For Quick Alerts
ALLOW NOTIFICATIONS  
For Daily Alerts

ಏಷ್ಯ ಕಪ್‌ 2025: ಭಾರತ ಪ್ರವಾಸ ಬೆಳೆಸಲು ಪಾಕ್ ನಿರಾಕರಣೆ

ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಣ ದ್ವಿಪಕ್ಷೀಯ ಸರಣಿಗಳು ಬಿಡಿ, ಅಂತಾರಾಷ್ಟ್ರೀಯ ಟೂರ್ನಿಗಳಲ್ಲೂ ಈ ಎರಡೂ ದೇಶಗಳು ಮುಖಾಮುಖಿಯಾಗುವುದು ಕಷ್ಟವಾದಂತೆ ಆಗುತ್ತಿದೆ. ಇದಕ್ಕೆ ಕಾರಣ ಉಭಯ ದೇಶಗಳ ನಡುವಣ ರಾಜಕೀಯ ಉದ್ವಿಗ್ನತೆ. ಇದರಿಂದಾಗಿ ಪಾಕಿಸ್ತಾನ ಹಾಕಿ ತಂಡ ಮುಂದಿನ ತಿಂಗಳು ಭಾರತದಲ್ಲಿ ನಡೆಯಲಿರುವ ಏಷ್ಯಾ ಕಪ್ 2025 ರಲ್ಲಿ ಭಾಗವಹಿಸಲು ನಿರಾಕರಿಸುತ್ತಿದೆ.

ತಾನು ಭಾರತಕ್ಕೆ ಪ್ರವಾಸ ಬೆಳೆಸುತ್ತಿಲ್ಲ ಎಂದು ಪಾಕಿಸ್ತಾನ ಹಾಕಿ ಫೆಡರೇಶನ್ (ಪಿಎಚ್‌ಎಫ್‌) ಅಂತರರಾಷ್ಟ್ರೀಯ ಹಾಕಿ ಫೆಡರೇಶನ್ (ಎಫ್‌ಐಎಚ್‌) ಮತ್ತು ಏಷ್ಯನ್ ಹಾಕಿ ಫೆಡರೇಶನ್ (ಎಎಚ್‌ಎಫ್‌) ಗೆ ಪತ್ರ ಬರೆದಿದೆ. ಪತ್ರದಲ್ಲಿ ಪಾಕ್‌ ಸದ್ಯದ ಪರಿಸ್ಥಿತಿಯಲ್ಲಿ ಭಾರತಕ್ಕೆ ತಮ್ಮ ತಂಡವನ್ನು ಕಳುಹಿಸುವುದು ಸುರಕ್ಷಿತವಲ್ಲ ಎಂದು ತಿಳಿಸಿದೆ. ಭಾರತದಲ್ಲಿ ಪಾಕ್‌ ಆಟಗಾರರಿಗೆ ಅಭದ್ರತೆಯ ಭಾವನೆ ಕಾಡುತ್ತಿದೆ ಎಂದು ಪಿಎಚ್‌ಎಫ್‌ ಅಧ್ಯಕ್ಷ ತಾರಿಕ್‌ ಬುಗ್ತಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

Pakistan Hockey Team Pulls Out of Asia Cup 2025 in India Citing Security Concerns

ಸದ್ಯದ ರಾಜಕೀಯ ಸನ್ನಿವೇಶಗಳನ್ನು ಗಮನದಲ್ಲಿಟ್ಟುಕೊಂಡು ನಮ್ಮ ತಂಡ ಭಾರತಕ್ಕೆ ಪ್ರವಾಸ ಬೆಳೆಸಲು ಸಾಧ್ಯವಿಲ್ಲ. ಈ ಬಗ್ಗೆ ಈಗಾಗಲೇ ನಾನು ಎಫ್‌ಐಎಚ್‌ ಹಾಗೂ ಎಎಚ್‌ಎಫ್‌ಗೆ ಪತ್ರ ಬರೆದು ತಿಳಿಸಲಾಗಿದೆ. ಭಾರತದಲ್ಲಿ ಆಡುವಾಗ ತಮ್ಮ ತಂಡಕ್ಕೆ ಭದ್ರತಾ ಬೆದರಿಕೆಗಳನ್ನು ಎದುರಿಸಬಹುದು ಎಂದು ಪಿಎಚ್‌ಎಫ್‌ ಅಧ್ಯಕ್ಷ ತಾರಿಕ್‌ ಬುಗ್ತಿ ತಿಳಿಸಿದ್ದಾರೆ.

ಪಾಕ್‌ಗೆ ಬಿಕ್ಕುಟ್ಟು

ಈ ಟೂರ್ನಿಯ ಕೇವಲ ಒಂದು ಪ್ರತಿಷ್ಠಿತ ಟೂರ್ನಿ ಆಗಿರದೇ, ಮುಂಬರುವ ಹಾಕಿ ವಿಶ್ವಕಪ್‌ಗೆ ಅರ್ಹತೆ ಪಡೆಯಲು ಸಹ ಸಹಕಾರಿ ಆಗುತ್ತದೆ. ಇಂತಹ ಸನ್ನಿವೇಶದಲ್ಲಿ ಪಾಕ್‌ ಸ್ಪರ್ಧೆಯಿಂದ ಹಿಂದೆ ಸರಿಯುವುದ ನಿಶ್ವಿತವಾಗಿ ಪಂದ್ಯಾವಳಿಯ ಮೇಲೆ ಪರಿಣಾಮ ಬೀರಲಿದೆ. ಅಲ್ಲದೆ ಪಾಕ್‌ ವಿಶ್ವಕಪ್‌ನಲ್ಲಿ ಆಡುವ ಬಗ್ಗೆಯೂ ಬಿಕ್ಕಟ್ಟು ಉಂಟಾಗಬಹುದು ಎಂಬ ಚರ್ಚೆಗಳು ಆರಂಭವಾಗಿವೆ.

ಈಗ ಎಫ್‌ಐಎಚ್ ಮುಂದೆ ದೊಡ್ಡ ಸವಾಲು ಎದ್ದು ನಿಂತಿದೆ. ಅಲ್ಲದೆ ಪಾಕ್‌ ಪಂದ್ಯಗಳ ಬಗ್ಗೆ ಸಂಸ್ಥೆ ದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳಯವ ಅನಿವಾರ್ಯತೆ ಇದೆ ಎಂದು ತಾರಿಕ್‌ ಬುಗ್ತಿ ಹೇಳಿದ್ದಾರೆ. ನಮ್ಮ ತಂಡದ ಆಟಗಾರರಿಗೆ ಭಾರತದಲ್ಲಿ ಸುರಕ್ಷತೆ ಇದೆಯಾ? ಇದಕ್ಕೆ ಏನು ಖಾತರಿ ಎಂದು ಅಂತಾರಾಷ್ಟ್ರೀಯ ಹಾಕಿ ಸಂಸ್ಥೆಯಲ್ಲಿ ಪಾಕ್‌ ಕೇಳಿಕೊಂಡಿದೆ. ಆದರೆ ಈ ಬಗ್ಗೆ ಪಾಕ್‌ ಇನ್ನು ಯಾವುದೇ ಮಾಹಿತಿ ನೀಡಿಲ್ಲ. ಇನ್ನು ಸದ್ಯದ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ನೋಡುವುದಾದರೆ, ಪಾಕ್‌ ಭಾರತದ ಪ್ರವಾಸ ಬೆಳೆಸುವುದಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Story first published: Monday, July 21, 2025, 16:09 [IST]
Other articles published on Jul 21, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+