Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಇಂಗ್ಲೆಂಡ್ ಕೃಪಾಕಟಾಕ್ಷ: ಭಾರತದ ವನಿತೆಯರಿಗೆ ಅದೃಷ್ಟ

ನವದೆಹಲಿ, ಆ.29 : ಭಾರತದ ಮಹಿಳಾ ಹಾಕಿ ತಂಡಕ್ಕೆ ಇಂಗ್ಲೆಂಡ್ ಕೃಪಾಕಟಾಕ್ಷ ದೊರೆತಿದ್ದು 2016ರ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುವ ಅರ್ಹತೆ ಪಡೆದುಕೊಂಡಿದೆ. ಲಂಡನ್‌ನಲ್ಲಿ ನಡೆಯುತ್ತಿರುವ ಯೂರೋ ಹಾಕಿ ಪಂದ್ಯಾವಳಿಯಲ್ಲಿ ಇಂಗ್ಲೆಂಡ್‌ ತಂಡ ಸ್ಪೇನ್‌ ವಿರುದ್ಧ ಸೆಮಿಫೈನಲ್‌ನಲ್ಲಿ ಜಯಗಳಿಸಿ ಫೈನಲ್ ತಲುಪಿದ ಪರಿಣಾಮ ಭಾರತಕ್ಕೆ ಅದೃಷ್ಟ ಲಭಿಸಿದೆ.

36 ವರ್ಷಗಳ ನಂತರ ಭಾರತ ಮಹಿಳಾ ತಂಡ ಒಲಿಂಪಿಕ್ಸ್ ನಲ್ಲಿ ಭಾಗವಹಿಸಲಿದೆ. 1980ರಲ್ಲಿ ಭಾರತೀಯ ವನಿತಾ ಹಾಕಿ ತಂಡ ಮೊದಲ ಬಾರಿಗೆ ಒಲಿಂಪಿಕ್ಸ್‌ ಪ್ರವೇಶ ಮಾಡಿತ್ತು.[ಭಾರತದ ಮಹಿಳಾ ಹಾಕಿ ತಂಡದಿಂದ ಐತಿಹಾಸಿಕ ದಾಖಲೆ]

india


ಜುಲೈ ತಿಂಗಳ ಆರಂಭದಲ್ಲಿ ನಡೆದಿದ್ದ ಹಾಕಿ ವಿಶ್ವ ಲೀಗ್‌ ನಲ್ಲಿ ಭಾರತ 5 ನೇ ಸ್ಥಾನ ಪಡೆದುಕೊಂಡಿತ್ತು. ಯೂರೋ ಹಾಕಿ ಚಾಂಪಿಯನ್ ಶಿಪ್‌ ಫೈನಲ್‌ಗೆ ನೆದರ್‌ಲ್ಯಾಂಡ್‌ ಮತ್ತು ಇಂಗ್ಲೆಂಡ್‌ ತಲುಪಿದ ಲಾಭ ಭಾರತಕ್ಕೆ ಸಿಕ್ಕಿದೆ.

ಈಗಾಗಲೇ ದಕ್ಷಿಣ ಕೊರಿಯ, ಆರ್ಜೆಂಟೀನಾ, ಗ್ರೇಟ್‌ ಬ್ರಿಟನ್‌, ಚೀನಾ, ಜರ್ಮನಿ, ನೆದರ್‌ಲ್ಯಾಂಡ್ಸ್‌, ಆಸ್ಟ್ರೇಲಿಯ, ನ್ಯೂಜಿಲೆಂಡ್‌ ಮತ್ತು ಅಮೆರಿಕ ತಂಡಗಳು ಒಲಿಂಪಿಕ್ಸ್ ನಲ್ಲಿ ಭಾಗವಹಿಸುವ ಅವಕಾಶ ಪಡೆದುಕೊಂಡಿದ್ದು ಅವರ ಸಾಲಿಗೆ ಭಾರತವೂ ಸೇರಿದೆ. ಹಾಕಿ ಮಾಂತ್ರಿಕ ಧ್ಯಾನ್ ಚಂದ್ ಜನ್ಮ ದಿನದಂದೆ ಭಾರತದ ವನಿತೆಯರಿಗೆ ಅದೃಷ್ಟ ಒಲಿದಿರುವುದು ವಿಶೇಷ.

Story first published: Wednesday, January 3, 2018, 10:15 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+