ಸತತ 7ನೇ ಚಿನ್ನದ ಬೇಟೆಯಲ್ಲಿ ಕಬಡ್ಡಿ ಕಲಿಗಳು
ನವದೆಹಲಿ, ಸೆ.6: ಈ ತಿಂಗಳಾಂತ್ಯದಲ್ಲಿ ದಕ್ಷಿಣ ಕೊರಿಯಾದಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್‌ಗೆ ಅಮೆಚೂರ್ ಕಬಡ್ಡಿ ಫೆಡರೇಶನ್ ಭಾರತೀಯ ಪುರುಷರ ಹಾಗೂ ಮಹಿಳಾ ಕಬಡ್ಡಿ ತಂಡವನ್ನು ಪ್ರಕಟಿಸಿದೆ. ಭಾರತ ಹಾಗೂ ಪಾಕಿಸ್ತಾನದ ಪುರುಷರ ತಂಡ ಒಂದೇ ಗುಂಪಿನಲ್ಲಿದ್ದು, ರೋಚಕ ಹಣಾಹಣಿ ನಿರೀಕ್ಷೆಯಿದೆ. ಸತತ ಏಳನೇ ಚಿನ್ನದ ಪದಕ ಗೆಲ್ಲುವ ಹುಮ್ಮಸ್ಸಿನಲ್ಲಿ ರಾಕೇಶ್ ಕುಮಾರ್ ತಂಡ ತೆರಳಲಿದೆ.
ಪುರುಷರ ತಂಡವನ್ನು ರಾಕೇಶ್ ಕುಮಾರ್ ಮುನ್ನಡೆಸಲಿದ್ದು, ನವನೀತ್ ಗೌತಮ್ ಹಾಗೂ ಜಸ್ವೀರ್ ಸಿಂಗ್ ಪ್ರಮುಖ ಆಟಗಾರರಾಗಿದ್ದಾರೆ. ಇತ್ತೀಚೆಗೆ ಮುಕ್ತಾಯವಾದ ಪ್ರೊ ಕಬಡ್ಡಿ ಲೀಗ್ ನಲ್ಲಿ ಕಪ್ ಎತ್ತಿದ ಜೈಪುರ ತಂಡ ರನ್ನರ್ ಅಪ್ ಆದ ಮುಂಬೈ ಹಾಗೂ ಬೆಂಗಳೂರು ತಂಡದ ಆಟಗಾರರು ತಮ್ಮ ಅದ್ಭುತ ಪ್ರದರ್ಶನ ಮೂಲಕ ಭಾರತ ತಂಡದಲ್ಲಿ ಸ್ಥಾನಗಿಟ್ಟಿಸಿಕೊಂಡಿದ್ದಾರೆ. ಆದರೆ, ಸುರೇಂದರ್ ನಾಡಾ, ಧರ್ಮರಾಜ್ ಚೇರ್ಲಥಾನ್ ಅವರು ತಂಡಕ್ಕೆ ಸೇರುವಲ್ಲಿ ವಿಫಲವಾಗಿದ್ದಾರೆ. [ಮುಂಬೈ ಮಣಿಸಿ ಕಪ್ ಎತ್ತಿದ ಜೈಪುರ]
ಭಾರತ ಎ ಗುಂಪಿನಲ್ಲಿದ್ದು, ಬಾಂಗ್ಲಾದೇಶ, ಪಾಕಿಸ್ತಾನ ಹಾಗೂ ಥೈಲ್ಯಾಂಡ್ ಇನ್ನಿತರ ತಂಡಗಳಾಗಿವೆ. ಕಬಡ್ಡಿ ಪಂದ್ಯಗಳು ಸೆ.28ರಂದು ದಕ್ಷಿಣ ಕೊರಿಯಾದ ಸೊಂಗ್ದಾ ಗ್ಲೋಬಲ್ ಯೂನಿರ್ವಸಿಟಿ ಜಿಮ್ನಾಶಿಯಂನಲ್ಲಿ ನಡೆಯಲಿದೆ.

ಕರ್ನಾಟಕದ ಮಮತಾ ಪೂಜಾರಿ ಮಹಿಳಾ ಕಬಡ್ಡಿ ತಂಡವನ್ನು ಮುನ್ನಡೆಸಲಿದ್ದಾರೆ. ಇತ್ತೀಚೆಗಷ್ಟೇ ವಿವಾಹವಾಗಿರುವ ಮಮತಾ ಅವರು ಕಬಡ್ಡಿ ವಿಶ್ವ ಚಾಂಪಿಯನ್ ತಂಡವನ್ನು ಮತ್ತೆ ಮುನ್ನಡೆಸಲು ಸಜ್ಜಾಗಿದ್ದಾರೆ.[ಚೀನಾದಲ್ಲಿ ಚಿನ್ನ ಗೆದ್ದ ಕನ್ನಡತಿ ಮಮತಾ ಪೂಜಾರಿ]
ಕಬಡ್ಡಿ ಆಟಗಾರರ ಪೂರ್ವ ತಯಾರಿ ಶಿಬಿರ ಶುಕ್ರವಾರದಿಂದ ಆರಂಭವಾಗಿದೆ. ಮಹಿಳಾ ತಂಡ ಕೂಡಾ ಕಳೆದ ಬಾರಿ ಚೀನಾದಲ್ಲಿ ನಡೆದ ಏಷ್ಯನ್ ಗೇಮ್ಸ್ ನಲ್ಲಿ ಚಿನ್ನದ ಪದಕ ಗೆದ್ದ ಸಾಧನೆಯೊಂದಿಗೆ ಅಖಾಡಕ್ಕಿಳಿಯಲಿದೆ. ಭಾರತದ ಮಹಿಳಾ ತಂಡ ಎ ಗುಂಪಿನಲ್ಲಿ ಬಾಂಗ್ಲಾದೇಶ ಹಾಗೂ ಅತಿಥೇಯ ದಕ್ಷಿಣ ಕೊರಿಯಾ ಜೊತೆ ಸೆಣಸಲಿದೆ.
ಪುರುಷರ ತಂಡದ ವೇಳಾಪಟ್ಟಿ:
ಸೆ.28: vs ಬಾಂಗ್ಲಾದೇಶ
ಸೆ.29: ಥೈಲ್ಯಾಂಡ್
ಸೆ.30: vs ಪಾಕಿಸ್ತಾನ
ಬಿ ಗುಂಪಿನಲ್ಲಿ ದಕ್ಷಿಣ ಕೊರಿಯಾ, ಇರಾನ್, ಜಪಾನ್, ಮಲೇಶಿಯಾ ತಂಡಗಳಿವೆ
ಮಹಿಳಾ ತಂಡದ ವೇಳಾಪಟ್ಟಿ:
ಸೆ.28: ಬಾಂಗ್ಲಾದೇಶ
ಸೆ.30: ದಕ್ಷಿಣ ಕೊರಿಯಾ
ಬಿ ಗುಂಪಿನಲ್ಲಿ ಥೈಲ್ಯಾಂಡ್, ಇರಾನ್, ಜಪಾನ್ ಹಾಗೂ ಚೈನೀಸ್ ತೈಪೆ.
ಸೆಮಿಫೈನಲ್ ಪಂದ್ಯಗಳು ಅಕ್ಟೋಬರ್ 2 ರಂದು ನಡೆಯಲಿದ್ದು, ಮರುದಿನ ಫೈನಲ್ ನಡೆಯಲಿದೆ. 17ನೇ ಏಷ್ಯನ್ ಗೇಮ್ಸ್ ಪಂದ್ಯಾವಳಿಗಳು ಸೆ.19ರಿಂದ ಅಕ್ಟೋಬರ್ 4ರ ತನಕ ನಡೆಯಲಿದೆ.
ಪುರುಷರ ತಂಡ: ರಾಕೇಶ್ ಕುಮಾರ್ (ನಾಯಕ), ಸುರ್ಜೀತ್ ಸಿಂಗ್, ನವನೀತ್ ಗೌತಮ್, ಅಜಯ್ ಥಾಕುರ್, ಜಸ್ವೀರ್ ಸಿಂಗ್, ಅನೂಪ್, ಗುರುಪ್ರೀತ್, ರಾಜ್‌ಗುರು, ನಿತಿನ್ ಮಡ್ನೆ, ಸುರ್ಜೀತ್, ಪ್ರವೀಣ್, ಮಂಜೀತ್ ಚಿಲ್ಲಾರ್.
ಮಹಿಳಾ ತಂಡ: ಮಮತಾ ಪೂಜಾರಿ(ನಾಯಕಿ), ತೇಜೇಶ್ವರಿ ಬಾಯಿ, ಪ್ರಿಯಾಂಕಾ, ಅಭಿಲಾಷಾ ಮ್ಹಾತ್ರೆ, ಸುಮಿತ್ರಾ ಶರ್ಮ, ಜಯಂತಿ, ಕವಿತಾ, ಕವಿತಾದೇವಿ, ಅನಿತಾ ಮಾವಿ, ಕಿಶೋರಿ ಶಿಂಧೆ, ಪೂಜಾ ಥಾಕುರ್, ಸುಶ್ಮಿತಾ ಪೊವಾರ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications