For Quick Alerts
ALLOW NOTIFICATIONS  
For Daily Alerts

ಟೋಕಿಯೋ ಒಲಿಂಪಿಕ್ಸ್: ಸ್ಪೈನ್ ವಿರುದ್ಧ ತಿರುಗಿ ಬೀಳುವ ಭರವಸೆಯಲ್ಲಿ ಭಾರತೀಯ ಹಾಕಿ ತಂಡ

Tokyo Olympics: The mens hockey team of India will be looking to bounce back against Spain

ಟೋಕಿಯೋ, ಜುಲೈ, 26: ಭಾರೀ ಭರವಸೆಯೊಂದಿಗೆ ಈ ಬಾರಿಯ ಒಲಿಂಪಿಕ್ಸ್‌ಗೆ ಕಣಕ್ಕಿಳಿದಿರುವ ಭಾರತ ತಂಡ ಮೊದಲ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಗೆಲುವಿನೊಂದಿಗೆ ಟೂರ್ನಿಯನ್ನು ಆರಂಭಿಸಿತ್ತು. ಆದರೆ ಎರಡನೇ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಆಘಾತಕಾರಿ ಸೋಲು ಕಾಣುವ ಮೂಲಕ ನಿರಾಸೆ ಅನುಭವಿಸಿದೆ. ಆಸ್ಟ್ರೇಲಿಯಾ ತಂಡ ಭಾರತವನ್ನು 7-1 ಅಂತರದಿಂದ ಮಣಿಸುವ ಮೂಲಕ ಭಾರತದ ಆತ್ಮವಿಶ್ವಾಸಕ್ಕೆ ಭಾರೀ ಏಟು ಕೊಟ್ಟಿದೆ.

ಆದರೆ ಭಾರತೀಯ ಹಾಕಿ ತಂಡ ಮತ್ತೆ ಪುಟಿದೇಳುವ ವಿಶ್ವಾಸದಲ್ಲಿದೆ. ಭಾರತ ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಮೂರನೇ ಪಂದ್ಯವನ್ನಾಡಲು ಸಜ್ಜಾಗಿದ್ದು ಮಂಗಳವಾರ ಈ ಪಂದ್ಯ ನಡೆಯಲಿದೆ. ಸ್ಪೈನ್ ವಿರುದ್ಧ ಈ ಪಂದ್ಯ ನಡೆಯಲಿದ್ದು ಭಾರತ ಮತ್ತೊಮ್ಮೆ ಉತ್ತಮ ಪ್ರದರ್ಶನ ನೀಡುವ ಮೂಲಕ ಗೆಲುವಿನ ಹಾದಿಗೆ ಮರಳುವ ಸಾಧ್ಯತೆಯಿದೆ.

ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಭಾರತ ಭಾರೀ ಸೋಲು ಅನುಭವಿಸಿದ್ದು ಭಾರತದ ರಕ್ಷಣಾ ವಿಭಾಗದ ಮೇಲೆ ಪ್ರಶ್ನಿಸುವಂತಾಗಿದೆ. ಅಲ್ಲದೆ ಇದು ಈ ವಿಭಾಗಕ್ಕೆ ಹೆಚ್ಚಿನ ಒತ್ತಡವನ್ನು ಕೂಡ ಉಂಟು ಮಾಡಿರುವುದರಲ್ಲಿ ಯಾವುದೇ ಅನುಮಾನವಿಲ್ಲ. ಆಸ್ಟ್ರೇಲಿಯಾ ಮೊದಲಾರ್ಧದಲ್ಲಿ ನಾಲ್ಕು ಗೋಲು ಹಾಗೂ ದ್ವಿತಿಯಾರ್ಧದಲ್ಲಿ ಮೂಲು ಗೋಲು ಗಳಿಸುವ ಮೂಲಕ ಒಟ್ಟು ಎಳು ಗೋಲು ಗಳಿಸಿ ಭಾರೀ ಅಂತರದಿಂದ ಗೆದ್ದು ಬೀಗಿತ್ತು.

ಅಂಕಪಟ್ಟಿಯಲ್ಲಿ ಭಾರತ ಈಗ ನಾಲ್ಕನೇ ಸ್ಥಾನದಲ್ಲಿದೆ. ಗೋಲುಗಳ ಆಧಾರದಲ್ಲಿ ನ್ಯೂಜಿಲೆಂಡ್‌ಗಿಂತ ಕೆಳಗಿನ ಸ್ಥಾನವನ್ನು ಭಾರತ ಪಡೆದುಕೊಂಡಿದೆ. ಎರಡು ಪಂದ್ಯಗಳಲ್ಲಿ ಎರಡು ಗೆಲುವು ಸಾಧಿಸಿರುವ ಆಸ್ಟ್ರೇಲಿಯಾ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಎರಡನೇ ಸ್ಥಾನದಲ್ಲಿ ಅರ್ಜೆಂಟಿನಾ ಇದೆ. ಸ್ಪೇನ್ ಹಾಗೂ ಆತಿಥೇಯ ಜಪಾನ್ ತಂಡ ತಲಾ ಎರಡು ಪಂದ್ಯಗಳನ್ನು ಆಡಿದ್ದರೂ ಈವರೆಗೂ ಗೆಲುವಿನ ಖಾತೆ ತೆರೆದಿಲ್ಲ. ಪೂಲ್ ಒಂದರಲ್ಲಿ ಅಗ್ರ ನಾಲ್ಕು ಸ್ಥಾನಗಳು ಕ್ವಾರ್ಟರ್‌ಫೈನಲ್‌ಗೆ ಪ್ರವೇಶ ಪಡೆಯಲಿದೆ.

Story first published: Monday, July 26, 2021, 21:27 [IST]
Other articles published on Jul 26, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+