For Quick Alerts
ALLOW NOTIFICATIONS  
For Daily Alerts

ಕಬಡ್ಡಿ ಮಾಸ್ಟರ್ಸ್: ಭಾರತ-ಇರಾನ್ ಸೆಣಸಾಟ ಇಂದು

kabaddi masters: india will face iran in the finals

ದುಬೈ, ಜೂನ್ 30: ಟೂರ್ನಿಯುದ್ದಕ್ಕೂ ಅದ್ಭುತ ಪ್ರದರ್ಶನ ನೀಡಿರುವ ಭಾರತದ ಪುರುಷರ ಕಬಡ್ಡಿ ತಂಡ 'ಕಬಡ್ಡಿ ಮಾಸ್ಟರ್ಸ್' ಎನಿಸಿಕೊಳ್ಳಲು ಇನ್ನು ಒಂದು ಹೆಜ್ಜೆ ಮಾತ್ರ ಬಾಕಿ ಇದೆ.

ದುಬೈನಲ್ಲಿ ನಡೆಯುತ್ತಿರುವ 'ಕಬಡ್ಡಿ ಮಾಸ್ಟರ್ಸ್' ಟೂರ್ನಿಯಲ್ಲಿ ದಕ್ಷಿಣ ಕೊರಿಯಾ ತಂಡವನ್ನು ಮಣಿಸುವ ಮೂಲಕ ಭಾರತ ಅಂತಿಮ ಘಟ್ಟ ತಲುಪಿದೆ.

ಇನ್ನೊಂದು ಪಂದ್ಯದಲ್ಲಿ ಪಾಕಿಸ್ತಾನವನ್ನು ಸೋಲಿಸಿರುವ ಬಲಿಷ್ಠ ಇರಾನ್ ಪಡೆ ಕೂಡ ಫೈನಲ್ ತಲುಪಿದೆ. ಶನಿವಾರ ನಡೆಯಲಿರುವ ಪಂದ್ಯದಲ್ಲಿ ಉಭಯ ತಂಡಗಳು ಟ್ರೋಫಿಗಾಗಿ ಸೆಣಸಾಡಲಿವೆ.

ಶನಿವಾರ ನಡೆದ ಸೆಮಿಫೈನಲ್ಸ್‌ನಲ್ಲಿ ಅಜಯ್ ಠಾಕೂರ್ ನೇತೃತ್ವದ ಭಾರತ ತಂಡ ದಕ್ಷಿಣ ಕೊರಿಯಾವನ್ನು 36-20 ಅಂಕಗಳಿಂದ ಸೋಲಿಸಿತು.

kabaddi masters: india will face iran in the finals

ಇದುವರೆಗಿನ ಎಲ್ಲ ಪಂದ್ಯಗಳಲ್ಲಿಯೂ ಸುಲಭ ಗೆಲುವು ದಾಖಲಿಸಿದ್ದ ಭಾರತ ತಂಡ, ಮೊದಲ ಬಾರಿಗೆ ಸೆಮಿಫೈನಲ್‌ನಲ್ಲಿ ತುಸು ಒತ್ತಡಕ್ಕೆ ಒಳಗಾಯಿತು. ಇದರಿಂದ ಕೋಚ್ ಶ್ರೀನಿವಾಸ್ ರೆಡ್ಡಿ ವಿಭಿನ್ನ ತಂತ್ರ ರೂಪಿಸಬೇಕಾಯಿತು.

ಆರಂಭದಲ್ಲಿ ಉತ್ತಮ ರೈಡಿಂಗ್ ನಡೆಸಿದ ದಕ್ಷಿಣ ಕೊರಿಯಾ ಆಟಗಾರರು ಭಾರತದ ಡಿಫೆಂಡರ್‌ಗಳ ಮೇಲೆ ಒತ್ತಡ ಹೇರಿದರು. ಆಟದ ಎಂಟನೇ ನಿಮಿಷದ ವೇಳೆಗೆ ದಕ್ಷಿಣ ಕೊರಿಯಾ ಸ್ಟಾರ್ ರೈಡರ್ ಜಾಂಗ್ ಜುನ್ ಲೀ ಅವರ ಚಾಕಚಕ್ಯತೆಯಿಂದ 7-3ರ ಮುನ್ನಡೆ ಪಡೆದುಕೊಂಡಿತ್ತು.

ಕೊರಿಯನ್ನರ ಮೇಲೆ ಮೇಲುಗೈ ಸಾಧಿಸಲು ಭಾರತದ ರೈಡರ್‌ಗಳು ಮತ್ತು ಡಿಫೆಂಡರ್‌ಗಳು ಕಠಿಣ ಪ್ರಯತ್ನ ನಡೆಸಿದರೂ ಪ್ರಯೋಜನವಾಗಲಿಲ್ಲ. ಕೊನೆಗೆ ಕೋಚ್ ಶ್ರೀನಿವಾಸ್ ರೆಡ್ಡಿ, ಬದಲಿ ಆಟಗಾರ, ರೈಡರ್ ಮೋನು ಗೊಯಟ್ ಅವರನ್ನು ಕರೆತಂದರು.

ಠಾಕೂರ್ ಎರಡು ಖಾಲಿ ರೈಡ್‌ ಮುಗಿಸಿದ ಬಳಿಕ ಡಿಫೆಂಡರ್ ಮೋಹಿತ್ ಚಿಲ್ಲರ್, ಅದ್ಭುತವಾದ ಪಟ್ಟು ಹಾಕುವ ಮೂಲಕ 11ನೇ ನಿಮಿಷದಲ್ಲಿ 7-7ರ ಸಮಬಲ ಸಾಧಿಸಲು ಕಾರಣರಾದರು.

kabaddi masters: india will face iran in the finals

ಗೋಯಟ್ ಮಹತ್ವದ ಒಂದು ಅಂಕವನ್ನು ತಂದುಕೊಡುವಲ್ಲಿ ಯಶಸ್ವಿಯಾದರು. ಅದರ ಬೆನ್ನಲ್ಲೇ ಠಾಕೂರ್ ಆಲ್‌ಔಟ್ ಮಾಡುವ ಮೂಲಕ 13-8ರ ಮುನ್ನಡೆ ತಂದುಕೊಟ್ಟರು.

ಮೊದಲಾರ್ಧದ ಕೊನೆಯ ಐದು ನಿಮಿಷಗಳಲ್ಲಿ ಗೋಯಟ್ ಹಾಗೂ ಠಾಕೂರ್ ಕೆಲವು ಪಾಯಿಂಟ್‌ಗಳನ್ನು ಗಳಿಸಿ ಏಳು ಅಂಕಗಳ ಮುನ್ನಡೆ ನೀಡಿದರು.

ದ್ವಿತೀಯಾರ್ಧದ ಆರಂಭದಲ್ಲಿ ಭಾರತ ಆಕ್ರಮಣಕಾರಿ ಆಟ ಪ್ರದರ್ಶಿಸಿತು. ದಕ್ಷಿಣ ಕೊರಿಯಾದ ಪ್ರಮುಖ ಆಟಗಾರ ಜಾಂಗ್ ಜುನ್ ಲೀ ಅವರನ್ನು ಏಕಾಂಗಿಯಾಗಿ ಹಿಡಿಯುವ ಮೂಲಕ ಗಿರೀಶ್ ಎದುರಾಳಿಗಳ ಬಲ ಕುಗ್ಗಿಸಿದರು.

24ನೇ ನಿಮಿಷದ ವೇಳೆಗೆ ಸ್ಕೋರ್‌ಬೋರ್ಡ್‌ನಲ್ಲಿ 24-11ರ ಮುನ್ನಡೆ ದಾಖಲಾಗುವಂತೆ ಮಾಡಿದ ಠಾಕೂರ್, ದ, ಕೊರಿಯಾದ ಮೇಲೆ ಸವಾರಿ ನಡೆಸಿದರು.

ಭಾರತಕ್ಕೆ ತಿರುಗೇಟು ನೀಡಲು ಪ್ರಯತ್ನಿಸಿದ ಕೊರಿಯಾ, ಭಾರತವು ಚಿಲ್ಲರ್, ಮಾರುತಿ ಮತ್ತು ಠಾಕೂರ್ ಮೂವರೇ ಉಳಿಯುವಂತೆ ಮಾಡಿತು. ಆದರೆ ಠಾಕೂರ್ ಅನುಭವ ಭಾರತದ ಪ್ರಾಬಲ್ಯವನ್ನು ಮರಳಿ ಪಡೆಯುವಂತೆ ಮಾಡಿತು. ಕೊನೆಯ ಐದು ನಿಮಿಷಗಳಲ್ಲಿ ರಕ್ಷಣಾತ್ಮಕ ಆಟ ಪ್ರದರ್ಶಿಸಿದ ಠಾಕೂರ್ ಬಳಗ, ಎದುರಾಳಿಗಳಿಗೆ ಯಾವುದೇ ಅಂಕ ಪಡೆದುಕೊಳ್ಳಲು ಅವಕಾಶ ನೀಡಲಿಲ್ಲ.

ಇನ್ನೊಂದು ಪಂದ್ಯದಲ್ಲಿ, ಪಾಕಿಸ್ತಾನದ ವಿರುದ್ಧ ಆಕ್ರಮಣಾಕಾರಿ ಆಟ ಪ್ರದರ್ಶಿಸಿದ ಇರಾನ್ ಫೈನಲ್‌ಗೆ ಲಗ್ಗೆ ಇಟ್ಟಿತು.

ಪ್ರಮುಖ ತಾರಾ ಆಟಗಾರರ ಅನುಪಸ್ಥಿತಿಯಲ್ಲಿ ಆಡುತ್ತಿರುವ ಇರಾನ್, ಪಾಕಿಸ್ತಾನದ ವಿರುದ್ಧ 40-21ರ ಗೆಲುವು ಸಾಧಿಸಿತು.

ಫೈನಲ್ ಪಂದ್ಯದ ವಿವರ
ತಂಡಗಳು: ಭಾರತ-ಇರಾನ್
ಸಮಯ: ಶನಿವಾರ, ಜೂನ್ 30. ಸಂಜೆ 7.30
ಸ್ಥಳ: ಅಲ್ ವಾಸ್ಲ್ ಸ್ಪೋರ್ಟ್ಸ್ ಕ್ಲಬ್, ದುಬೈ
ನೇರಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ ನೆಟ್‌ವರ್ಕ್, ಸ್ಟಾರ್‌ ಸ್ಪೋರ್ಟ್ಸ್ 1, ಸ್ಟಾರ್‌ ಸ್ಪೋರ್ಟ್ಸ್ 1 ಎಚ್‌ಡಿ, ಸ್ಟಾರ್‌ ಸ್ಪೋರ್ಟ್ಸ್ 1 ಹಿಂದಿ ಮತ್ತು ತಮಿಳು, ಸ್ಟಾರ್‌ ಸ್ಪೋರ್ಟ್ಸ್ 2 ಮತ್ತು ಸ್ಟಾರ್‌ ಸ್ಪೋರ್ಟ್ಸ್ 2 ಎಚ್‌ಡಿ. ಹಾಟ್‌ಸ್ಟಾರ್ ಮತ್ತು ಜಿಯೊ ಟಿವಿ ಆಪ್.

Story first published: Saturday, June 30, 2018, 12:53 [IST]
Other articles published on Jun 30, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+