ಎಫ್ಐಎಚ್: ಅರ್ಜೆಂಟೀನಾವನ್ನು 2-1ರಿಂದ ದಂಗುಬಡಿಸಿದ ಭಾರತ

ನವದೆಹಲಿನ ಜೂ. 24: ನೆದರ್ಲ್ಯಾಂಡ್ ನ ಬ್ರೆಡಾದಲ್ಲಿ ಭಾನುವಾರ ನಡೆದ ಫೆಡರೇಶನ್ ಇಂಟರ್ ನ್ಯಾಷನಲ್ ಹಾಕಿ ಚಾಂಪಿಯನ್ ಶಿಪ್ ಟ್ರೋಫಿ ಎರಡನೇ ಪಂದ್ಯದಲ್ಲಿ ಭಾರತದ ಪುರುಷರ ತಂಡ ಅರ್ಜೆಂಟೀನಾ ವಿರುದ್ಧ 2-1ರ ಗೆಲುವು ಸಾಧಿಸಿದೆ.
ಅರ್ಜೆಂಟೀನಾ ವಿರುದ್ಧ ಎರಡೂ ಗೋಲ್ ಗಳನ್ನು ಭಾರತ ಪಂದ್ಯದ ಸೆಕೆಂಡ್ ಕ್ವಾರ್ಟರ್ ಅವಧಿಯಲ್ಲೇ ಸಿಡಿಸಿ ಗೆಲುವನ್ನು ಆಚರಿಸಿತು. ಹರ್ಮನ್ ಪ್ರೀತ್ ಸಿಂಗ್ 17ನೇ ನಿಮಿಷದಲ್ಲಿ ಮೊದಲು ಗೋಲ್ ಸಿಡಿಸಿದರು. 28ನೇ ನಿಮಿಷದಲ್ಲಿ ಮನ್ ದೀಪ್ ಸಿಂಗ್ ಎರಡನೇ ಗೋಲ್ ಬಾರಿಸಿ ಭಾರತಕ್ಕೆ 2-0ಯ ಮುನ್ನಡೆ ತಂದುಕೊಟ್ಟರು.
ಹಾಕಿಯಲ್ಲಿ ವಿಶ್ವ ನಂ. 2ನೇ ಸ್ಥಾನದಲ್ಲಿರುವ ಅರ್ಜೆಂಟೀನಾ ಪರ ಗೊಂಜಾಲೊ ಪೀಲ್ಲಾಟ್ ಅವರು 30ನೇ ನಿಮಿಷದಲ್ಲಿ ಗೋಲ್ ಬಾರಿಸಿ ಭಾರತ ನೀಡಿದ್ದ ಅಂತರವನ್ನು ಕಿರಿದುಗೊಳಿಸಿದರು.
ಒಟ್ಟು 8 ಬಾರಿ ಒಲಿಂಪಿಕ್ಸ್ ಚಾಂಪಿಯನ್ಸ್ ಹೆಗ್ಗಳಿಕೆ ಪಾತ್ರವಾಗಿರುವ ಭಾರತ ಶನಿವಾರ ಮೊದಲ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ 4-0 ಗೆಲುವು ದಾಖಲಿಸಿತ್ತು. ಜೂನ್ 27ರಂದು ನಡೆಯುವ ಮುಂದಿನ ಸ್ಪರ್ಧೆಯಲ್ಲಿ ಭಾರತ ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾದ ಸವಾಲು ಸ್ವೀಕರಿಸಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications