸಿತ್ತು. ಕೊನೆಯ ಅವಧಿಯ ಆಟದಲ್ಲಿ ಗೋಲು ಬಾರಿಸುವ ಭಾರತದ ಯೋಜನೆ ಫಲಿಸಲಿಲ್ಲ. ಪರಿಣಾಮ ಭಾರತ ಪಂದ್ಯ ಸೋತಿತು.

Story first published: Sunday, November 30, 2025, 23:51 [IST]
Other articles published on Nov 30, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+