Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಹಾಕಿ ವಿಶ್ವಕಪ್: ಬೆಲ್ಜಿಯಂ ವಿರುದ್ಧ ಭಾರತದ ವೀರೋಚಿತ ಆಟ, ಪಂದ್ಯ ಡ್ರಾ

Mens Hockey World Cup 2018: India, Belgium play out 2-2 draw

ಭುವನೇಶ್ವರ, ಡಿಸೆಂಬರ್ 2: ಭುವನೇಶ್ವರ್‌ನ ಕಳಿಂಗ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ಭಾನುವಾರ (ಡಿಸೆಂಬರ್ 2) ನಡೆದ ಪುರುಷರ ಹಾಕಿ ವಿಶ್ವಕಪ್ 'ಸಿ' ಗ್ರೂಪಿನ ಪಂದ್ಯದಲ್ಲಿ ಬೆಲ್ಜಿಯಂ ವಿರುದ್ಧ ಭಾರತದ ಪುರುಷರು 2-2 ಅಂತರದ ಸಮಬಲ ಸಾಧಿಸಿದ್ದಾರೆ. ಸಿಮ್ರನ್‌ಜೀತ್ ಸಿಂಗ್ ಮತ್ತು ಹರ್ಮನ್ ಪ್ರೀತ್ ಸಿಂಗ್ ತಂಡದ ಹೀರೋಗಳೆನಿಸಿದರು.

ಪಂದ್ಯ ಜಯಿಸುವ ಹುಮ್ಮಸ್ಸಿನಲ್ಲಿ ಭಾರತ ಮೈದಾನಕ್ಕಿಳಿದಿತ್ತು. ಆದರೆ ಪಂದ್ಯ ಆರಂಭದಲ್ಲೇ ಬೆಲ್ಜಿಯಂ ಮೊದಲ ಗೋಲ್ ಬಾರಿಸಿತು. ಬೆಲ್ಜಿಯಂನ ಹೆಂಡ್ರಿಕ್ಸ್ ಅವರು 8ನೇ ನಿಮಿಷದಲ್ಲಿ ಗೋಲ್ ಬಾರಿಸಿ ತಂಡಕ್ಕೆ 1-0ಯ ಮುನ್ನಡೆ ಕೊಟ್ಟರು. 15ನೇ ನಿಮಿಷದಲ್ಲಿ ಭಾರತದ ಮನ್‌ದೀಪ್ ಸಿಂಗ್ ಗೋಲ್‌ಗೆ ಯತ್ನಿಸಿದರಾದರೂ ಸಫಲರಾಗಲಿಲ್ಲ.

ಮೊದಲ ಕ್ವಾರ್ಟರ್‌ನಲ್ಲಿ ಬೆಲ್ಜಿಯಂ 1-0ಯ ಮುನ್ನಡೆ ಕಾದಿರಿಸಿಕೊಂಡಿತು. ದ್ವಿತೀಯ ಕ್ವಾರ್ಟರ್ ನಲ್ಲೂ ಮತ್ತೆ ಗೋಲ್ ದಾಖಲಾಗಲಿಲ್ಲ. ಈ ವೇಳೆಯೂ ಭಾರತ ತೀವ್ರ ದಾಳಿಯಾತ್ಮಕ ಆಟ ಪ್ರದರ್ಶಿಸಿತು. ಆದರೆ ಅತ್ತ ಬೆಲ್ಜಿಯಂ ಕೂಡ ಅಷ್ಟೇ ರಕ್ಷಣಾತ್ಮಕ ಆಟ ಆಡಿತು.

ತೃತೀಯ ಕ್ವಾರ್ಟರ್‌ನಲ್ಲೂ ಭಾರತ ಗೋಲ್‌ಗಾಗಿ ಸಾಕಷ್ಟು ಕೊಸರಾಟ ನಡೆಸಿತು. ಬೆಲ್ಜಿಯಂ ಭಾರತವನ್ನು ಹಿಮ್ಮೆಟ್ಟಿಸಲು ಯತ್ನಿಸಿತಾದರೂ 39ನೇ ನಿಮಿಷದಲ್ಲಿ ಭಾರತದ ಹರ್ಮನ್ ಪ್ರೀತ್ ಸಿಂಗ್ ಪೆನಾಲ್ಟಿ ಅವಕಾಶವನ್ನು ಗೋಲ್ ಪರಿವರ್ತಿಸುವಲ್ಲಿ ಯಶಸ್ವಿಯಾದರು. ಭಾರತ ಗೋಲ್ ಅಂತರವನ್ನು 1-1ಕ್ಕೆ ಸರಿದೂಗಿಸಿತು.

ನಾಲ್ಕನೇ ಕ್ವಾರ್ಟರ್ ಆರಂಭದಲ್ಲೇ ಭಾರತದ ಸಿಮ್ರನ್ ಜೀತ್ ಸಿಂಗ್ ಗೋಲ್ ಬಾರಿಸಿ ತಂಡಕ್ಕೆ 2-1ರ ಮುನ್ನಡೆ ಕೊಟ್ಟರು. 47ನೇ ನಿಮಿಷದಲ್ಲಿ ಸಿಮ್ರನ್ ಜೀತ್‌ರಿಂದ ಗೋಲ್ ಸಿಡಿಯಿತು. ಅನಂತರ ಬೆಲ್ಜಿಯಂನಿಂದ ಸೈಮನ್ ಗೌಗ್ನಾರ್ಡ್ 56ನೇ ನಿಮಿದಲ್ಲಿ ಗೋಲ್ ಬಾರಿಸಿ ಅಂತರವನ್ನು 2-2ಕ್ಕೆ ತಂದರು.

ಈ ಪಂದ್ಯಕ್ಕೂ ಮೊದಲು ಭಾರತದ ಪುರುಷರು ದಕ್ಷಿಣ ಆಫ್ರಿಕಾ ಎದುರು 5-0 ಅಂತರದಿಂದ ಪಂದ್ಯ ಜಯಿಸಿದ್ದರೆ, 2016ರ ರಿಯೋ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಜಯಿಸಿದ್ದ ಬೆಲ್ಜಿಯಂ, ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಕೆನಡಾವನ್ನು 2-1ರ ಅಂತರದಿಂದ ಸೋಲಿಸಿ ಮುನ್ನಡೆ ಸಾಧಿಸಿತ್ತು.

ಭಾರತ ತಂಡ: ಮನ್ಪ್ರೀತ್ ಸಿಂಗ್ (ಸಿ), ಸಿಮ್ರನ್‌ಜೀತ್ ಸಿಂಗ್ ದಿಲ್‌ಪ್ರೀತ್ ಸಿಂಗ್, ಪಿಆರ್ ಶ್ರೀಜೇಶ್ (ಗೋಲ್‌ಕೀ), ಹರ್ಮನ್ ಪ್ರೀತ್ ಸಿಂಗ್, ಸುರೇಂದರ್ ಕುಮಾರ್, ಮನ್‌ದೀಪ್ ಸಿಂಗ್, ಲಲಿತ್ ಉಪಾಧ್ಯಾಯ, ನೀಲಕಂಠ್ ಶರ್ಮಾ, ವರುಣ್ ಕುಮಾರ್, ಆಕಾಶ್‌ದೀಪ್ ಸಿಂಗ್, ಚಿಂಗ್ಲೆನ್ಸನಾ ಸಿಂಗ್ .

Story first published: Sunday, December 2, 2018, 20:43 [IST]
Other articles published on Dec 2, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+