For Quick Alerts
ALLOW NOTIFICATIONS  
For Daily Alerts

ಒಲಿಂಪಿಕ್ಸ್ ಇತಿಹಾಸದಲ್ಲಿ ಭಾರತೀಯ ಹಾಕಿ ತಂಡವನ್ನು ಮುನ್ನಡೆಸಿದ ನಾಯಕರ ಪಟ್ಟಿ

2020ರ ಜುಲೈ 24ರಂದು ಟೊಕಿಯೋ ಒಲಿಂಪಿಕ್ಸ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಹಾಕಿ ತಂಡ ಸೋತು ಹೊರನಡೆದಾಗ, ಮನ್‌ಪ್ರೀತ್ ಸಿಂಗ್ ಒಲಿಂಪಿಕ್ಸ್‌ನಲ್ಲಿ ಭಾರತೀಯ ಪುರುಷರ ಹಾಕಿ ತಂಡವನ್ನು ಮುನ್ನಡೆಸಿದ 21ನೇ ನಾಯಕರೆನಿಸಿದರು.

ಭಾರತದ ಹಾಕಿಯ 41 ವರ್ಷಗಳ ಒಲಿಂಪಿಕ್ ಪದಕದ ಬರವನ್ನು ಕಂಚಿನ ಪಂದಕದೊಂದಿಗೆ ಕೊನೆಗೊಳಿಸಿದ ಮನ್‌ಪ್ರೀತ್ ಸಿಂಗ್ ಅವರು ಭಾರತ ಹಾಕಿ ತಂಡದ ನಾಯಕತ್ವ ಗೌರವ ಪಡೆದಿರುವ ಧ್ಯಾನ್ ಚಂದ್, ಕುನ್ವರ್ ದಿಗ್ವಿಜಯ್ ಸಿಂಗ್ ಮತ್ತು ಬಲ್ಬೀರ್ ಸಿಂಗ್ ಅವರಂತಹ ಲೆಜೆಂಡ್ ಆಟಗಾರರನ್ನು ಒಳಗೊಂಡ ಪ್ರಸಿದ್ಧದ ಪಟ್ಟಿಯನ್ನು ಸೇರಿಕೊಂಡರು.

ಜೈಪಾಲ್ ಸಿಂಗ್ ಮುಂಡಾ ಅವರು ಆಮ್ಸ್ಟರ್‌ಡ್ಯಾಮ್‌ನಲ್ಲಿ 1928ರ ಒಲಿಂಪಿಕ್ಸ್‌ನಲ್ಲಿ ಚೊಚ್ಚಲ ಚಿನ್ನದ ಪದಕ ಗೆದ್ದಾಗ ಒಲಿಂಪಿಕ್ಸ್‌ನಲ್ಲಿ ಭಾರತೀಯ ಹಾಕಿ ತಂಡದ ಮೊದಲ ನಾಯಕರಾಗಿದ್ದರು.

Indian Hockey Team Captains List in Olympic History and Achievements

1932ರ ಲಾಸ್ ಏಂಜಲೀಸ್‌ ಒಲಿಂಪಿಕ್ಸ್‌ನಲ್ಲಿ ಭಾರತೀಯ ಹಾಕಿ ತಂಡವನ್ನು ಮತ್ತೊಂದು ಚಿನ್ನದ ಪದಕಕ್ಕೆ ಸೈಯದ್ ಲಾಲ್ ಶಾ ಬೊಖಾರಿ ಮುನ್ನಡೆಸಿದರು. ನಂತರ ಭಾರತ ಸ್ವಾತಂತ್ರ್ಯಗೊಂಡು ವಿಭಜನೆಗೊಂಡ ನಂತರ ಪಾಕಿಸ್ತಾನಕ್ಕೆ ವಲಸೆ ಹೋದರು.

ಹಾಕಿ ಮಾಂತ್ರಿಕ ಧ್ಯಾನ್ ಚಂದ್ (ಆಮ್ಸ್ಟರ್‌ಡ್ಯಾಮ್ 1928, ಲಾಸ್ ಏಂಜಲೀಸ್ 1932, ಬರ್ಲಿನ್ 1936) ಮತ್ತು ಬಲ್ಬೀರ್ ಸಿಂಗ್ ದೋಸಾಂಜ್ (ಲಂಡನ್ 1948, ಹೆಲ್ಸಿಂಕಿ 1952, ಮೆಲ್ಬೋರ್ನ್ 1956) ತಲಾ ಮೂರು ಚಿನ್ನದ ಪದಕ ವಿಜೇತ ಭಾರತೀಯ ಹಾಕಿ ತಂಡಗಳ ಭಾಗವಾಗಿದ್ದರು ಎಂಬುದು ಗಮನಾರ್ಹ.

ಧ್ಯಾನ್ ಚಂದ್ ಅವರು 1936ರ ಒಲಿಂಪಿಕ್ಸ್‌ನಲ್ಲಿ ಭಾರತ ತಂಡದ ನಾಯಕರಾಗಿದ್ದರು ಮತ್ತು ಬಲ್ಬೀರ್ ಸಿಂಗ್ 1956ರ ಮೆಲ್ಬೋರ್ನ್ ಒಲಿಂಪಿಕ್ಸ್‌ನಲ್ಲಿ ಭಾರತ ತಂಡದ ನಾಯಕರಾಗಿದ್ದರು.

ತಮಿಳುನಾಡಿನ ವಾಸುದೇವನ್ ಬಾಸ್ಕರನ್ ಅವರು ಮಾಸ್ಕೋದಲ್ಲಿ ನಡೆದ 1980ರ ಒಲಿಂಪಿಕ್ಸ್‌ನಲ್ಲಿ ಭಾರತೀಯ ಹಾಕಿ ತಂಡದ ಕೊನೆಯ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ನಾಯಕನಾಗಿದ್ದಾರೆ.

Indian Hockey Team Captains List in Olympic History and Achievements

ಇನ್ನು ಮಹಿಳಾ ಹಾಕಿ ತಂಡದಲ್ಲಿ ರೂಪಾ ಸೈನಿ ಅವರು ಮಾಸ್ಕೋದಲ್ಲಿ ನಡೆದ 1980ರಲ್ಲಿ ಒಲಿಂಪಿಕ್ಸ್‌ನಲ್ಲಿ ಭಾರತದ ನಾಯಕಿಯಾಗಿದ್ದರು. ಈ ವೇಳೆ ಮಹಿಳಾ ಹಾಕಿಯು ಒಲೊಂಪಿಕ್ ಕ್ರೀಡಾಕೂಟಕ್ಕೆ ಚೊಚ್ಚಲ ಪ್ರವೇಶ ಮಾಡಿತು.

ಫಾರ್ವರ್ಡ್ ಆಟಗಾರ್ತಿ ರಾಣಿ ರಾಂಪಾಲ್ ಅವರು ಟೊಕಿಯೋ 2020ರಲ್ಲಿ ಭಾರತೀಯ ಮಹಿಳಾ ಹಾಕಿ ತಂಡದ ಅಭಿಯಾನದ ನಾಯಕತ್ವ ವಹಿಸಿದ್ದರು.

ಒಲಿಂಪಿಕ್ಸ್‌ನಲ್ಲಿ ಭಾರತೀಯ ಹಾಕಿ ನಾಯಕರ ಪಟ್ಟಿ ಹಾಗೂ ಪದಕಗಳ ಸಾಧನೆ:

1. ಜೈಪಾಲ್ ಸಿಂಗ್ ಮುಂಡಾ - 1928 - ಆಮ್ಸ್ಟರ್‌ಡ್ಯಾಮ್ - ಚಿನ್ನ

2. ಸೈಯದ್ ಲಾಲ್ ಶಾ ಬೊಖಾರಿ - 1932 - ಲಾಸ್ ಏಂಜಲೀಸ್ - ಚಿನ್ನ

3. ಧ್ಯಾನ್ ಚಂದ್ - 1936 - ಬರ್ಲಿನ್ - ಚಿನ್ನ

4. ಕಿಶನ್ ಲಾಲ್ - 1948 - ಲಂಡನ್ - ಚಿನ್ನ

5. ಕೆಡಿ ಸಿಂಗ್ ಬಾಬು - 1952 - ಹೆಲ್ಸಿಂಕಿ - ಚಿನ್ನ

6. ಬಲ್ಬೀರ್ ಸಿಂಗ್ ಸೀನಿಯರ್ - 1956 - ಮೆಲ್ಬೋರ್ನ್ - ಚಿನ್ನ

7. ಲೆಸ್ಲಿ ಕ್ಲಾಡಿಯಸ್ - 1960 - ರೋಮ್ - ಬೆಳ್ಳಿ

8. ಚರಣ್‌ಜಿತ್ ಸಿಂಗ್ - 1964 - ಟೊಕಿಯೋ - ಚಿನ್ನ

9. ಗುರ್ಬಕ್ಸ್ ಸಿಂಗ್/ ಪೃಥಿಪಾಲ್ ಸಿಂಗ್ - 1968 - ಮೆಕ್ಸಿಕೋ ಸಿಟಿ - ಕಂಚು

10. ಹರ್ಮಿಕ್ ಸಿಂಗ್ - 1972 - ಮ್ಯೂನಿಚ್ - ಕಂಚು

11. ಅಜಿತ್ ಪಾಲ್ ಸಿಂಗ್ - 1976 - ಮಾಂಟೆರಲ್ - 7ನೇ ಸ್ಥಾನ

12. ವಾಸುದೇವನ್ ಬಾಸ್ಕರನ್ - 1980 - ಮಾಸ್ಕೋ - ಚಿನ್ನ

13. ಇಕ್ಬಾಲ್ - 1984 - ಲಾಸ್ ಏಂಜಲೀಸ್ - 5ನೇ ಸ್ಥಾನ

14. ಎಂಎಂ ಸೋಮಯ - 1988 - ಸಿಯೋಲ್ - 6ನೇ ಸ್ಥಾನ

15. ಪರ್ಗತ್ ಸಿಂಗ್ - 1992 - ಬಾರ್ಸಿಲೋನಾ - 7ನೇ ಸ್ಥಾನ

16. ಪರ್ಗತ್ ಸಿಂಗ್ - 1996 - ಅಟಲಾಂಟಾ - 8ನೇ ಸ್ಥಾನ

17. ರಮಣದೀಪ್ ಸಿಂಗ್ ಗ್ರೆವಾಲ್ - 2000 - ಸಿಡ್ನಿ - 7ನೇ ಸ್ಥಾನ

18. ದಿಲೀಪ್ ಟಿರ್ಕಿ - 2004 - ಅಥೆನ್ಸ್ - 7ನೇ ಸ್ಥಾನ

19. ಭಾರತ್ ಚೆಟ್ರಿ - 2012 - ಲಂಡನ್ - 12ನೇ ಸ್ಥಾನ

20. ಪಿಆರ್ ಶ್ರೀಜೇಶ್ - 2016 - ರಿಯೋ - 8ನೇ ಸ್ಥಾನ

21. ಮನ್‌ಪ್ರೀತ್ ಸಿಂಗ್ - 2020 - ಟೊಕಿಯೋ - ಕಂಚು

Story first published: Tuesday, August 15, 2023, 20:15 [IST]
Other articles published on Aug 15, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+