Asia Cup; ಏಷ್ಯಾ ಕಪ್‌ಗಾಗಿ ಭಾರತ ಪ್ರವಾಸ ಬೆಳೆಸಲಿರುವ ಪಾಕ್
ಈ ಬಾರಿಯ ಹಾಕಿ ಏಷ್ಯಾ ಕಪ್ ಭಾರತದಲ್ಲಿ ನಡೆಯಲಿದೆ. ಈ ಟೂರ್ನಿಯಲ್ಲಿ ಒಟ್ಟು 8 ತಂಡಗಳು ಕಣಕ್ಕೆ ಇಳಿಯಲಿವೆ. ಇನ್ನು ಪಾಕಿಸ್ತಾನ ಈ ಟೂರ್ನಿಯಲ್ಲಿ ಭಾಗವಹಿಸುವ ಬಗ್ಗೆ ಪ್ರಶ್ನೆಗಳು ಎದ್ದಿದ್ದವು. ಈಗ ಈ ಬಗ್ಗೆ ಉತ್ತರ ಸಿಕ್ಕಿದೆ. ಭಾರತ ಹಾಗೂ ಪಾಕ್ ನಡುವಣ ಉದ್ವಿಗ್ನತೆ ನಡುವೆ ಪಾಕ್, ಭಾರತಕ್ಕೆ ಪ್ರವಾಸ ಬೆಳೆಸುತ್ತದಾ ಎಂಬ ಪ್ರಶ್ನೆಗೆ ಕ್ರೀಡಾ ಸಚಿವಾಲಯ ಉತ್ತರ ನೀಡಿದೆ.
ಮುಂದಿನ ತಿಂಗಳು ಭಾರತದಲ್ಲಿ ನಡೆಯಲಿರುವ ಹಾಕಿ ಏಷ್ಯಾ ಕಪ್ ನಡೆಯಲಿದ್ದು, ಈ ಟೂರ್ನಿಗೆ ಪಾಕ್ ಭಾರತಕ್ಕೆ ಪ್ರವಾಸ ಬೆಳೆಸಲು ಕ್ರೀಡಾ ಸಚಿವಾಲಯ ಹಸಿರು ನಿಶಾನೆ ನೀಡಿದೆ ಎಂದು ತಿಳಿದು ಬಂದಿದೆ. ಇದರಿಂದ ಪಾಕ್ ತಂಡ, ಟೂರ್ನಿಯಲ್ಲಿ ಭಾಗವಹಿಸಲು ನೆರೆಯ ರಾಷ್ಟ್ರವಾದ ಭಾರತಕ್ಕೆ ಆಗಮಿಸಲಿದೆ.

ಮೂಲಗಳ ಪ್ರಕಾರ ಈ ಟೂರ್ನಿಯಲ್ಲಿ ಭಾಗವಹಿಸಲಿರುವ ದೇಶಗಳೊಂದಿಗೆ ಪಾಕ್ ಸಹ ಭಾಗವಹಿಸಲು ಯಾವುದೇ ತೊಂದರೆ ಇಲ್ಲ ಎಂಬುದಾಗಿ ಕ್ರೀಡಾ ಸಚಿವಾಲಯ ತಿಳಿಸಿದ್ದಾಗಿ ತಿಳಿದು ಬಂದಿದೆ. ಮಲ್ಟಿನೇಷನ್ ಟೂರ್ನಿಗಳಲ್ಲಿ ಭಾಗವಹಿಸಲು ಪಾಕ್‌ಗೆ ಯಾವುದೇ ಬ್ರೇಕ್ ಹಾಕುವುದಿಲ್ಲ ಎಂಬ ಅಂಶ ಬೆಳಕಿಗೆ ಬಂದಿದೆ.ಇನ್ನು ರಷ್ಯಾ ಹಾಗೂ ಉಕ್ರೇನ್ ನಡುವೆ ಯುದ್ಧ ನಡೆದಿದ್ದು, ಈ ದೇಶಗಳ ಮಲ್ಟಿನೇಷನ್ ಟೂರ್ನಿಗಳಲ್ಲಿ ಭಾಗವಹಿಸುತ್ತಿವೆ.
ಪಾಕ್ ನಡೆ ನಿಗೂಢ
ಬಿಹಾರದ ರಾಜ್‌ಗಿರ್‌ನಲ್ಲಿ ಆಗಸ್ಟ್ 27 ರಿಂದ ಸೆಪ್ಟೆಂಬರ್ 7ರ ವರೆಗೆ ಹಾಕಿ ಏಷ್ಯಾ ಕಪ್ ನಡೆಯಲಿದೆ. ಭಾರತ ಆತಿತೇಯ ದೇಶವಾಗಿದ್ದರಿಂದ ನೇರವಾಗಿ ಅರ್ಹತೆ ಪಡೆದಿದೆ. ಇನ್ನು ಚೀನಾ, ಜಪಾನ್, ಮಲೇಷ್ಯಾ, ದಕ್ಷಿಣ ಕೊರಿಯಾ, ಓಮನ್ ಮತ್ತು ಚೈನೀಸ್ ತೈಪೆ ತಂಡಗಳು ಪ್ರಶಸ್ತಿಗಾಗಿ ಕಾದಾಟ ನಡೆಸಲಿವೆ. ಪಾಕಿಸ್ತಾನ ಹಾಕಿ ಮಂಡಳಿಯು ಪಂದ್ಯಾವಳಿಯಲ್ಲಿ ಭಾಗವಹಿಸಬೇಕೆ ಅಥವಾ ಬೇಡವೇ ಎಂಬುದರ ಕುರಿತು ಇನ್ನೂ ಯಾವುದೇ ಹೇಳಿಕೆಯನ್ನು ನೀಡಿಲ್ಲ.
ಹಾಕಿ ಇಂಡಿಯಾ ಹೇಳಿದ್ದೇನು?
ಇದೇ ವಿಷಯದ ಬಗ್ಗೆ ಹಾಕಿ ಇಂಡಿಯಾದ ಪ್ರಧಾನ ಕಾರ್ಯದರ್ಶಿ ಭೋಲಾ ನಾಥ್ ಸಿಂಗ್ ಮಾತನಾಡಿದ್ದು, ಪಾಕ್ ತಂಡ ಇಲ್ಲಿಗೆ ಪ್ರವಾಸ ಬೆಳೆಸುತ್ತದೆಯೋ ಇಲ್ಲವೋ ಎಂಬುದನ್ನು ತಿಳಿಸುವ ಸಮಯ ಇನ್ನು ದೂರ ಇದೆ. ಆದರೆ ಅವರ ನಡೆ ಏನಿರಲಿದೆ ಎಂಬುದನ್ನು ಹೇಳುವುದು ಕಷ್ಟ ಎಂದಿದ್ದಾರೆ.
ವಿಶ್ವಕಪ್‌ಗೆ ಅರ್ಹತೆ
ಭಾರತ ಹಾಕಿ ತಂಡವು ಮೂರು ಬಾರಿ ಏಷ್ಯಾ ಕಪ್ ಪ್ರಶಸ್ತಿಯನ್ನು ಗೆದ್ದಿದೆ. ಇದು ಕೊನೆಯ ಬಾರಿಗೆ 2017 ರಲ್ಲಿ ಈ ಪ್ರಶಸ್ತಿಯನ್ನು ಗೆದ್ದಿತ್ತು. ಪಾಕ್ ಸಹ ಮೂರು ಬಾರಿ ಟೂರ್ನಿಯ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ. ಮುಂದಿನ ವರ್ಷ ಆಗಸ್ಟ್ 14 ರಿಂದ 30 ರವರೆಗೆ ನೆದರ್ಲ್ಯಾಂಡ್ಸ್‌ನ ಹಾಕಿ ವಿಶ್ವಕಪ್ ನಡೆಯಲಿದೆ. ಏಷ್ಯಾ ಕಪ್ ಗೆದ್ದ ತಂಡ ನೇರವಾಗಿ ವಿಶ್ವಕಪ್‌ಗೆ ಅರ್ಹತೆ ಪಡೆಯುತ್ತದೆ.
ಇನ್ನು ಇದೇ ನವೆಂಬರ್ 28 ರಿಂದ ಚೆನ್ನೈ ಹಾಗೂ ಮಧುರೈನಲ್ಲಿ ನಡೆಯಲಿರುವ ಜೂನಿಯರ್ ಹಾಕಿ ವಿಶ್ವಕಪ್‌ಗೆ ಪಾಕ್ ತಂಡ ಭಾಗವಹಿಸುವಕೆಯ ಬಗ್ಗೆಯೂ ಯಾವುದೇ ಸ್ಪಷ್ಟತೆ ಇಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications