FIH Junior Hockey World Cup: ಅರ್ಜೆಂಟೀನಾ ಮಣಿಸಿದ ಭಾರತಕ್ಕೆ ಕಂಚು
ಚೆನ್ನೈ: ಎಫ್‌ಐಎಚ್ ಪುರುಷರ ಜೂನಿಯರ್ ವಿಶ್ವಕಪ್‌ನಲ್ಲಿ ಭಾರತ ತಂಡ ಕೊನೆಯ ಅವಧಿಯಲ್ಲಿ ನೀಡಿದ ಅಮೋಘ ಪ್ರದರ್ಶನದ ಬಲದಿಂದ 4-2 ಗೋಲುಗಳ ಅಂತರದಿಂದ ಅರ್ಜೆಂಟೇನಾ ತಂಡವನ್ನು ಮಣಿಸಿ ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡಿತು. ಈ ಮೂಲಕ ಭಾರತ 9 ವರ್ಷಗಳ ಬಳಿಕ ಕಂಚಿನ ಪದಕವನ್ನು ಗೆದ್ದು ಬೀಗಿದೆ. ಈ ಹಿಂದಿನ ಎರಡು ಆವೃತ್ತಿಗಳಲ್ಲಿ ಭಾರತ ಪ್ರಶಸ್ತಿ ಗೆಲ್ಲುವಲ್ಲಿ ವಿಫಲವಾಗಿತ್ತು.
ಭಾರತ ತಂಡ ಕೊನೆಯ ಅವಧಿಯ ಆಟಕ್ಕೆ ಮುಂಚಿತವಾಗಿ 1-1 ಗೋಲುಗಳಿಂದ ಸಮಬಲ ಸಾಧಿಸಿತ್ತು. ಆದರೆ ಕೊನೆಯ 15 ನಿಮಿಷದ ಆಟದಲ್ಲಿ ಭಾರತ ಅಮೋಘ ಆಟದ ಪ್ರದರ್ಶನ ನೀಡಿತು. ಈ ವೇಳೆ 3 ಗೋಲು ಬಾರಿಸಿ ಅಬ್ಬರಿಸಿತು. ಇದೇ ವೇಳೆ ಅರ್ಜೆಂಟೀನಾ ತಂಡ ಸಹ ಒಂದು ಗೋಲು ಬಾರಿ ಸೋಲಿನ ಅಂತರವನ್ನು ಕಡಿಮೆ ಮಾಡಿತು. ಭಾರತ ಕೊನೆಯ 11 ನಿಮಿಷಗಳ ಅಂತರದಲ್ಲಿ ಮೂರು ಗೋಲು ಬಾರಿಸಿ ಅಬ್ಬರಿಸಿತು.

ಮೊದಲ ಎರಡು ಕ್ವಾರ್ಟರ್‌ಗಳಲ್ಲಿ ಅರ್ಜೆಂಟೀನಾ ಭರ್ಜರಿ ಪ್ರದರ್ಶನ ನೀಡಿತು. ಈ ವೇಳೆ ಭಾರತ ಗೋಲು ಬಾರಿಸಲು ಹೆಣಗಾಟ ನಡೆಸಿತು. ಅರ್ಜೆಂಟೀನಾ ತಂಡದ ಪರ ನಿಕೋಲಸ್ ರೊಡ್ರಿಗಸ್ ಮೂರನೇ ನಿಮಿಷದಲ್ಲಿ ಗೋಲು ಬಾರಿಸಿ ಅಂತರವನ್ನು ಕಡಿಮೆ ಮಾಡಿತು. ಸ್ಯಾಂಟಿಯಾಗೊ ಫರ್ನಾಂಡಿಸ್ 44 ನೇ ನಿಮಿಷದಲ್ಲಿ ಗೋಲು ಗಳಿಸಿದರು. ಮೊದಲ ಎರಡು ಅವಧಿಯಲ್ಲಿ ಭಾರತ ಗೋಲು ಬಾರಿಸುವಲ್ಲಿ ವಿಫಲವಾಯಿತು. ಪರಿಣಾಮ ಎರಡೂ ಅವಧಿಯಲ್ಲಿ ಭಾರತ ಹಿನ್ನಡೆ ಅನುಭವಿಸಿತು.
ಭಾರತದ ಪರ ಅಂಕಿತ್ ಪಾಲ್ (49 ನೇ ನಿಮಿಷ), ಮನ್ಮೀತ್ ಸಿಂಗ್ (52 ನೇ ನಿಮಿಷ) ಮತ್ತು ಅನ್ಮೋಲ್ ಎಕ್ಕಾ (58 ನೇ ನಿಮಿಷ) ಗೋಲು ಗಳಿಸಿದರು. ಶಾರದಾ ನಂದ್ ತಿವಾರಿ 57 ನೇ ನಿಮಿಷದಲ್ಲಿ ಗೋಲು ಗಳಿಸಿದರು. ಮೊದಲ ಎರಡು ಕ್ವಾರ್ಟರ್‌ಗಳಲ್ಲಿ ಅರ್ಜೆಂಟೀನಾ ಬಲಿಷ್ಠವಾಗಿ ಕಾಣುತ್ತಿತ್ತು, ಆದರೆ ಭಾರತ ತಂಡ ಗೋಲು ಗಳಿಸಲು ಹೆಣಗಾಡಿತು.
ಕೊನೆಯ ಕ್ಷಣದ ಮ್ಯಾಜಿಕ್
ಉಭಯ ತಂಡಗಳು ತಲಾ 2 ಗೋಲುಗಳನ್ನು ಬಾರಿಸಿ ಸಮಬಲ ಸಾಧಿಸಿತ್ತು. ಆದರೆ ಪಂದ್ಯದ ಮುಕ್ತಾಯಕ್ಕೆ ಇನ್ನು ಮೂರು ನಿಮಿಷಗಳು ಬಾಕಿ ಇರುವಂತೆಯೇ ಭಾರತಕ್ಕೆ ನಿರ್ಣಾಯಕ ಪೆನಾಲ್ಟಿ ಸ್ಟ್ರೋಕ್ ಸಿಕ್ಕಿತು. ಶಾರದಾ ನಂದ ತಿವಾರಿ ಗೋಲು ಬಾರಿಸಿದರು. ಇದೇ ಅವಧಿಯಲ್ಲಿ ಅರ್ಜೆಂಟೀನಾಗೆ ಪೆನಾಲ್ಟಿ ಶೂಟೌಟ್ ಅವಕಾಶ ಸಿಕ್ಕಿತು. ಆದರೆ ಭಾರತದ ಗೋಲಿ ಅಮೋಘ ಸೇವ್ ಮಾಡಿತು. 58 ನೇ ನಿಮಿಷದಲ್ಲಿ ಭಾರತಕ್ಕೆ ದೊರೆತ ಪೆನಾಲ್ಟಿ ಕಾರ್ನರ್ ಅವಕಾಶ ಸಿಕ್ಕಿತು. ಇದನ್ನು ಗೋಲಾಗಿ ಪರಿವರ್ತಿಸಿ ಗೋಲಿನ ಅಂತರವನ್ನು ಹೆಚ್ಚಿಸಿಕೊಂಡಿತು. ಅಲ್ಲದೆ ಕಂಚಿನ ಪದಕಕ್ಕೆ ಹತ್ತಿರವಾಯಿತು.
ಕೋಚ್ ಹೇಳಿದ್ದೇನು?
ಒಂಬತ್ತು ವರ್ಷಗಳ ನಂತರ ಎಫ್‌ಐಎಚ್ ಕಿರಿಯರ ವಿಶ್ವಕಪ್‌ನಲ್ಲಿ ಪದಕ ಗೆದ್ದಿದ್ದನ್ನು ಕೋಚ್ ಪಿಆರ್ ಶ್ರೀಜೇಶ್ ಶ್ಲಾಘಿಸಿದ್ದು, ಯುವ ಆಟಗಾರರ ಪ್ರದರ್ಶನ ಕಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications