ಕಬಡ್ಡಿ ಮಾಸ್ಟರ್ಸ್: ಪಾಕ್ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು

ದುಬೈ, ಜೂ. 26: ವಿಶ್ವ ಚಾಂಪಿಯನ್ ಭಾರತ ಪುರುಷರ ಕಬಡ್ಡಿ ತಂಡ ಸೋಮವಾರ ದುಬೈನಲ್ಲಿ ನಡೆದ ಆರು ರಾಷ್ಟ್ರಗಳ ಕಬಡ್ಡಿ ಮಾಸ್ಟರ್ಸ್ ಟೂರ್ನಮೆಂಟ್ ನಲ್ಲಿ ಸೆಮಿಫೈನಲ್ ಗೆ ಪ್ರವೇಶ ಗಿಟ್ಟಿಸಿಕೊಂಡಿದೆ.
ಎಐ ವಾಸ್ಲ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತ ತಂಡ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ 41-17 ಪಾಯಿಂಟ್ ಗಳಿಂದ ಭರ್ಜರಿ ಗೆಲುವು ದಾಖಲಿಸುವ ಮೂಲಕ ಮುಂದಿನ ಸ್ಪರ್ಧೆಗೆ ಆಯ್ಕೆ ಪಡೆದುಕೊಂಡಿದೆ.
ಪಂದ್ಯದಲ್ಲಿ ಭಾರತದ ಆಟಗಾರರ ರೈಡಿಂಗ್ ಮತ್ತು ಟ್ಯಾಂಕಲ್ ನಲ್ಲಿ ಹೆಚ್ಚು ಗಮನ ಸೆಳೆದರು. ಪಂದ್ಯದ ದ್ವಿತೀಯಾರ್ಧದಲ್ಲಂತೂ ಭಾರತದ ಸ್ಟಾರ್ ಆಟಗಾರ ಮೋನು ಗೋಯಾಟ್ ಒಟ್ಟು 7 ಅಂಕಗಳನ್ನು ಸಂಪಾದಿಸುವ ಮೂಲಕ ತಂಡಕ್ಕೆ ಮುನ್ನಡೆ ಕೊಟ್ಟರು.
ಇನ್ನೊಬ್ಬ ಆಟಗಾರ ತಂಡದ ನಾಯಕರೂ ಆದ ಅಜಯ್ ಠಾಕೂರ್ ಹಾಗೂ ರಿಶಾಂಕ್ ದೇವಾಡಿಗ ಕೂಡ ತಲಾ ಆರು ಅಂಕಗಳ ಕೊಡುಗೆ ಮೂಲಕ ತಂಡದ ಗೆಲುವಿಗೆ ಕಾರಣರಾದರು. ಇದೇ ಟೂರ್ನಮೆಂಟ್ ನ ಇನ್ನೊಂದು ಪಂದ್ಯದಲ್ಲಿ ಇರಾನ್ ಕೂಡ ಸೆಮಿಫೈನಲ್ ಗೆ ಪ್ರವೇಶಿಸಿದೆ.
Story first published: Tuesday, June 26, 2018, 16:11 [IST]
Other articles published on Jun 26, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications