Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ರೋಚಕ ಪಂದ್ಯದಲ್ಲಿ ತಲೈವಾಸ್‌ಗೆ ತಲೆಬಾಗುವಂತೆ ಮಾಡಿದ ದಬಾಂಗ್‌ ಡೆಲ್ಲಿ

Dabang Delhi victorious against Tamil Thalaivas

ಹೈದರಾಬಾದ್‌, ಜುಲೈ 25: ವಿಜಯ ಲಕ್ಷ್ಮಿ ಚಂಚಲೆಯಂತೆ ಅತ್ತಿಂದಿತ್ತ ಕುಣಿಯುತ್ತಿದ್ದ ಅತ್ಯಂತ ರೋಚಕ ಪಂದ್ಯದಲ್ಲಿ ಆರಂಭಿಕ ಹಿನ್ನಡೆಯನ್ನು ಬದಿಗೊತ್ತಿದ ದಬಾಂಗ್‌ ಡೆಲ್ಲಿ ತಂಡ, ಪ್ರೊ ಕಬಡ್ಡಿ ಲೀಗ್‌ನ 7ನೇ ಆವೃತ್ತಿಯ ಟೂರ್ನಿಯ ಲೀಗ್‌ ಪಂದ್ಯದಲ್ಲಿ ಬಲಿಷ್ಠ ತಮಿಳ್‌ ತಲೈವಾಸ್‌ಗೆ ಒಂದಂಕದಿಂದ ಸೋಲುಣಿಸಿತು.

ಪ್ರೊ ಕಬಡ್ಡಿ 2019: ವೇಳಾಪಟ್ಟಿ, ಫಲಿತಾಂಶಗಳ ಸಂಪೂರ್ಣ ವಿವರ

ಇಲ್ಲಿನ ಗಚ್ಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ದಬಾಂಗ್‌ ಡೆಲ್ಲಿ ತಂಡ ಹಾಫ್‌ ಟೈಮ್‌ ಹೊತ್ತಿಗೆ 11-18 ಅಂಕಗಳಿಂದ ಹಿನ್ನಡೆ ಅನುಭವಿಸಿತ್ತು. ಆದರೆ, ದ್ವಿತೀಯಾರ್ಧದಲ್ಲಿ ಅದ್ಭುತ ಆಟವಾಡಿ 30-29 ಅಂಕಗಳಿಂದ ತಲೈವಾಸ್‌ಗೆ ತಲೆಬಾಗುವಂತೆ ಮಾಡಿತು.

ಸ್ಟಾರ್‌ ಆಟಗಾರರ ದಂಡನ್ನೇ ಹೊಂದಿರುವ ತಮಿಳ್‌ ತಲೈವಾಸ್‌ ತಂಡದ ಪರ ರಾಹುಲ್‌ ಚೌಧರಿ (7), ಅಜಯ್ ಠಾಕೂರ್‌ (5) ಮತ್ತು ಮಂಜೀತ್‌ ಚಿಲ್ಲಾರ್‌ (5) ಅಂಕಗಳನ್ನು ಗಳಿಸಿದರಾದರೂ, ಪಂದ್ಯದ ಅಂತಿಮ ಕ್ಷಣಗಳಲ್ಲಿ ಒತ್ತಡ ನಿಭಾಯಿಸುವಲ್ಲಿ ವಿಫಲಗೊಂಡ ಪರಿಣಾಮ ಕೇವಲ 1 ಅಂಕದ ಅಂತರದಲ್ಲಿ ಸೋತು ನಿರಾಸೆ ಅನುಭವಿಸುವಂತಾಯಿತು.

ಮತ್ತೊಂದೆಡೆ ಅಚ್ಚರಿಯ ಪ್ರದರ್ಶನ ನೀಡಿದ ಇರಾನ್‌ನ ಆಟಗಾರ ಮೆರಾಜ್‌ ಖೇಖ್‌ ಅವರ ಸಾರಥ್ಯದ ಡೆಲ್ಲಿ ತಂಡದ ಪರ ಯುವ ಹಾಗೂ ಪ್ರತಿಭಾನ್ವಿತ ರೇಡರ್‌ ನವೀನ್‌ ಕುಮಾರ್‌ 8 ಅಂಕಗಳನ್ನು ಗಳಿಸಿದರೆ, ಅವರಿಗೆ ಮೆರಾಜ್‌ ಶೇಖ್‌ (6) ಉತ್ತಮ ಸಾಥ್ ನೀಡಿದರು. ಡಿಫೆನ್ಸ್‌ನಲ್ಲಿ ಜೋಗಿಂದರ್‌ ನರ್ವಾಲ್‌ 4 ಅಂಕಗಳನ್ನು ತಂದುಕೊಟ್ಟರು.

ಇದಕ್ಕೂ ಮುನ್ನ ಬುಧವಾರ ನಡೆದ ಪಂದ್ಯದಲ್ಲೂ ದಬಾಂಗ್‌ ಡೆಲ್ಲಿ ತಂಡ ಆತಿಥೇಯ ತೆಲುಗು ಟೈಟನ್ಸ್‌ ತಂಡವನ್ನೂ 34-33 ಅಂಕಗಳಿಂದ ಕೂದಲೆಳೆಯ ಅಂತರದಲ್ಲಿ ಮಣಿಸಿತ್ತು. ಇದೀಗ ಸತತ ಎರಡನೇ ಬಾರಿ ಕೇವಲ 1 ಅಂಕಗಳಿಂದ ಗೆದ್ದು ನಿಟ್ಟುಸಿರುಬಿಟ್ಟಿದೆ. ಬುಧವಾರ ನಡೆದ ಮತ್ತೊಂದು ಪಂದ್ಯದಲ್ಲಿ ಬೆಂಗಾಲ್‌ ವಾರಿಯರ್ಸ್‌ ತಂಡ 48-17 ಅಂಕಗಳಿಂದ ಯುಪಿ ಯೋಧಾ ಪಡೆಯನ್ನು ಸುಲಭವಾಗಿ ಬಗ್ಗುಬಡಿದಿತ್ತು.

ಶುಕ್ರವಾರ ಎರಡು ಪಂದ್ಯಗಳು ನಡೆಯಲಿದ್ದು, ಮೊದಲ ಪಂದ್ಯದಲ್ಲಿ ಯುಪಿ ಯೋಧಾ ಮತ್ತು ಗುಜರಾತ್‌ ಫಾರ್ಚೂನ್‌ ಜಯಂಟ್ಸ್‌ ಹಾಗೂ ಎರಡನೇ ಪಂದ್ಯದಲ್ಲಿ ಪಟನಾ ಪೈರೇಟ್ಸ್‌ ತಂಡಗಳು ಪೈಪೋಟಿ ನಡೆಸಲಿವೆ.

Story first published: Thursday, July 25, 2019, 21:34 [IST]
Other articles published on Jul 25, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+