ವಿಶ್ವ ಹಾಕಿ ಸೆಮೀಸ್: ಪಾಕ್ ವಿರುದ್ಧ ಭಾರತಕ್ಕೆ ಮತ್ತೆ ಜಯ
ಲಂಡನ್, ಜೂನ್ 24: ಇಲ್ಲಿ ನಡೆಯುತ್ತಿರುವ ವಿಶ್ವ ಹಾಕಿ ಸೆಮಿಫೈನಲ್ ಹಂತದ ಟೂರ್ನಿಯ 5ನೇ ಮತ್ತು ಆರನೇ ಸ್ಥಾನಗಳಿಗಾಗಿ ನಡೆದ ಪಂದ್ಯದಲ್ಲಿ ಭಾರತ, ಪಾಕಿಸ್ತಾನ ತಂಡವನ್ನು 6-1 ಗೋಲುಗಳ ಅಂತರದಲ್ಲಿ ಸೋಲಿಸಿ, ಟೂರ್ನಿಗೊಂದು ಸಮಾಧಾನಕರ ವಿದಾಯ ಹೇಳಿದೆ.
ಟೂರ್ನಿಯ ಆರಂಭದಿಂದಲೂ ಉತ್ತಮ ಹೋರಾಟ ಮಾಡಿಕೊಂಡು ಬಂದಿದ್ದ ಭಾರತ ತಂಡ, ಕ್ವಾರ್ಟರ್ ಫೈನಲ್ ವರೆಗೂ ಮುನ್ನಡೆದಿತ್ತು.
ಜೂನ್ 22ರಂದು ನಡೆದಿದ್ದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅದು, ಮಲೇಷ್ಯಾ ವಿರುದ್ಧ 2-3 ಗೋಲುಗಳ ಅಂತರದಲ್ಲಿ ಸೋಲು ಕಂಡಿತ್ತು. ಈ ಹಿನ್ನೆಲೆಯಲ್ಲಿ, ಅದು ಚಿನ್ನ, ಬೆಳ್ಳಿ ಅಥವಾ ಕಂಚು ಗೆಲ್ಲುವ ಅವಕಾಶದಿಂದ ವಂಚಿತವಾಗಿತ್ತು.
ಇದಕ್ಕೂ ಮುನ್ನ, ಜೂನ್ 18ರಂದು ನಡೆದಿದ್ದ ಟೂರ್ನಿಯ ಲೀಗ್ ಹಂತದ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ಭಾರತ 7-1 ಗೋಲುಗಳ ಅಂತರದಲ್ಲಿ ಬಗ್ಗುಬಡಿದಿತ್ತು.
ಇದಾದ ನಂತರ, ಟೂರ್ನಿಯ 5ನೇ ಮತ್ತು 6ನೇ ಸ್ಥಾನಗಳಿಗಾಗಿ ಶನಿವಾರ (ಜೂನ್ 24) ನಡೆದ ಪಂದ್ಯದಲ್ಲಿ ಭಾರತವು, ಪಾಕಿಸ್ತಾನದೊಂದಿಗೆ ಮುಖಮುಖಿಯಾಗಿ ಟೂರ್ನಿಯಲ್ಲಿ ಭರ್ಜರಿ ಗೆಲುವು ದಾಖಲಿಸಿತು.

ರಮಣದೀಪ್ ಗಳಿಸಿದ ಗೋಲು
ಭಾರತದ ಪರವಾಗಿ, ಪಂದ್ಯದ 7ನೇನಿಮಿಷದಲ್ಲಿ ಮೊದಲ ಗೋಲು ದಾಖಲಾಯಿತು. ಈ ಗೋಲು ಗಳಿಸಿಕೊಟ್ಟವರು ರಮಣದೀಪ್.

ಹರ್ಮನ್ ಸಿಂಗ್ ರಿಂದ 3ನೇ ಗೋಲು
ಆನಂತರ, 23ನೇ ನಿಮಿಷದಲ್ಲಿ ಪ್ರದೀಪ್ ಮೊರ್, 25ನೇ ನಿಮಿಷದಲ್ಲಿ ಆಕಾಶ್ ದೀಪ್ ಸಿಂಗ್, 27ನೇ ನಿಮಿಷದಲ್ಲಿ ರಮಣದೀಪ್ ಗೋಲು ಗಳಿಸಿಕೊಟ್ಟರು. ಆನಂತರ, 35ನೇ ನಿಮಿಷದಲ್ಲಿ ಹರ್ಮನ್ ಸಿಂಗ್ ಗೋಲು ಗಳಿಸಿತು.

ಅಜಾಜ್ ಅಹ್ಮದ್ ತಂದರು ಈ ಗೋಲು
41ನೇ ನಿಮಿಷದಲ್ಲಿ ಪಾಕಿಸ್ತಾನವೂ ತನ್ನ ಪ್ರಥಮ ಗೋಲು ದಾಖಲಿಸಿತು. ಈ ಗೋಲು ಗಳಿಸಿಕೊಟ್ಟಿದ್ದು ಅಜಾಜ್ ಅಹ್ಮದ್.

ಅಂತರ ಗಾಢವಾಗಿ ಹೆಚ್ಚಿಸಿಕೊಂಡ ಭಾರತ
ಆದರೆ, 59ನೇ ನಿಮಿಷದಲ್ಲಿ ಮತ್ತೆ ಮಿಂಚಿದ ಮಂದೀಪ್ ಸಿಂಗ್, ಭಾರತಕ್ಕೆ ಮತ್ತೊಂದು ಗೋಲು ತಂದಿತ್ತರು. ಅಲ್ಲಿಗೆ ಭಾರತವು, ಪಾಕಿಸ್ತಾನದ ವಿರುದ್ಧ 6-1 ಗೋಲುಗಳ ಅಂತರ ಗಳಿಸಿತು.

5ನೇ ಸ್ಥಾನ ಪಡೆಯುವಲ್ಲಿ ಯಶಸ್ವಿ
ಪಂದ್ಯದ ಅಂತ್ಯದವರೆಗೂ ಇದೇ ಅಂತರ ಕಾಪಾಡಿಕೊಂಡ ಭಾರತ, ಈ ಸೆಣಸಿನಲ್ಲಿ ಗೆಲವು ಪಡೆಯಿತು. ಈ ಜಯದ ಮೂಲಕ, ಟೂರ್ನಿಯಲ್ಲಿ 5ನೇ ಸ್ಥಾನ ಸಂಪಾದಿಸುವುದರೊಂದಿಗೆ ಟೂರ್ನಿಗೆ ಸಮಾಧಾನಕರ ವಿದಾಯ ಹೇಳಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications